ETV Bharat / state

ಆಸ್ಪತ್ರೆಯ ನೆಲದ ಮೇಲೆ ಬೆತ್ತಲಾಗಿ ಒದ್ದಾಡುತ್ತಿದ್ದ ಸೋಂಕಿತ ವೃದ್ಧ ಸಾವು - Belagavi District covid Hospital

ಹಾಸಿಗೆಗಳ​​ ಕೊರತೆಯಿಂದಾಗಿ ಆಸ್ಪತ್ರೆಯ ನೆಲದ ಮೇಲೆ ಬೆತ್ತಲೆಯಾಗಿ ಒದ್ದಾಡುತ್ತಿದ್ದ ಕೊರೊನಾ ಸೋಂಕಿತ ವೃದ್ಧ ಸಾವಿಗೀಡಾಗಿರುವ ಘಟನೆ ಬೆಳಗಾವಿಯ ಬೀಮ್ಸ್​​​​ನಲ್ಲಿ ನಡೆದಿದೆ.

A corona infected old age person died in a hospital from lack of hospitality
ಆಸ್ಪತ್ರೆಯ ನೆಲದ ಮೇಲೆ ಬೆತ್ತಲಾಗಿ ಒದ್ದಾಡುತ್ತಿದ್ದ ಸೋಂಕಿತ ವೃದ್ಧ ಚಿಕಿತ್ಸೆ ಫಲಿಸದೆ ಸಾವು
author img

By

Published : Jul 17, 2020, 3:12 PM IST

ಬೆಳಗಾವಿ: ಕೋವಿಡ್​ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ರೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ ನಿವಾಸಿ 65 ವರ್ಷದ ವೃದ್ಧ ಸಾವನ್ನಪ್ಪಿರುವವರು.

ಆಸ್ಪತ್ರೆಯಲ್ಲಿ ಹಾಸಿಗೆಗಳ​​ ಕೊರತೆ ಉಂಟಾಗಿದ್ದ ಕಾರಣ ಸೋಂಕಿತ ನೆಲದ ಮೇಲೆಯೇ ಬಿದ್ದು ಒದ್ದಾಡುತ್ತಿದ್ದರು. ಆದರೂ ಯಾವೊಬ್ಬ ವೈದ್ಯರೂ ಕೂಡ ವೃದ್ಧನ ನೆರವಿಗೆ ಬಂದಿರಲಿಲ್ಲ. ವೃದ್ಧನ ನರಳಾಟದ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ: ವೃದ್ಧ ಬೆತ್ತಲಾಗಿ ನರಳಾಡಿದರೂ ಕನಿಕರ ತೋರದ ವೈದ್ಯರು: ಡಿಸಿಎಂ ತವರಲ್ಲೇ ಅಮಾನವೀಯ ಘಟನೆ

ಬೀಮ್ಸ್ ಸಿಬ್ಬಂದಿ ಇಂದು ಬೆಳಗ್ಗೆ ವೃದ್ಧನ ಮೊಮ್ಮಗನಿಗೆ ಕರೆ ಮಾಡಿ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ. ಮೃತನ ಸಂಬಂಧಿಕರು ಸದ್ಯ ಅಥಣಿಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.