ಚಿಕ್ಕೋಡಿ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಪಟ್ಟಣದ ಬಳಿ ಹಾಗೂ ಚಿಂಚಣಿ ಗ್ರಾಮದ ಸೇರಿದಂತೆ ಕೇವಲ 20 ಕಿಲೋ ಮೀಟರ್ ಅಂತರದಲ್ಲಿಯೇ ಎರಡು ಟೋಲ್ ಗೇಟ್ ಆರಂಭಿಸಲಾಗಿದ್ದು,ಇದನ್ನು ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಯಿತು.
ಕಬ್ಬೂರ ಪಟ್ಟಣದ ಬಳಿ ಇರುವ ಟೋಲ್‍ನಲ್ಲಿ ಒಂದು ಕಾರಿಗೆ 30 ರೂ. ಸಂಗ್ರಹಿಸಿದರೆ, ಚಿಂಚಣಿ ಬಳಿ ಇರುವ ಟೋಲ್‍ನಲ್ಲಿ 40 ರೂ. ಶುಲ್ಕ ಪಡೆಯಲಾಗುತ್ತಿದೆ. ಇದು ವಾಹನ ಸವಾವರರಿಗೆ ಹೊರೆಯಾಗುತ್ತದೆ. ಆದ್ದರಿಂದ ಸ್ಥಳೀಯ ಮತ್ತು ಶಾಲಾ ವಾಹನಗಳಿಗೆ ರಿಯಾಯತಿ ನೀಡುವಂತೆ ಪ್ರತಿಭಟಕಾರರು ಒತ್ತಾಯಿಸಿದ್ದಾರೆ.
ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿರುವ ಟೋಲ್‍ಗೇಟ್‍ಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ಕೂಡಲೇ ಸ್ಥಳೀಯ ವಾಹನಗಳಿಗೆ ಟೋಲ್ ರಿಯಾಯತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.