ETV Bharat / state

ಶ್ರೀಮಂತರು ಬಿಪಿಎಲ್​​ ಕಾರ್ಡ್​ ಪಡೆದಿದ್ದಾರೆಯೇ...? ಮಾಹಿತಿ ನೀಡಿ ಬಹುಮಾನ ಗೆಲ್ಲಿ - ಶ್ರೀಮಂತರು ಪಡೆದಿರುವ

ಬಿಪಿಎಲ್​​ ಕಾರ್ಡ್​ಅನ್ನು ಶ್ರೀಮಂತರು ಪಡೆದಿರುವ ಬಗ್ಗೆ ಮಾಹಿತಿ ನೀಡಿದರೆ 400 ರೂ. ಬಹುಮಾನ ಗೆಲ್ಲಬಹುದು.

ಬಹುಮಾನ ಪಡೆಯಿರಿ
author img

By

Published : Sep 19, 2019, 12:48 PM IST

ಅಥಣಿ: ಬಡವರಿಗಾಗಿ ನೀಡಲಾಗುವ ಬಿಪಿಎಲ್​​ ಕಾರ್ಡ್​​ಗಳನ್ನು ಶ್ರೀಮಂತರು ಕೂಡ ಅಕ್ರಮವಾಗಿ ಪಡೆಯುತ್ತಿರುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಅಂಥವರ ಮಾಹಿತಿ ನೀಡಿದವರಿಗೆ 400 ರೂ. ಬಹುಮಾನ ನೀಡುವುದಾಗಿ ಇಲಾಖೆ ತಿಳಿಸಿದೆ.

ಆದಾಯ ತೆರಿಗೆ ಪಾವತಿಸುತ್ತಿರುವವರು, ಸರ್ಕಾರಿ ನೌಕರರು, ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮುಂತಾದ ಆರ್ಥಿಕಾಗಿ ಸದೃಢವಾಗಿರುವವರು ಬಿಪಿಎಲ್​ ಕಾರ್ಡ್​ ಪಡೆದಿದ್ದರೆ ಕೂಡಲೇ 1967 ಅಥವಾ 18004259339 ನಂಬರ್​ಗೆ ಕರೆ ಮಾಡಿ ತಿಳಿಸಬಹುದು.

ಶ್ರೀಮಂತರು ಬಿಪಿಎಲ್​ ಕಾರ್ಡ್ ಪಡೆದಿದ್ದರೆ ಅದನ್ನು ಮರಳಿಸಲು ಸೆ. 30 ಕಡೆ ದಿನವಾಗಿರುತ್ತದೆ. ಗಡುವಿನೊಳಗೆ ವಾಪಾಸ್ ನೀಡಿದಿದ್ದರೆ ಪಡಿತರ ಚೀಟಿ ಕಾಯ್ದೆ 1977ರ ಅನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.

Intro:ಸರ್ಕಾರದ ಆಫರ್ : ಬಿಪಿಎಲ್' ಸಿರಿವಂತರ ಪತ್ತೆ ಮಾಡಿ 400 ರೂ. ಗೆಲ್ಲಿ!
Body:ಸರಕಾರದ ಆಫರ್: 'ಬಿಪಿಎಲ್' ಸಿರಿವಂತರ ಪತ್ತೆ ಮಾಡಿ 400 ರೂ. ಗೆಲ್ಲಿ!

ಅಥಣಿ

ಇದು ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸರಕಾರ ಹಿಡಿದಿರುವ ಹೊಸ ಪತ್ತೇದಾರಿ ಮಾರ್ಗ. ಆರ್ಥಿಕವಾಗಿ ಹಿಂದುಳಿ ದವರಿಗೆ ನೀಡುವ ಬಿಪಿಎಲ್ ಕಾರ್ಡ್ಗಳು ದುರ್ಬಳಕೆಯಾಗುತ್ತಿದ್ದು, ಬಹಳಷ್ಟು ಶ್ರೀಮಂತರು ತಾವು ಬಡವರೆಂದು ಸುಳ್ಳು ದಾಖಲೆ ನೀಡಿ ಕಾರ್ಡ್ ಪಡೆದಿರುವುದು ಜಗಜ್ಜಾಹೀರಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಲೇ ಇದೆ. ಇಂಥ ಅನರ್ಹರನ್ನು ಗುರುತಿಸಿ, ಅವರನ್ನು ಪಟ್ಟಿಯಿಂದ ಹೊರಗೆ ಹಾಕಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಹುಮಾನ ಯೋಜನೆ ಘೋಷಿಸಿದೆ. ಆರ್ಥಿಕ ಸದೃಢರು ಯಾರು?: ಆದಾಯ ತೆರಿಗೆ ಪಾವತಿಸುತ್ತಿರುವವರು. 10 ಚದರಕ್ಕಿಂತ (1000 ಅಡಿ) ದೊಡ್ಡ ಮನೆ ಹೊಂದಿರುವವರು. ಸರಕಾರಿ ನೌಕರರು, ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿ ನೌಕರರು, ವಕೀಲರು, ಆಡಿಟರ್ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರನ್ನು ಆರ್ಥಿಕಾಗಿ ಸದೃಢವಾಗಿ ಇರುವವರು ಎಂದು ಗುರುತಿಸಲಾಗಿದೆ.

1967ಗೆ ದೂರು ನೀಡಿ
ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಶ್ರೀಮಂತರ ಕುರಿತು ಮಾಹಿತಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು 1967 ಅಥವಾ 18004259339 ನಂಬರ್ಗೆ ಕರೆ ಮಾಡಿ ತಿಳಿಸಬಹುದು.

ಸೆಪ್ಟಂಬರ್ 30 ಕಡೆ ದಿನ
ಶ್ರೀಮಂತರು ಮತ್ತು ಅನರ್ಹರು ಬಿಪಿಎಲ್ ಕಾರ್ಡ್ ಮರಳಿಸಲು ಸೆಪ್ಟಂಬರ್ 30 ಕಡೆ ದಿನ. ಗಡುವಿನೊಳಗೆ ವಾಪಾಸ್ ನೀಡಿದಿದ್ದರೆ ಪಡಿತರ ಚೀಟಿ ಕಾಯಿದೆ 1977ರ ಅನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದು ಸಾರ್ವಜನಿಕರ ಪ್ರಕಟಣೆ ತಿಳಿಸಿದ್ದಾರೆ
Conclusion:ಶಿವರಾಜ್ ನೇಸರಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.