ಬೆಂಗಳೂರು: ಬಹುಭಾರತಿ ಸಾಹಿತ್ಯ ಸಂಘ ರಾಜ್ಯ ಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದೆ.
ಬಹುಭಾರತಿ ಸಾಹಿತ್ಯ ಸಂಘದ ವತಿಯಿಂದ 'ಬಹುಭಾರತಿ ಕಾವ್ಯ ಬಹುಮಾನ ಸ್ಪರ್ಧೆ' ಹೆಸರಿನಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜನೆ ಮಾಡಿದ್ದು, 'ಭಾರತದ ಸಂವಿಧಾನ' ಎಂಬ ವಿಷಯದಲ್ಲಿ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.
ಕವನ ಬರೆಯಲು ಇಚ್ಛಿಸುವವರು ಇದೇ ತಿಂಗಳ 26ರ ಒಳಗೆ ಅಂಚೆ ಅಥವಾ ಇ ಮೇಲ್ ಮುಖಾಂತರ ಕಳುಹಿಸಬಹುದಾಗಿದೆ.