ETV Bharat / state

ಸಿಡಿಲು ಬಡಿದು ನಾಲ್ವರು ಮಹಿಳೆಯರ ಸಾವು: ಸಂಬಂಧಿಕರ ಆಕ್ರಂದನ - ಸಿಡಿಲು ಬಡಿದು ಮಹಿಳೆಯರು ಮೃತ

ಬೆಳಗಾವಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾದ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಠಾಣಾ ಸರಹದ್ದಿನ ಭೈರಾಪುರ ಗ್ರಾಮದಲ್ಲಿಂದು ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

4 women dies after the attack of thunder
ಸಿಡಿಲು ಬಡಿದು ನಾಲ್ವರು ಮಹಿಳೆಯರು ಸಾವು
author img

By

Published : Oct 20, 2020, 7:21 PM IST

ಬೆಳಗಾವಿ/ಬಳ್ಳಾರಿ: ಬೆಳಗಾವಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ತಲಾ ಎರಡು ಮಹಿಳೆಯರು ಸಾವನ್ನಪ್ಪಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಎಂದು ಹೊಲಕ್ಕೆ ತೆರಳಿದ್ದ ಸಂದರ್ಭದಲ್ಲಿ ಗುಡುಗು ಸಹಿತ ಮಳೆಯಾದ ಹಿನ್ನೆಲೆ ಮರದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಇಬ್ಬರು ಮಹಿಳೆಯರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ, ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಸವದತ್ತಿ‌ ತಾಲೂಕಿನ‌ ಚಿಕ್ಕ ಉಳ್ಳಿಗೇರಿ ಗ್ರಾಮದ ಯಲ್ಲವ್ವ ಇಂಚಲ ಹಾಗೂ ಭಾಗವ್ವ ಹೊಸಮನಿ ಮೃತ ದುರ್ದೈವಿಗಳು.

ಗುಡುಗು‌ ಸಹಿತ ಭಾರಿ ಮಳೆ ಹಿನ್ನೆಲೆ ನಾಲ್ಕೈದು ಜನರು ಆಶ್ರಯ ಪಡೆಯಲು ಮರದ ಕೆಳಗೆ ನಿಂತುಕೊಂಡಿದ್ದರು. ಈ ವೇಳೆ, ಸಿಡಿಲು ಬಡಿದು ಮಹಿಳೆಯರಿಬ್ಬರು ಸಾವನ್ನಪ್ಪಿದ್ದಾರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸ್ಥಳೀಯರು ಸವದತ್ತಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ನಡೆದಿದೆ.

ಸಿಡಿಲು ಬಡಿದು ನಾಲ್ವರು ಮಹಿಳೆಯರು ಸಾವು

ಇನ್ನೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಠಾಣಾ ಸರಹದ್ದಿನ ಭೈರಾಪುರ ಗ್ರಾಮದಲ್ಲಿಂದು ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಭೈರಾಪುರ ಗ್ರಾಮದ ಹೊರವಲಯದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಚಲವಾದಿ

ಗಂಗಮ್ಮ (45) ಹಾಗೂ‌ ಲಿಂಗಾಯತ ಸಮುದಾಯದ ಕವಿತಮ್ಮ (27) ಅವರಿಗೆ ಸಿಡಿಲು ಬಡಿದ ಪರಿಣಾಮ‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ಸಿರಿಗೇರಿ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.‌

ಘಟನಾ ಸ್ಥಳಕ್ಕೆ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮತ್ತು ತಹಶೀಲ್ದಾರ್ ಸಾಯಿಬಣ್ಣ ಕೂಡಲಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.