ETV Bharat / state

'ನಿಮ್ಮ ಬಸ್ ಸೂಪರ್ ಎಕ್ಸ್‌ಪ್ರೆಸ್' ಅಭಿಯಾನ.. ಬಿಎಂಟಿಸಿಯಿಂದ ಪ್ರತ್ಯೇಕ ಬಸ್ ಪಥದ ಅರಿವು - ಪ್ರತ್ಯೇಕ ಬಸ್ ಪಥದ ಅರಿವು ಕಾರ್ಯಕ್ರಮ

ಬಸ್ ಲೇನ್ ವ್ಯವಸ್ಥೆ ಹಾಗೂ ಬಿಎಂಟಿಸಿ ಬಸ್ ಬಳಕೆಯಿಂದ ಪರಿಸರ ಮಾಲಿನ್ಯ ಸೇರಿ ಸಮಯವನ್ನೂ ಉಳಿಸಬಹುದಾಗಿದೆ. ಪ್ರತಿಯೊಬ್ಬರು ಕೂಡಾ ಇದನ್ನು ಅನುಸರಿಸಬೇಕಿದೆ.

Your Bus Super Express Campaign
ನಿಮ್ಮ ಬಸ್ ಸೂಪರ್ ಎಕ್ಸ್ ಪ್ರೆಸ್ ಅಭಿಯಾನ
author img

By

Published : Dec 11, 2019, 9:03 PM IST

ಬೆಂಗಳೂರು: ಪತ್ರ್ಯೇಕ ಬಸ್ ಪಥ ಹಾಗೂ ಬಿಎಂಟಿಸಿ ಬಸ್ ಬಳಕೆ ಉತ್ತೇಜಿಸಲು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಇಂದು ವಿಶೇಷ ಅಭಿಯಾನ ನಡೆಸಲಾಯಿತು.

ಬಿಎಂಟಿಸಿಯಿಂದ 'ನಿಮ್ಮ ಬಸ್ ಸೂಪರ್ ಎಕ್ಸ್ ಪ್ರೆಸ್' ಅಭಿಯಾನ..

ಮಾರತ್ತಹಳ್ಳಿಯಿಂದ ಸಿಲ್ಕ್ ಬೋರ್ಡ್​ವರೆಗೆ ನಿಮ್ಮ ಬಸ್ ಸೂಪರ್ ಎಕ್ಸ್‌ಪ್ರೆಸ್ ಅಭಿಯಾನ ನಡೆಸಿ ಸಾರ್ವಜನಿಕರು ಹೆಚ್ಚು ಬಿಎಂಟಿಸಿ ಬಸ್‌ಗಳನ್ನೇ ಉಪಯೋಗಿಸುವಂತೆ ಅರಿವು ಮೂಡಿಸಲಾಯಿತು. ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಎಂಟಿಸಿ ಎಂಡಿ ಸಿ. ಶಿಖಾ, ಪೊಲೀಸ್ ಕಮೀಷನರ್ ಭಾಸ್ಕರ್‌ ರಾವ್ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಬಸ್ ಪಥದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ನಂತರ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಜನ ಬಿಎಂಟಿಸಿ ಬಸ್‌ಗಳನ್ನು ಹೆಚ್ಚು ಹೆಚ್ಚು ಉಪಯೋಗಿಸುವುದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು. ಅಲ್ಲದೇ ಸಮಯವೂ ಉಳಿತಾಯವಾಗುತ್ತದೆ. ಈ ಮೊದಲು ಕೆಆರ್‌ಪುರಂನಿಂದ ಸಿಲ್ಕ್ ಬೋರ್ಡ್‌ಗೆ 1ಗಂಟೆ 30 ನಿಮಿಷ ಆಗುತ್ತಿತ್ತು. ಬಸ್ ಲೇನ್ ಆದ ನಂತರ 1 ಗಂಟೆ 12 ನಿಮಿಷ ಆಗುತ್ತಿದೆ. ಪ್ರಯಾಣದ ಅವಧಿ ಈಗಾಗಲೇ 18 ನಿಮಿಷ ಕಡಿಮೆ ಆಗಿದೆ. ಇದು ಯಶಸ್ವಿಯಾದ್ರೆ ಟ್ರಾಫಿಕ್ ಮತ್ತು ಮಾಲಿನ್ಯ ಕಡಿಮೆ ಆಗುತ್ತದೆ ಎಂದರು.

Intro:ಬೆಂಗಳೂರು: ಮಾರತಹಳ್ಳಿ.

ಪ್ರತ್ಯೇಕ ಬಸ್ ಪಥದ ಅರಿವು ಮೂಡಿಸಲು ನಿಮ್ಮ ಬಸ್ ಸೂಪರ್ ಎಕ್ಸ್ ಪ್ರೆಸ್ ಅಭಿಯಾನ

ಪತ್ರ್ಯೇಕ ಬಸ್ ಪಥ ಹಾಗೂ ಬಿಎಂಟಿಸಿ ಬಸ್ ಬಳಕೆ ಉತ್ತೇಜಿಸಲು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ವಿಶೇಷ ಅಭಿಯಾನ ನಡೆದಲಾಯಿತು. ಮಾರತ್ತಹಳ್ಳಿಯಿಂದ ಸಿಲ್ಕ್ ಬೋರ್ಡ್ ವರೆಗೆ ನಿಮ್ಮ ಬಸ್ ಯಾತ್ರೆ ನಡೆಸಿ ಸಾರ್ವಜನಿಕರು ಹೆಚ್ಚು ಬಿಎಂಟಿಸಿಯನ್ನು ಉಪಯೋಗಿಸುವಂತೆ ಅರಿವು ಮೂಡಿಸಲಾಯಿತು....

