ETV Bharat / state

ದ್ವಿಚಕ್ರ ವಾಹನ, ಬೊಲೆರೋ ನಡುವೆ  ಡಿಕ್ಕಿ: ಯೋಧ ಸಾವು..! - soldier death chikkodi news

ದ್ವಿಚಕ್ರ ವಾಹನ ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದ ಪರಿಣಾಮ ಬಾವನಸೌಂದತ್ತಿ ಗ್ರಾಮದ ಯೋಧನೊಬ್ಬ ಮೃತಪಟ್ಟಿದ್ದಾನೆ.

soldier  death
ಯೋಧ ಸಾವು
author img

By

Published : May 6, 2020, 1:08 PM IST

ಚಿಕ್ಕೋಡಿ: ದ್ವಿಚಕ್ರ ವಾಹನ ಹಾಗೂ ಬೊಲೆರೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯೋಧ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಹಾಗೂ ಅಂಕಲಿ ಗ್ರಾಮದ‌ ಮಧ್ಯೆ ನಡೆದಿದೆ.

ಬಾವನಸೌಂದತ್ತಿ ಗ್ರಾಮದ ಯೋಧ ಅಜೀತ್​​ ಬಂಡು ಕೊರವಿ(28) ಮೃತ ವ್ಯಕ್ತಿಯಾಗಿದ್ದು, ಪ್ರದೀಪ್​​ ಕೊರವಿ ಎಂಬಾತ ಗಾಯಗೊಂಡಿದ್ದಾನೆ. ಇವರು ದ್ವಿಚಕ್ರ ವಾಹನದ ಮೇಲೆ ಬಾವನ ಸೌಂದತ್ತಿ ಗ್ರಾಮದಿಂದ ಅಂಕಲಿ ಗ್ರಾಮದ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ವಾಹನಗಳು ಮುಖಾಮುಕಿ ಡಿಕ್ಕಿಯಾಗಿದ್ದರಿಂದ ಈ ಅಪಘಾತ ಸಂಭವಿಸಿದೆ.

ಇನ್ನು ಯೋಧ ಅಜೀತ್​ ಅವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಬೊಲೆರೋ ವಾಹನ ವಶಪಡಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.