ಬೆಂಗಳೂರು: ಕಂಟೇನ್ಮೆಂಟ್ ಝೋನ್ನಲ್ಲಿರುವ ಪಾದರಾಯನಪುರದಲ್ಲಿ ಶಾಸಕ ಜಮೀರ್ ಅಹ್ಮದ್ ಜನರನ್ನು ಸೇರಿಸಿ ಸಭೆ ನಡೆಸಿದ್ದಾರೆ. ಇದೀಗ ಚರ್ಚೆಗೆ ಗ್ರಾಸ ಒದಗಿಸಿದೆ.
ಪಾದರಾಯನಪುರ ವಾರ್ಡ್ನಲ್ಲಿ ಈಗಾಗಲೇ 33 ಕೊರೊನಾ ಪ್ರಕರಣ ಪಾಸಿಟಿವ್ ಬಂದ ಹಿನ್ನೆಲೆ ಕಂಟೇನ್ಮೆಂಟ್ ಝೋನ್ ಮಾಡಿ, ಯಾರೊಬ್ಬರೂ ಮನೆಯಿಂದ ಹೊರಬಾರದಂತೆ ಪಾಲಿಕೆ ಕ್ರಮ ಕೈಗೊಂಡಿದ್ದರೂ ಶಾಸಕ ಜಮೀರ್ ಅಹಮದ್ ಇಂದು ಅಲ್ಲಿನ ವಾರ್ಡ್ ಕಚೇರಿಯಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದು, ಸಾಮಾಜಿಕ ಅಂತರವನ್ನೂ ಕಾಪಾಡದೇ ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.