ETV Bharat / state

ಪ್ರಧಾನಿಗೆ 15 ರೂಪಾಯಿ ಮನಿಯಾರ್ಡರ್ ಕಳುಹಿಸಿ, ಹಲವು ಪ್ರಶ್ನೆ ಕೇಳಿದ ಯುವಕಾಂಗ್ರೆಸ್

ಬೆಂಗಳೂರಿನ ವಿಧಾನಸೌಧ ಸಮೀಪದ ರಾಜಭವನ ರಸ್ತೆಯ ಪ್ರಧಾನ ಅಂಚೆ ಕಚೇರಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್​. ಮನೋಹರ್ ನೇತೃತ್ವದಲ್ಲಿ ಯುವಕಾಂಗ್ರೆಸ್ ನಾಯಕರು ಪ್ರಧಾನಿ ಕಚೇರಿಗೆ 15 ರೂ ಹಣವನ್ನು ಅಂಚೆ ಮೂಲಕ ಮಾನಿಯಾರ್ಡರ್ ಮಾಡಿದರು.

Youth Congress leaders made a money order Rs 15 to the Prime Ministers office.
ಯುವಕಾಂಗ್ರೆಸ್ ನಾಯಕರು ಪ್ರಧಾನಿ ಕಚೇರಿಗೆ 15 ರೂ ಮನಿಯಾರ್ಡ್​ ಮಾಡಿದರು.
author img

By

Published : May 30, 2023, 3:28 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಯುವ ನಾಯಕರು ಇಂದು 15 ರೂ ಮೊತ್ತವನ್ನು ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಬೆಂಗಳೂರಿನ ವಿಧಾನಸೌಧ ಸಮೀಪದ ರಾಜಭವನ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್​. ಮನೋಹರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ನಾಯಕರು ಪ್ರಧಾನಿ ಕಚೇರಿಗೆ 15 ರೂಗಳನ್ನು ಅಂಚೆ ಮೂಲಕ ಕಳುಹಿಸಿಕೊಟ್ಟರು.

Money order
ಮನಿಯಾರ್ಡರ್

ಈ ಸಂದರ್ಭದಲ್ಲಿ ಎಸ್​. ಮನೋಹರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಅಚ್ಛೇ ದಿನ್ ಸರ್ಕಾರದಲ್ಲಿ 15 ಲಕ್ಷ ಹಣ ಯಾರ ಖಾತೆಗೂ ಹಾಕಲಿಲ್ಲ, ಹಾಗೂ ಬರಲೇ ಇಲ್ಲ. ಅದಕ್ಕಾಗಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಪಕ್ಷದಿಂದ ನಾವೆಲ್ಲರೂ ಸೇರಿ ಅವರಿಗೆ 15 ರೂಪಾಯಿಯನ್ನು ಮನಿ ಆರ್ಡರ್ ಮಾಡಿದ್ದು, ಕಳುಹಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಉದ್ಯೋಗ ಕೇಳಿದ್ರೆ ಪಕೋಡ ಮಾರಾಟ ಮಾಡಿ ಎಂದರು : 9 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ರವರು ರಾಷ್ಟ್ರದ ಜನತೆಗೆ ನೀಡಿದ ಎಲ್ಲ ಭರವಸೆಗಳು ಇಂದು ಸುಳ್ಳಾಗಿವೆ. ಹೊರ ದೇಶದಲ್ಲಿರುವ ಕಪ್ಪು ಹಣ ತರಲಿಲ್ಲ. ಪ್ರತಿಯೊಬ್ಬ ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಹೇಳಿದರು. ಯಾರ ಖಾತೆಗೂ 15 ರೂ ಸಹ ಇದುವರೆಗೂ ಬಂದಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು ನರೇಂದ್ರ ಮೋದಿ. ಆದರೆ. ಇರುವ ಉದ್ಯೋಗವು ಸಹ ಎಲ್ಲರಿಂದ ಕಸಿಯುತ್ತಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಾಟ ಮಾಡು ಎಂದರು ಎಂದು ಆರೋಪಿಸಿದರು.

ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದರು ಭ್ರಷ್ಟ ಮುಖ್ಯಮಂತ್ರಿಗಳೊಂದಿಗೆ ವೇದಿಕೆ ಹಂಚಿಕೊಂಡರು. ಅಚ್ಚೆ ದಿನ್ ಅಚ್ಚೆ ದಿನ್ ಎಂದು ನಿತ್ಯವೂ ಹೇಳಿ ಪ್ರತಿಯೊಬ್ಬರ ಮೇಲು ಸಾಲದ ಹೊರೆ ಹೊರಿಸಿದರು. ನರೇಂದ್ರ ಮೋದಿ. ಕೇಂದ್ರ ಸರ್ಕಾರದ ಎಲ್ಲ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ತೆರಿಗೆ ಹಣವನ್ನು ವಂಚಿಸಿರುವ ಉದ್ಯಮಗಳೊಂದಿಗೆ ಶಾಮೀಲಾಗಿ ಅವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ.

ರೈತ ವಿರೋಧಿ ಮಸೂದೆ ಜಾರಿ: ದೇಶದ ಅನ್ನದಾತರಿಗೆ ನ್ಯಾಯಯುತವಾದ ಕಾಯ್ದೆಯನ್ನು ಅನುಷ್ಠಾನಗೊಳಿಸದೇ, ರೈತ ವಿರೋಧಿ ಮಸೂದೆಯನ್ನು ಜಾರಿಗೆ ತಂದಿರುವುದು ಕೇಂದ್ರ ಸರ್ಕಾರದ ಅತಿ ದೊಡ್ಡ ಅಪರಾಧ. ನರೇಂದ್ರ ಮೋದಿ ನೀಡಿರುವ ಎಲ್ಲ ಭರವಸೆಗಳು ಸುಳ್ಳಾಗಿದೆ ಅವರು ದೇಶಕ್ಕೆ ನೀಡಿದ ಕೊಡುಗೆ ಎಂದರೆ ಅದು ಸುಳ್ಳಿನ ಕೊಡುಗೆಗಳು ಮಾತ್ರ ಎಂದು ದೂರಿದರು.

ಪ್ರಧಾನ ಮಂತ್ರಿ ರವರಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಿ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ತಲುಪಿಸಲು ಪತ್ರವನ್ನು ರವಾನಿಸಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡ, ಎ.ಆನಂದ್, ಪ್ರಕಾಶ್, ರವಿಶೇಖರ್, ಹೇಮರಾಜು, ಚಂದ್ರಶೇಖರ್, ಅನಿಲ್ ಕುಮಾರ್, ಉಮೇಶ್, ಚಿನ್ನಿ ಪ್ರಕಾಶ್, ಓಬಳೇಶ್, ಹಾಜರಿದ್ದರು.

ಇದನ್ನೂ ಓದಿ : ಕಡಲ ಮಕ್ಕಳಿಗೆ 2 ತಿಂಗಳು ಸುದೀರ್ಘ ರಜೆ: ನಿಷೇಧದ ಬೆನ್ನಲ್ಲೆ ದಡ ಸೇರಿದ ಬೋಟ್​​​ಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.