ETV Bharat / state

ಲಂಡನ್​ ಎಂಟಿಆರ್​​ನಲ್ಲಿ ಕನ್ನಡಿಗರೊಂದಿಗೆ ಮಸಾಲೆ ದೋಸೆ ಸೇವಿಸಿದ ಬಿಎಸ್​ವೈ

ಲಂಡನ್ ಪ್ರವಾಸದಲ್ಲಿರುವ ಯಡಿಯೂರಪ್ಪ, ಅಲ್ಲಿ ವಾಸವಿರುವ ಕನ್ನಡಿಗರೊಂದಿಗೆ ಎಂಟಿಆರ್​​ ರೆಸ್ಟೋರೆಂಟ್​ನಲ್ಲಿ ಉಪಹಾರ ಸವಿದರು. ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದ ನಂತರ ಕನ್ನಡಿಗರೊಂದಿಗೆ ಫೋಟೋ ತೆಗೆಸಿಕೊಂಡರು.

yeddyurappa-ate-masala-dosa-with-kannadigas-at-london-mtr
ಲಂಡನ್​ ಎಂಟಿಆರ್​​ನಲ್ಲಿ ಕನ್ನಡಿಗರೊಂದಿಗೆ ಮಸಾಲೆ ದೋಸೆ ಸೇವಿಸಿದ ಬಿಎಸ್​ವೈ
author img

By

Published : Jun 29, 2022, 9:54 AM IST

Updated : Jun 29, 2022, 10:20 AM IST

ಬೆಂಗಳೂರು/ಲಂಡನ್: ರಾಜಕೀಯ ಜಂಜಾಟ, ಕೆಲಸದ ಒತ್ತಡದ ನಡುವೆಯೂ ಆಗಾಗ ಎಂಟಿಆರ್ ಮಸಾಲೆ ದೋಸೆ ಸವಿಯುವುದು ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಲ್ಲಿಲ್ಲದ ಇಷ್ಟ. ವಿದೇಶ ಪ್ರವಾಸದಲ್ಲೂ ಎಂಟಿಆರ್ ರುಚಿ ಬಿಎಸ್​ವೈ ಅವರನ್ನು ಬಿಟ್ಟಿಲ್ಲ, ಲಂಡನ್​ನಲ್ಲಿರುವ ಎಂಟಿಆರ್​ಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ.

ಜೂನ್ 21ರಂದು ಕುಟುಂಬದೊಂದಿಗೆ ಲಂಡನ್ ಪ್ರವಾಸಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಶಕಗಳ ನಂತರ ರಾಜಕೀಯ ಒತ್ತಡ ಬಿಟ್ಟು ಫುಲ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಸದ್ಯ ಲಂಡನ್ ಪ್ರವಾಸದಲ್ಲಿರುವ ಯಡಿಯೂರಪ್ಪ, ಅಲ್ಲಿ ವಾಸವಿರುವ ಕನ್ನಡಿಗರೊಂದಿಗೆ ಎಂಟಿಆರ್​​ ರೆಸ್ಟೋರೆಂಟ್​ನಲ್ಲಿ ಉಪಹಾರ ಸವಿದರು. ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದ ನಂತರ ಕನ್ನಡಿಗರೊಂದಿಗೆ ಫೋಟೋ ತೆಗೆಸಿಕೊಂಡರು.

ಜೂನ್ 21ರಂದು ಐದು ದಿನಗಳ ಕಾಲ ಲಂಡನ್ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದ ಯಡಿಯೂರಪ್ಪ ನಂತರ ಅದನ್ನು 10 ದಿನಕ್ಕೆ ಮರು ನಿಗದಿಪಡಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಲಂಡನ್​ಗೆ ಹಾರಿದ್ದರು. ಆದರೆ, 10 ದಿನ ಕಳೆದರೂ ಬಿಎಸ್​ವೈ ಇನ್ನೂ ಲಂಡನ್​​ನಲ್ಲೇ ಇದ್ದು, ಮತ್ತೆ 8 ದಿನಗಳ ಕಾಲ ಪ್ರವಾಸವನ್ನು ವಿಸ್ತರಿಸಿಕೊಂಡಿದ್ದಾರೆ. ಜುಲೈ 8ರಂದು ಯಡಿಯೂರಪ್ಪ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ: ಪಾಲಿಕೆ ಆಡಳಿತ ಮಂಡಳಿಗೆ ಹೈಕೋರ್ಟ್‌ ಖಡಕ್​ ಎಚ್ಚರಿಕೆ

Last Updated : Jun 29, 2022, 10:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.