ಬೆಂಗಳೂರು: ಚರ್ಚ್ ಸ್ಟ್ರೀಟ್ ಬಳಿ ಇರುವ ಅಂಗಡಿಯ ಶಟರ್ ಮೇಲೆ ಪೌರತ್ವ ಕಾಯ್ದೆ ವಿರುದ್ಧದ ಬರಹಗಳ ವಿಚಾರಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳೀದರು.
ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿಯ ಅವಹೇಳನಕಾರಿ ಬರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಿದ್ದೆವು. ಇದೀಗ ಆ ಆರೋಪಿಗಳನ್ನೆ ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದರು. ಅದೇ ರೀತಿ ಸದ್ಯ ಸಿಸಿ ಟಿವಿ ದೃಶ್ಯಾವಳಿ ಕೂಡ ವಶಕ್ಕೆ ಪಡೆದಿದ್ದೇವೆ. ಸಿಸಿ ಟಿವಿ ಆಧರಿಸಿ ಆರೋಪಿಗಳನ್ನ ಪತ್ತೆ ಹಚ್ತೇವೆ. ಸದ್ಯ ತನಿಖೆ ಮುಂದುವರಿದಿದ್ದು, ಆರೋಪಿಗಳನ್ನ ಸದ್ಯದಲ್ಲೇ ದಸ್ತಗಿರಿ ಮಾಡ್ತೇವೆ ಎಂದರು.
ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಆಗಮಿಸಿ ಅಂಗಡಿ ಮೇಲೆ ಬರೆದಿದ್ದ ಬರಹಗಳಿಗೆ ಪೇಂಟ್ ಹೊಡೆದು ಬರವಣಿಗೆ ಬರೆದ ಕಿಡಿಗೇಡಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿದರು.