ಬೆಂಗಳೂರು : ಕನ್ನಡ ಕೇಂದ್ರಿತ ರಾಜಕಾರಣ ಎಂದರೆ ಕನ್ನಡ ವಿಚಾರದಲ್ಲಿ ರಾಜಕೀಯವಲ್ಲ. ಬದಲಿಗೆ ಕನ್ನಡದ ಶ್ರೇಯೋಭಿವೃದ್ಧಿಗಾಗಿನ ಹೋರಾಟದ ರಾಜಕಾರಣ. ಈ ವಿಚಾರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈಎಸ್‌ವಿ ದತ್ತ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಆಗುತ್ತಿರುವ ಹಾನಿಯನ್ನು ಚರ್ಚಿಸಲು ಅಧಿವೇಶನ ಕರೆಯಲು ಆಗ್ರಹಿಸಿದ್ದು, ಕೇರಳ ಪ್ರಕರಣ ಅದಕ್ಕೆ ತಾಜಾ ಉದಾಹರಣೆ ಎಂದಿದ್ದಾರೆ. ಕಾಸರಗೋಡಿನ ಗ್ರಾಮಗಳ ಹೆಸರಿನ ಮಲಯಾಳೀಕರಣ ಇಲ್ಲ ಎಂದು ಕೇರಳ ಸ್ಪಷ್ಟನೆ ನೀಡಿದೆ.
ಮಲಯಾಳೀಕರಣದ ಸಣ್ಣ ಸುಳಿವು ಸಿಗುತ್ತಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಅವರ ಒತ್ತಡಕ್ಕೆ ಕೇರಳ ಮಣಿದಂತಿದೆ. ಹೆಚ್ಡಿಕೆ "ಕನ್ನಡ ಕೇಂದ್ರಿತ" ರಾಜಕಾರಣ ಕರ್ನಾಟಕದಲ್ಲಿ ಪರ್ಯಾಯ ರಾಜಕಾರಣ ಮೂನ್ಸೂಚನೆ ನೀಡುತ್ತಿದೆ ಎಂದು ವೈಎಸ್‌ವಿ ದತ್ತ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಆನಂದಯ್ಯ ನಾಟಿ ಔಷಧಿ ಕೊರೊನಾ ನಿಯಂತ್ರಿಸೋಲ್ಲ ಎಂದ ಆಯುಷ್ ಇಲಾಖೆ.. ಆದ್ರೂ ಗೋವಿಂದ ಸರಸ್ವತಿ ಶ್ರೀಗಳಿಂದ ವಿತರಣೆ..