ETV Bharat / state

ಕೊರೊನಾ ಹುಟ್ಟಡಗಿಸಲು ಬೆಳಗಾವಿಯ ಈ ಗ್ರಾಮದಲ್ಲಿ 31 ದಿನ ಸ್ವಯಂಪ್ರೇರಿತ ಲಾಕ್‌ಡೌನ್​​!

ಬೆಳಗಾವಿ ಜಿಲ್ಲೆಯ ಗೋಕಾಕ್​​ ತಾಲೂಕಿನ ಕಡಬಗಟ್ಟಿ ಗ್ರಾಮಸ್ಥರು ಕೊರೊನಾ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಿಂದ 31 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್‌ಡೌನ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

31 days self lock down in Kadabagatti village of Belagavi
ಕೊರೊನಾ ಹುಟ್ಟಡಗಿಸಲು ಬೆಳಗಾವಿಯ ಈ ಗ್ರಾಮದಲ್ಲಿ 31 ದಿನ ಸೆಲ್ಫ್ ಲಾಕ್‌ಡೌನ್!
author img

By

Published : Jul 15, 2020, 3:31 PM IST

ಬೆಳಗಾವಿ: ಮಹಾಮಾರಿ ಕೊರೊನಾ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಿಂದ 31 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್‌ಡೌನ್‌ ಮಾಡಿಕೊಳ್ಳಲು ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಕಡಬಗಟ್ಟಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಹಾಗೂ ಸೋಂಕಿಗೆ ಬಲಿಯಾದವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಈ ಕಾರಣಕ್ಕೆ 31 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಕಡಬಗಟ್ಟಿ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಕಡಬಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬ್ಯಾರಿಕೇಡ್, ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಲಾಗಿದೆ. ಯಾರೂ ಕೂಡ ಗ್ರಾಮ ಬಿಟ್ಟು ಹೊರ ಹೋಗದಂತೆ ಹಾಗೂ ಬೇರೆ ಊರಿನಿಂದ ಬೀಗರು, ನೆಂಟರನ್ನು ಕರೆಸದಂತೆ ಡಂಗೂರ ಸಾರಿ ಮನವಿ ಮಾಡಲಾಗಿದೆ.

ತಮ್ಮ ತಮ್ಮ ಗದ್ದೆಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಆದರೆ ಗೋಕಾಕ್‌, ಬೆಳಗಾವಿ ಸೇರಿದಂತೆ ಯಾವುದೇ ನಗರ ಪ್ರದೇಶಗಳಿಗೆ ತೆರಳದಂತೆ ತಾಕೀತು ಮಾಡಲಾಗಿದೆ. ಈ ಊರಲ್ಲಿ ಈವರೆಗೆ ಯಾರಲ್ಲೂ ಕೊರೊನಾ ಸೋಂಕು ಕಾಣಿಸಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಊರಿಗೆ ಯಾರೂ ಬರದಂತೆ, ಊರಿಂದ ಯಾರೂ ಹೊರ ಹೋಗದಂತೆ ಗ್ರಾಮದ ಹಿರಿಯರೆಲ್ಲರೂ ಸೇರಿ ಸ್ವಯಂ ನಿರ್ಬಂಧಕ್ಕೆ ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.