ETV Bharat / state

ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ವೈಎಸ್‌ವಿ ದತ್ತಾ ಒಂದು ಸಂದೇಶ ನೀಡಿದಾರೆ.. - ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ವೈ.ಎಸ್.ವಿ.ದತ್ತ ಸಲಹೆ

ಕಾರ್ಯಕರ್ತರು ಪಕ್ಷದ ವರ್ಚಸ್ಸು ಮತ್ತು ಬೆಳವಣಿಗೆ, ಭವಿಷ್ಯದ ಚುನಾವಣೆಗೆ ನಮ್ಮ ಮೊದಲನೇ ಆದ್ಯತೆಯಾಗಬೇಕು. ತಾಳ್ಮೆ ಕಳೆದುಕೊಳ್ಳದೆ ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ..

ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ವೈ.ಎಸ್.ವಿ.ದತ್ತ ಸಲಹೆ

author img

By

Published : Jul 10, 2021, 6:44 PM IST

ಬೆಂಗಳೂರು : ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ, ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಹೇಳಿದ್ದಾರೆ.

  • .@JanataDal_S ಪಕ್ಷದ ಕಾರ್ಯಕರ್ತರಿಗೊಂದು ಸಂದೇಶ

    ಅನಗತ್ಯವಾಗಿ ನಮ್ಮನ್ನು ಪ್ರಚೋದಿಸಿ ಕೆರಳಿಸಿ,ನಮ್ಮಿಂದಲೇ ನಮ್ಮ ಪಕ್ಷದ ವರ್ಚಸ್ಸು ಕಡಿಮೆಯಾಗುವಂತಹ ನಮ್ಮ ಎದುರಾಳಿಗಳ ತಂತ್ರಕ್ಕೆ ನಾವು ಬಲಿಯಾಗದಂತೆ ಸ್ವಯಂ ಸಹನೆ ಹಾಗೂ ಸಂಯಮವನ್ನು ತೋರಿಸುವುದು ಈ ಗಳಿಗೆಯ ನಮ್ಮೆಲ್ಲರ ಕರ್ತವ್ಯವಾಗಿದೆ. pic.twitter.com/oetzsFj1MO

    — YSV Datta (@YSV_Datta) July 10, 2021 " class="align-text-top noRightClick twitterSection" data=" ">

ಕಾರ್ಯಕರ್ತರಿಗೆ ಬರೆದಿರುವ ಪತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ಅವರು, ನಮ್ಮ ಪಕ್ಷದ ಕಾರ್ಯಕರ್ತರು ಸಂಯಮದಿಂದ ವರ್ತಿಸಿ ತಾಳ್ಮೆ ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳ ವೈಫಲ್ಯದಿಂದ ಜನ ನಲುಗಿದ್ದಾರೆ. ಹಾಗಾಗಿ, ನಾವು ವಿಷಯಾಂತರ ಮಾಡದೇ ಜನಪರ ಹೋರಾಟದ ಕಡೆ ಗಮನ ಹರಿಸೋಣ ಎಂದು ಸಲಹೆ ಮಾಡಿದ್ದಾರೆ.

ಕಾರ್ಯಕರ್ತರು ಪಕ್ಷದ ವರ್ಚಸ್ಸು ಮತ್ತು ಬೆಳವಣಿಗೆ, ಭವಿಷ್ಯದ ಚುನಾವಣೆಗೆ ನಮ್ಮ ಮೊದಲನೇ ಆದ್ಯತೆಯಾಗಬೇಕು. ತಾಳ್ಮೆ ಕಳೆದುಕೊಳ್ಳದೆ ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ ಎಂದು ದತ್ತಾ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಹಿಂದುಳಿದ ವರ್ಗವನ್ನು ಸೆಳೆಯುವ ಯತ್ನಕ್ಕೆ ಮುಂದಾದರೇ ವಿಪಕ್ಷ ನಾಯಕ ಸಿದ್ದರಾಮಯ್ಯ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.