ETV Bharat / state

ಭಯೋತ್ಪಾದಕರು ಯಾರೆಂದು ನಿರ್ಧರಿಸಲು ನೀವೇನು ಜಡ್ಜ್ ಅಲ್ಲ, ವೋಟ್​ಗಾಗಿ ಹೀಗೆಲ್ಲ ಹೇಳ್ಬೇಡಿ : ಹೆಚ್​ಡಿಕೆಗೆ VHP ತಿರುಗೇಟು - ಹೆಚ್​ಡಿಕೆ ಟ್ವೀಟ್​ಗೆ​ ಸರಣಿ ಟ್ವೀಟ್​ ಮೂಲಕ ತಿರುಗೇಟು ನೀಡಿದ ವಿಹೆಚ್​ಪಿ

ವಿಶ್ವ ಹಿಂದೂ ಪರಿಷತ್​ ಮಾಜಿ ಸಿಎಂ ಹೆಚ್​ಡಿಕೆ ಟ್ವೀಟ್​ಗೆ​ ಸರಣಿ ಟ್ವೀಟ್​ ಮೂಲಕ ತಿರುಗೇಟು ನೀಡಿದೆ. ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗ ತಮಗೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನಿಸಲಿಲ್ಲವೇ. ಅಲ್ಲದೇ ಭಯೋತ್ಪಾದಕರು ಯಾರೆಂದಯ ನಿರ್ಧರಿಸಲು ನೀವೇನು ಜಡ್ಜ್ ಅಲ್ಲ, ವೋಟ್​ಗಾಗಿ ಹೀಗೆಲ್ಲ ಹೇಳಬೇಡಿ ಎಂದು ವಿಹೆಚ್​ಪಿ ತಿರುಗೇಟು ನೀಡಿದೆ..

VH P give tongue to HKD
ಹೆಚ್​ಡಿಕೆಗೆ ವಿಹೆಚ್​​ಪಿ ತಿರುಗೇಟು
author img

By

Published : Apr 1, 2022, 5:36 PM IST

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಟ್ವೀಟ್​ಗೆ ವಿಶ್ವ ಹಿಂದೂ ಪರಿಷತ್​ ತಿರುಗೇಟು ನೀಡಿದೆ. ಮಾನ್ಯ ಸ್ವಯಂ ಘೋಷಿತ ಮಾತೃ ಹೃದಯಿ ಕುಮಾರಸ್ವಾಮಿಯವರೇ, ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿದ್ದೀರಿ. ಕಳೆದ ಬಾರಿ ತಾವು ಯಾವ ಸಹೋದರರ ಮತಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗೂ ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವಂತೆ ಕಾಣಿಸುತ್ತಿದೆ ಎಂದು ಟೀಕಿಸಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಸರಣಿ ಟ್ವೀಟ್​ ಮಾಡಿದೆ. ಇದಕ್ಕೂ ಮುನ್ನ ಕುಮಾರಸ್ವಾಮಿ ಕೂಡ ಸರಣಿ ಟ್ವೀಟ್​ಗಳ​ ಮೂಲಕ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು. ವಿಶ್ವ ಹಿಂದೂ ಪರಿಷತ್‌, ವಿಶ್ವ ವಿನಾಶಕ ಪರಿಷತ್‌ ಅಥವಾ ʼಧರ್ಮ ವಿನಾಶಕ ಪರಿಷತ್‌ʼ ಆಗುವುದು ಬೇಡ. ಭಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೆ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ? ಎಂದು ಹೆಚ್​ಡಿಕೆ ಪ್ರಶ್ನಿಸಿದ್ದರು.

  • ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. 'ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ' ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ.1/11

    — H D Kumaraswamy (@hd_kumaraswamy) April 1, 2022 " class="align-text-top noRightClick twitterSection" data=" ">

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಹೌದು, ನಿಮ್ಮ ಕರ್ನಾಟಕ ನಿಮ್ಮ ಜಹಂಗೀರಲ್ಲವೆಂಬುದನ್ನು ತಾವು ಮರೆಯಬಾರದು. ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗ ತಮಗೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನಿಸಲಿಲ್ಲವೇ ಎಂದು ವಿಹೆಚ್‌ಪಿ ಪ್ರಶ್ನಿಸಿದೆ.

ಯಾವುದು ನೆಮ್ಮದಿಯ ಮನಸ್ಸುಗಳನ್ನು ಕೆಡಿಸುವುದು ಕುಮಾರಸ್ವಾಮಿಯವರೇ. ಹಿಜಾಬ್ ಆದೇಶವನ್ನು ಧಿಕ್ಕರಿಸಿ ಬಂದ್​​ಗೆ ಕರೆ ನೀಡುವುದಾ? ಅಥವಾ ಹಿಜಾಬ್ ಇಸ್ಲಾಂ ಅಂಗವಲ್ಲವೆಂದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕುವುದಾ? ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಕಾಲದಲ್ಲಿ ನಾವೂ ಸೇವೆ ಮಾಡಿದ್ದೀವಿ ಎಂಬುದು ತಮಗೆ ಜ್ಞಾನೋದಯವಾಗಿರುವುದು ಒಳ್ಳೆಯ ಸಂಗತಿ. ನಾವೇನು ತೋಟದಲ್ಲಿ ರಿಲ್ಯಾಕ್ಸ್ ಮಾಡ್ತಿರಲಿಲ್ಲ. ನಿಮಗೆ ಯಾಕೆ ಹೀಗೆ ತಡವಾಗಿ ಜ್ಞಾನೋದಯವಾಗುವುದು ಎಂದು ನಮಗೂ ತಮ್ಮ ಮೇಲೆ ಮರುಕವಿದೆ. ತಾವು ಕೊರೊನಾ ರೋಗಿಗಳ ಶವ ಸಂಸ್ಕಾರಗಳನ್ನು ಟಿವಿಯಲ್ಲಿ ನೋಡಿದ್ದೀರಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತರು ಶವ ಸಂಸ್ಕಾರ ನೆರವೇರಿಸಿದ್ದಾರೆ! ತಮಗೆ ನೆನಪಿರಲಿ! ಎಂದು ವಿಹೆಚ್​ಪಿ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‌-ಧರ್ಮ ವಿನಾಶಕ ಪರಿಷತ್‌.. ಭಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ.. ಹೆಚ್​​ಡಿಕೆ

144 ಸೆಕ್ಷನ್ ಉಲ್ಲಂಘನೆಯಾಗಿದ್ದರ ಬಗ್ಗೆ ತಾವು ಸದನದಲ್ಲಿ ಯಾಕೆ ಮಾತನಾಡಲಿಲ್ಲ. ಹರ್ಷನ ಕೊಲೆ ಹಿಂದೂ ಎನ್ನುವ ಒಂದೇ ಕಾರಣಕ್ಕೆ ಆಗಿದೆ ಎಂದು ನಿಮಗೂ ಗೊತ್ತಿದೆ. ಮುಗ್ದ ಬಾಲಕನ ಹತ್ಯೆಯಾದಾಗ ತಾವು ಎಲ್ಲಿ ರಿಲ್ಯಾಕ್ಸ್ ಮಾಡ್ದುತ್ತಿದ್ದೀರಿ ಎಂಬುದು ನಮಗೆ ತಿಳಿದಿಲ್ಲ ಬಿಡಿ ಎಂದು ಟೀಕಾಪ್ರಹಾರ ನಡೆಸಿದೆ.

  • ಮಾನ್ಯ Self Declared ಮಾತೃ ಹೃದಯಿ @hd_kumaraswamy ಅವರೇ!
    ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿರುವುದು ಹಾಗೂ ಕಳೆದ ಬಾರಿ ತಾವು ಯಾವ "Brothers"ವೋಟ್ಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈ ಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗು ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವುದು ಕಾಣಿಸುತ್ತಿದೆ.1/10

    — VHP Karnataka (@karvhp) April 1, 2022 " class="align-text-top noRightClick twitterSection" data=" ">

ಕೊನೆಯಾದಾಗಿ ಯಾರು ಭಯೋತ್ಪಾದಕರು ಯಾರು ಅಲ್ಲ ಅಂತಾ ನಿರ್ಧರಿಸೋಕೆ ನೀವೇನು ಜಡ್ಜ್ ಅಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಧರ್ಮ ಶಾಶ್ವತವಾಗಿರುವುದು ಕೇವಲ ವೋಟ್​​ಗಳಿಗೆ, ಹೀಗೆಲ್ಲ ಹೇಳಿಕೆಗಳನ್ನು ನೀಡಿ ನಿಮ್ಮ ಗೌರವಕ್ಕೆ ನೀವೇ ಯಾಕೆ ಧಕ್ಕೆ ತಂದುಕೊಳ್ಳುವಿರಿ ಎಂದು ವಿಹೆಚ್​ಪಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.