ETV Bharat / state

ಬೆಂಗಳೂರು: ಬಾಯ್ ಫ್ರೆಂಡ್​ ಜೊತೆ ಮದುವೆ ಬೇಡ ಅಂದಿದ್ದಕ್ಕೆ ಯುವತಿ ಆತ್ಮಹತ್ಯೆ - ಬಾಯ್ ಫ್ರೆಂಡ್​ ಟಾರ್ಚರ್ ಕೊಟ್ಟಿದಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮಗಳ ಹಠಕ್ಕೆ ಬೇಸತ್ತ ತಾಯಿ ಶಶಿಕಲಾ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಈಗ ಮಗಳು ಜೆಮಿನಿಯೂ ಅದೇ ಹಾದಿ ಹಿಡಿದಿದ್ದು ಸಾಕಿ ಸಲಹಿದ ತಂದೆ ಒಂಟಿಯಾಗಿದ್ದಾರೆ.

Bangalore
ಭರತ್ ಬಂಧಿತ ಆರೋಪಿ
author img

By

Published : Jan 10, 2021, 11:35 AM IST

ಬೆಂಗಳೂರು: ಸಾಕಿ ಸಲಹಿದ ಮಗಳು ವಿದ್ಯಾವಂತೆಯಾಗಲಿ, ಲೋಕಜ್ಞಾನ ತಿಳಿದುಕೊಳ್ಳಲಿ ಎಂದು ಕಾಲೇಜಿಗೆ ಕಳಿಸಿದರೆ, ಮಗಳು ಹದಿಹರೆಯದಲ್ಲೇ ಪ್ರೀತಿಯ ಗೀಳಿಗೆ ಬಿದ್ದು ಕೊನೆಗೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಆರ್​ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೆಮಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಗಳ ಹಠಕ್ಕೆ ಬೇಸತ್ತ ತಾಯಿ ಶಶಿಕಲಾ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಈಗ ಮಗಳು ಜೆಮಿನಿಯೂ ಅದೇ ಹಾದಿ ಹಿಡಿದಿದ್ದು ಸಾಕಿ ಸಲಹಿದ ತಂದೆಯನ್ನು ಒಂಟಿಯಾಗಿಸಿ ಹೋಗಿದ್ದಾಳೆ.

ಏನಿದು ಘಟನೆ ? ನಗರದ ಖಾಸಗಿ‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜೆಮಿನಿ, ಭರತ್ ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪೋಷಕರ ಮಾತನ್ನೂ ಧಿಕ್ಕರಿಸಿ ಭರತ್​ನನ್ನು ಪ್ರೀತಿಸುತ್ತಿದ್ದಳು. ಜೆಮಿನಿಗೆ ಎಷ್ಟು ಬುದ್ಧಿವಾದ ಹೇಳಿದ್ದರೂ ಪೋಷಕರ ಮಾತಿಗೆ ಮನ್ನಣೆಯಿರಲಿಲ್ಲ. ಕೊನೆಗೆ ಭರತ್​​ನ ಜೊತೆಗೆ ಮದುವೆ ಮಾತುಕತೆ ಮಾಡೋಣವೆಂದು ನೋಡಿದರೆ ಆತ ಗಾಂಜಾ ವ್ಯಸನಿಯಾಗಿದ್ದನಂತೆ. ಏನೇ ಆಗಲಿ ಆತನೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ಮಗಳ ನಿಲುವಿಗೆ ಬೇಸತ್ತ ತಾಯಿ ಶಶಿಕಲಾ 2 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದರು. ಇಷ್ಟಾದರೂ ಸಹ ಭರತ್ ಮತ್ತು ಜೆಮಿನಿಯ ಪ್ರೀತಿ ನಿಂತಿರಲಿಲ್ಲ.

ಓದಿ:ಸಂಪುಟ ವಿಸ್ತರಣೆ, ಉಪ ಚುನಾವಣಾ ಅಭ್ಯರ್ಥಿ ಆಯ್ಕೆ ಕುರಿತು ವರಿಷ್ಠರ ಜೊತೆ ಚರ್ಚೆ: ಸಿಎಂ

ಜ.1 ರಂದು ಧರ್ಮಸ್ಥಳಕ್ಕೆ ತೆರಳಿದ್ದ ಜೆಮಿನಿಯ ತಂದೆ ನಾಗರಾಜ್​​ಗೆ ಕರೆ ಮಾಡಿದ್ದ ಭರತ್, ನಿಮ್ಮ ಮಗಳಿಗೆ ವಿಶ್ ಮಾಡಬೇಕು ಫೋನ್ ಕೊಡಿ ಎಂದು ಒತ್ತಾಯಿಸಿದ್ದ. ತಾವು ಊರಿನಲ್ಲಿಲ್ಲ ಎಂದಿದ್ದ ನಾಗರಾಜ್ ಭರತ್​​ಗೆ ಬುದ್ಧಿವಾದ ಹೇಳಿದ್ದರು. ಆದರೆ ಅದಾಗಿ ನಾಲ್ಕೇ ದಿನದಲ್ಲಿ ಜೆಮಿನಿ ಸಹ ನೇಣಿಗೆ ಶರಣಾಗಿದ್ದಾಳೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ನಾಗರಾಜ್ ಒಂಟಿಯಾಗಿದ್ದು, ಮಗಳಿಗೆ ಪ್ರೀತಿಯ ಹುಚ್ಚು ಹಿಡಿಸಿ ಆಕೆಯ ಸಾವಿಗೆ ಕಾರಣವಾದ ಭರತ್ ವಿರುದ್ಧ ಆರ್​ಎಂಸಿ ಯಾರ್ಡ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಭರತ್​ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.