ETV Bharat / state

ಆನೇಕಲ್‌: ಕಾಲೇಜು ಯುವತಿಯನ್ನು ಕೊಂದು ಯುವಕ ನೇಣಿಗೆ ಶರಣು - young man commited suicide in anekal

ಕಾಲೇಜು ಯುವತಿಯನ್ನು ಕೊಂದು ನಂತರ ಯುವಕನೂ ನೇಣಿಗೆ ಶರಣಾಗಿರುವ ರೀತಿಯಲ್ಲಿ ಆನೇಕಲ್​​ನ (Anekal) ಮನೆಯೊಂದರಲ್ಲಿ ಎರಡು ಶವಗಳು ಪತ್ತೆಯಾಗಿವೆ.

young man killed college girl and committed suicide
ಆತ್ಮಹತ್ಯೆ ಮಾಡಿಕೊಂಡ ರೀತಿ ಯುವಕನ ಶವ ಪತ್ತೆ
author img

By

Published : Nov 18, 2021, 8:27 PM IST

ಆನೇಕಲ್ (ಬೆಂಗಳೂರು): ಯುವತಿಯನ್ನು ಕೊಂದು ಯುವಕ ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.

ಆನೇಕಲ್ ತಾಲೂಕಿನ ಜಿಗಣಿ-ಬನ್ನೇರುಘಟ್ಟ ಮುಖ್ಯರಸ್ತೆಯ ನಿಸರ್ಗ ಬಡಾವಣೆಯ ಮನೆಯೊಂದರ ಮೊದಲ ಮಹಡಿಯಲ್ಲಿ ಯುವತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದರೆ, ಯುವಕ ನೇಣಿಗೆ ಕೊರಳೊಡ್ಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ‌.

ಆತ್ಮಹತ್ಯೆ ಮಾಡಿಕೊಂಡ ರೀತಿ ಯುವಕನ ಶವ ಪತ್ತೆ

ಕೊಲೆಯಾದ ಯುವತಿ ಬನ್ನೇರುಘಟ್ಟ-ಬೆಂಗಳೂರು ರಸ್ತೆಯ ಕಾಲೇಜೊಂದರ ವಿದ್ಯಾರ್ಥಿನಿ ಎನ್ನಲಾಗಿದೆ. ನೇಣಿಗೆ ಶರಣಾದ ಯುವಕನ ಪರಿಚಯ ಇನ್ನೂ ನಿಗೂಢವಾಗಿದ್ದು ಜಿಗಣಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್​ಪಿ ವಂಶಿಕೃಷ್ಣ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸುವ ಯೋಜನೆಯಲ್ಲಿದ್ದಾರೆ.

ಇದನ್ನೂ ಓದಿ:20 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.