ETV Bharat / state

ಬೆಳಗಾವಿಯ ಮತ್ತಿಬ್ಬರು ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - ಬೆಳಗಾವಿಯ ಮತ್ತಿಬ್ಬರು ಸೋಂಕಿತರು ಗುಣಮುಖ

ಮಹಾಮಾರಿ ಕೊರೊನಾ ವೈರಾಣು ಹರಡುವಿಕೆಯಿಂದ ಕಂಗೆಟ್ಟಿದ್ದ ಬೆಳಗಾವಿಯ ಜನ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

2 More Patients Discharged From District Hospital
ಬೆಳಗಾವಿಯ ಮತ್ತಿಬ್ಬರು ಸೋಂಕಿತರು ಗುಣಮುಖ
author img

By

Published : Apr 21, 2020, 4:22 PM IST

ಬೆಳಗಾವಿ: ಮಹಾಮಾರಿ ಕೊರೊನಾ ಸೋಂಕು ತಗುಲಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೆಳಗಾವಿ ತಾಲೂಕಿನ ‌ಹಿರೇಬಾಗೇವಾಡಿ ಗ್ರಾಮದ ರೋಗಿ ನಂಬರ್ 128 ಹಾಗೂ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ರೋಗಿ ನಂಬರ್ 148 ಬಿಡುಗಡೆ ಆಗಿದ್ದಾರೆ. ಗುಣಮುಖರಾಗಿ ಬಿಡುಗಡೆ ಆದವರ ಸಂಖ್ಯೆ 3ಕ್ಕೇರಿದ್ದು, ಬೆಳಗಾವಿಯ ಜನರ ಸಂತಸಕ್ಕೆ ಕಾರಣವಾಗಿದೆ.

2 More Patients Discharged From District Hospital
ಬೆಳಗಾವಿಯ ಮತ್ತಿಬ್ಬರು ಸೋಂಕಿತರು ಗುಣಮುಖ

ಸತತ ಎರಡು ಸಲ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಮಾಹಿತಿ ನೀಡಿದ್ದಾರೆ.

ಗುಣಮುಖರಾದ ಇಬ್ಬರಿಗೂ ಮನೆಗೆ ಹೋದ ಮೇಲೆ 14 ದಿನಗಳ ಹೋಂ ಕ್ವಾರಂಟೈನ್​ನಲ್ಲಿ ಇರುವಂತೆ ಹೇಳಿದ್ದೇವೆ. ಬಳಿಕ ಎಂದಿನಂತೆ ಅವರು ಓಡಾಡಬಹುದು ಎಂದು ಡಾ. ವಿನಯ್ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೂ 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಓರ್ವ ವೃದ್ಧೆ ಸಾವನ್ನಪಿದ್ದಾರೆ. ಮೂವರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ 38 ಕೊರೊನಾ ಪಾಸಿಟಿವ್ ಕೇಸ್‌ಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.