ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಸಂಬರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಾಂವಶಿ ಗ್ರಾಮದ ಬಂಗಾರೆವ್ವಾ ನಿವೃತ್ತಿ ಐಹೊಳೆ ಅವರು ತಮ್ಮ 76ನೇ ವಯಸ್ಸಿನಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯಾಗುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಂಬರಗಿ ಗ್ರಾಮ ಪಂಚಾಯತ್ಗೆ ಸತತ ನಾಲ್ಕನೇ ಬಾರಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಗ್ರಾಮದ ಅಭಿವೃದ್ಧಿ ಕಾರ್ಯಗಳಾದ ಮನೆ ಮನೆಗೆ ನೀರಿನ ಸೌಲಭ್ಯ, ಶೌಚಾಲಯ, ಸಮುದಾಯ ಮಂದಿರ ದುರಸ್ಥಿ, ದೇವಸ್ಥಾನ ಕಟ್ಟಡ, ವಾರ್ಡ್ಗಳಲ್ಲಿ ಸಿಸಿ ರಸ್ತೆ ಹೀಗೆ ಹಲವಾರು ಕಾಮಗಾರಿ ಕೈಗೊಂಡು ಗ್ರಾಮವನ್ನು ಅಭಿವೃದ್ಧಿ ಮಾಡಿ ಆದರ್ಶ ಗ್ರಾಮ ನಿರ್ಮಾಣ ಮಾಡಿದ್ದಾರೆ. ಜನತೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸತತವಾಗಿ 4ನೇ ಬಾರಿಯೂ ಆಯ್ಕೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಸವದಿ ಸಮ್ಮುಖದಲ್ಲಿ ಬಿಜೆಪಿ ಸೇರಿದ ಅಥಣಿ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ
ಇನ್ನು, ಬಂಗಾರೆವ್ವಾ ಅವರ ಸೊಸೆ ಆಶಾ ಐಹೊಳೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರ ರಾವಸಾಬ ಐಹೊಳೆ ಅಥಣಿ ಪುರಸಭೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.