ಬಿಎಂಟಿಸಿ ಬಸ್ ನಲ್ಲಿ ಸಂಚರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಎಂಟಿಸಿ ಎಂಡಿ ಶಿಖಾ, ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಸ್ವತಃ ಬಸ್ ನಲ್ಲಿ ಸಂಚರಿಸುವ ಮೂಲಕ ಬಸ್ ಪಥದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆದ್ಯತೆಯ ಮೇಲೆ ಈ ಯೋಜನೆಯನ್ನು ಸರ್ಕಾರ ತಂದಿದೆ ಬಿಎಂಟಿಸಿಯೊಂದಿಗೆ ಬೆಂಗಳೂರು ಸಿಟಿಜೆನ್ಸ್ ಫೋರಂ ಸ್ವಯಂ ಪ್ರೇರಿತವಾಗಿ ಅರಿವು ಮೂಡಿಸಲು ಕೈ ಜೋಡಿಸಿವೆ, ಬಿಎಂಟಿಸಿ ಎಂಡಿ ಸೇರಿದಂತೆ ಎಲ್ಲರೂ ಬಹಳ ಆದ್ಯತೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆ. ಜನ ಬಿಎಂಟಿಸಿಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಬೇಕು ಬಿಎಂಟಿಸಿ ಬಸ್ ಗಳ ಉಪಯೋಗದಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗುತ್ತದೆ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು ಅಲ್ಲದೇ ಸಮಯವೂ ಉಳಿತಾಯವಾಗುತ್ತದೆ. ಈ ಮೊದಲು ಕೆಆರ್ ಪುರಂನಿಂದ ಸಿಲ್ಕ್ ಬೋರ್ಡ್ ಗೆ 1ಗಂಟೆ 30ನಿಮಿಷ ಆಗುತ್ತಿತ್ತು, ಬಸ್ ಲೇನ್ ಆದ ನಂತರ 1ಗಂಟೆ 12ನಿಮಿಷ ಆಗುತ್ತಿದೆ, ಪ್ರಯಾಣದ ಅವಧಿ ಈಗಾಗ್ಲೆ 18ನಿಮಿಷ ಕಡಿಮೆ ಆಗಿದೆ.ಇದು ಯಶಸ್ವಿಯಾದ್ರೆ ಟ್ರಾಫಿಕ್ ಮತ್ತು ಮಾಲಿನ್ಯ ಕಡಿಮೆ ಆಗುತ್ತದೆ

Body:ಬಸ್ ಲೇನ್ ಗೆ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕಿದೆ, ಎಫ್ ಎಂ 104 ಮತ್ತು
95 ಕೂಡ ನಮ್ಮೊಂದಿಗೆ ಕೈ ಜೋಡಿಸಿದೆ, ಅಲ್ಲದೇ ಪ್ರಮುಖ ಕುಟುಂಬದ
ಸಿನಿಮಾ ನಟರು ಕೂಡ ಬಿಎಂಟಿಸಿ ಬ್ರಾಂಡ್ ಅಂಬಾಸಿಡರ್ ಆಗಲು ಮುಂದೆ ಬಂದಿರುವುದು ಸಂತಸ ತಂದಿದೆ. ಈಗಾಗಲೇ ಸಾರ್ವಜನಿಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ, ಒಂದು ತಿಂಗಳ ಹಿಂದೆ ಶುರು ಮಾಡಿದ್ವಿ, ಪೀಕ್ ಟೈಮ್ನಲ್ಲಿ ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿತ್ತು, ಇದೀಗ 20 ನಿಮಿಷ ಕಡಿಮೆಯಾಗಿದೆ.
ಬಿಬಿಎಂಪಿ ಹಾಗೂ ಟ್ರಾಫಿಕ್ ಕೈ ಜೋಡಿಸಿ ಫಿಸಿಕಲ್ ಬ್ಯಾರಿಕೇಡ್ ಹಾಕಿದರೆ ಇನ್ನಷ್ಟು ಬೇಗ ತಲುಪಬಹುದು, ಖಾಲಿ ಜಾಗ ಇದ್ದರೆ ಜನ ಹೋಗೇ ಹೋಗ್ತಾರೆ ಆದ್ದರಿಂದ ಭೌತಿಕ ಬ್ಯಾರಿಕೇಡ್ ಹಾಕುತ್ತೇವೆ, ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ.

Conclusion:ಬಸ್ ಲೇನ್ ವ್ಯವಸ್ಥೆ ಹಾಗೂ ಬಿಎಂಟಿಸಿ ಬಸ್ ಬಳಕೆಯಿಂದ ಪರಿಸರ ಮಾಲಿನ್ಯ ಸೇರಿದಂತೆ ಸಮಯವನ್ನೂ ಉಳಿಸಬಹುದಾಗಿದ್ದು, ಪ್ರತಿಯೊಬ್ಬರು ಕೂಡಾ ಇದನ್ನು ಅನುಸರಿಸಬೇಕಿದೆ...

ಬೈಟ್ 1..ನಂದೀಶ್ ರೆಡ್ಡಿ, ಬಿಎಂಟಿಸಿ ಅಧ್ಯಕ್ಷ

ಬೈಟ್ 2.....ಶೀಖಾ, ಬಿಎಂಟಿಸಿ ಎಂಡಿ

ಬೈಟ್ 3.......ಭಾಸ್ಕರ್ ರಾವ್, ಕಮಿಷನರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.