ಚಿಕ್ಕೋಡಿ: ಪ್ರವಾಹಕ್ಕೆ ತುತ್ತಾಗಿ ಅಡಗಿ ಕುಳಿತಿದ್ದ ವಿಷ ಜಂತುಗಳು ಈಗ ಪ್ರತ್ಯಕ್ಷವಾಗುವುದು ಸಾಮಾನ್ಯ. ಇಂತಹದೊಂದು ಘಟನೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಪಂಚಾಯತಿ ಕಚೇರಿಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಪ್ರತೀ ಮನೆ, ಸರ್ಕಾರಿ ಕಚೇರಿಗಳಲ್ಲಿ ಹಾವುಗಳು ಕಾಣ ಸಿಗುತ್ತಿದೆ. ಅಂತೆಯೇ ಇಲ್ಲಿನ ಯಡೂರ ಗ್ರಾಪಂ ಪಂಚಾಯತಿಯ ಸಿಬ್ಬಂದಿ ಬಾಬು ಕಾಂಬಳೆ ಎಂಬವರು ಕಚೇರಿಯಲ್ಲಿ ದಾಖಲಾತಿಯ ಪರಿಶೀಲನೆ ಮಾಡುತ್ತಿದ್ದಾಗ ಹಾವು ಕಂಡುಬಂದಿದೆ.
ಗಾಬರಿಗೊಂಡ ಅವರು ಅಲ್ಲಿನ ಇತರ ಸಿಬ್ಬಂದಿಗೆ ಈ ವಿಷಯವನ್ನು ತಿಳಿಸಿದ್ದು, ಕೂಡಲೇ ಉರಗ ತಜ್ಞರನ್ನು ಕರೆಸಿ ಹಾವುನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ.