ETV Bharat / state

ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಅರುಣ್ ಸಿಂಗ್ - Arun Sing talk about cm BSY Position

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ. ಅದಕ್ಕೆ ವೈಯಕ್ತಿಕವಾಗಿ ಮಾತುಕತೆ ನಡೆಸುತ್ತೇನೆ. ನನಗಿರುವ ಮಾಹಿತಿಯನ್ನು ಹೇಳಿದ್ದೇನೆ. ಯಡಿಯೂರಪ್ಪ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

arun-singh
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
author img

By

Published : Jun 16, 2021, 6:51 PM IST

ಬೆಂಗಳೂರು: ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡ್ತಿದೆ. ಪಕ್ಷದ ಎಲ್ಲಾ ನಾಯಕರು ಒಂದಾಗಿದ್ದಾರೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಪ್ರತಿಯೊಬ್ಬ ನಾಯಕರ ಜೊತೆಗೆ ಸಮಾಲೋಚಿಸುವ ಉದ್ದೇಶ ಇದೆ. ಮಾಧ್ಯಮಗಳಿಗೆ ಅನಗತ್ಯವಾಗಿ ವೈಯಕ್ತಿಕ ಹೇಳಿಕೆಗಳನ್ನು ನೀಡಬೇಡಿ. ನಿಮ್ಮ ಕ್ಷೇತ್ರದಲ್ಲಿ ಜನರಿಗಾಗಿ ಕಾರ್ಯನಿರ್ವಹಿಸಿ ಹಾಗೂ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಮಾರ್ಗದರ್ಶನ ನೀಡುವ ಸಲುವಾಗಿ ಬಂದಿದ್ದೇನೆ ಎಂದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿದರು

ನಗರದ ಕುಮಾರ ಕೃಪ ಅತಿಥಿಗೃಹದಿಂದ ಬಿಜೆಪಿ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಅಥವಾ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯಾವುದೇ ಚರ್ಚೆ ನಡೆಸಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂರು ದಿನದ ಕಾರ್ಯಕ್ರಮ ನಿಮಿತ್ತ ಬಂದಿದ್ದೇನೆ. ಪಕ್ಷ ಸಂಘಟನೆ ಕುರಿತು ಚರ್ಚಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತೇವೆ. ಸಿಎಂ, ಸಚಿವರು ಜನರ ಸೇವೆಗೆ ತೊಡಗಿಸಿಕೊಳ್ಳಬೇಕು. ಇದರ ಬಗ್ಗೆ ನಾನು ಅವರಿಗೆ ಸೂಚಿಸುತ್ತೇನೆ, ಕೋವಿಡ್ ನಿಂದ ಮೃತಪಟ್ಟವರಿಗೆ 1 ಲಕ್ಷ ಘೋಷಿಸಲಾಗಿದೆ, ದೇಶದ ಹಲವು ರಾಜ್ಯಗಳಲ್ಲೂ ಘೋಷಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಆರೋಪ ಮಾಡಿದೆ. ನಾಯಕತ್ವ ಬದಲಾವಣೆ ಬಗ್ಗೆ ಪುಕಾರು ನಡೆದಿವೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ತಿಳಿಸಿದರು.

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ. ಅದಕ್ಕೆ ವೈಯಕ್ತಿಕವಾಗಿ ಮಾತುಕತೆ ನಡೆಸುತ್ತೇನೆ. ನಾನು ನನಗಿರುವ ಮಾಹಿತಿಯನ್ನು ಹೇಳಿದ್ದೇನೆ. ಯಡಿಯೂರಪ್ಪ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಪಕ್ಷ ಸಂಘಟನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಯಾವ ರೀತಿ ನಡೆಸಿಕೊಂಡು ಹೋಗಬಹುದು ಹಾಗೂ ಸಂಘಟನೆ ವಿಚಾರವಾಗಿ ಕೈಗೊಳ್ಳಬಹುದಾದ ನಿಲುವುಗಳ ಚರ್ಚೆ ಮಾಡುತ್ತೇವೆ. ಪಕ್ಷದ ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕಿಟ್ಟು 11 ಸಾಮಾಜಿಕ ಕಾರ್ಯವನ್ನು ನಿರ್ವಹಿಸಿದ್ದಾರೆ. ಇದರ ಸಮೀಕ್ಷೆ ಮಾಡುವುದು ಹಾಗೂ ಜನರಿಗೆ ಇನ್ನಷ್ಟು ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ಗಿಡ ನೆಡುವ ಕಾರ್ಯ, ಪರಿಸರ ಸಂರಕ್ಷಣೆ, ಒಂದು ಸಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಷೇಧ ಅಂತಾರಾಷ್ಟ್ರೀಯ ಯೋಗ ದಿನದ ಸಿದ್ಧತೆ, ಇದಲ್ಲದೆ ಇನ್ನೂ ಸಾಕಷ್ಟು ಕಾರ್ಯಕ್ರಮಗಳು ಕಾರ್ಯಯೋಜನೆ ರೂಪಿಸುವ ಕುರಿತು ಚರ್ಚಿಸಲಿದ್ದೇನೆ ಎಂದರು.

ಮೂರು ದಿನ ಕಾರ್ಯಕ್ರಮ: ಮೂರು ದಿನಗಳ ಭೇಟಿ ಪ್ರಯುಕ್ತ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ನೇರವಾಗಿ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದ್ದು, ಇಲ್ಲಿ ಕೆಲಕಾಲ ತಂಗಿ ನಂತರ ಬಿಜೆಪಿ ಕಚೇರಿಯತ್ತ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜೊತೆ 3 ದಿನಗಳ ಕಾಲ ನಿರಂತರ ಸಭೆ ನಡೆಸುವ ಅರುಣ್ ಸಿಂಗ್, ಪ್ರತಿಯೊಬ್ಬ ನಾಯಕರ ಜೊತೆಗೂ ಪ್ರತ್ಯೇಕವಾಗಿ ಸಮಾಲೋಚಿಸಲಿದ್ದಾರೆ. ಇಂದು ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದ ಅವರನ್ನು ಬಿಜೆಪಿಯ ಪ್ರಮುಖ ಸಚಿವರು ಹಾಗೂ ಮುಖಂಡರು ಬರಮಾಡಿಕೊಂಡರು.

ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್​​ಗೆ ಅರುಣ್ ಸಿಂಗ್ ಆಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.