ETV Bharat / state

ಬಿಬಿಎಂಪಿ ಕಚೇರಿಯಲ್ಲಿ ಆರ್‌​ಎಸ್‌ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ, ವಿವಾದ

author img

By

Published : Nov 6, 2019, 6:58 PM IST

ಬಿಬಿಎಂಪಿ ಕಚೇರಿಯಲ್ಲಿ ಆರ್​​ಎಸ್​ಎಸ್ ಸಂಘಟನೆಯ ಮುಖಂಡರ ಫೋಟೋಗಳನ್ನಿಟ್ಟು ಪೂಜಿಸಲಾಗಿದೆ. ಬಿಬಿಎಂಪಿಯ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಪೂಜೆ ಸಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಆರ್​ಎಸ್​ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳ ಅಥವಾ ಖಾಸಗಿ ವ್ಯಕ್ತಿಗಳ ಫೋಟೋ ಲಗತ್ತಿಸಬಾರದು ಎಂಬ ಕಡ್ಡಾಯ ನಿಯಮವಿದೆ. ಆದ್ರೂ ಕಾನೂನುಬಾಹಿರವಾಗಿ ಆರ್​​ಎಸ್​ಎಸ್ ಸಂಘಟನೆ ಮುಖಂಡರ ಫೋಟೋಗಳನ್ನು ಬಿಬಿಎಂಪಿ ಕಚೇರಿಯಲ್ಲಿ ಇಟ್ಟು ಪೂಜಿಸುತ್ತಿರುವ ವಿಚಾರ ಗೊತ್ತಾಗಿದೆ.

ಇತ್ತೀಚೆಗಷ್ಟೇ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕನಾಗಿ ಆರ್​​ಎಸ್​ಎಸ್ ಹಿನ್ನೆಲೆಯುಳ್ಳ ಜಕ್ಕೂರು ವಾರ್ಡ್​ನ ಮುನೀಂದ್ರ ಕುಮಾರ್​ ಅವರನ್ನು ಸಂಘದ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿತ್ತು. ಇಂದು ಕಚೇರಿ ಪೂಜೆ ವೇಳೆ, ದೇವರ ಫೋಟೋದೊಂದಿಗೆ ಆರ್​​ಎಸ್​ಎಸ್ ಸಂಸ್ಥಾಪಕರಾದ ಕೆ.ಬಿ. ಹೆಡಗೆವಾರ್, ಎಮ್. ಎಸ್. ಗೋಲ್ವಾಲ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಆರ್​ಎಸ್​​ಎಸ್ ಸಂಘ ಪೂಜಿಸುವ ಭಾರತ ಮಾತೆಯ ಫೋಟೋ ಕೂಡಾ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ಆರ್​ಎಸ್​ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ, ವಿವಾದ

ಸರ್ಕಾರಿ ಕಚೇರಿಯ‌ನ್ನು ಆರ್​ಎಸ್​ಎಸ್ ಕಚೇರಿಯನ್ನಾಗಿ ಪರಿವರ್ತಿಸಿದ ಕುಮಾರ್ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಬಿಬಿಎಂಪಿಯ ಕೆಎಂಸಿ ಕಾಯ್ದೆ ಪ್ರಕಾರವೂ ಇದು ಕಾನೂನು ಬಾಹಿರವಾಗಿದೆ. ಗಾಂಧೀಜಿ, ಬಸವಣ್ಣ, ಸಿಎಂ, ಪಿಎಂ ಭಾವಚಿತ್ರಗಳನ್ನು ಬಿಟ್ಟರೆ, ಬೇರೆ ಯಾರ ಭಾವಚಿತ್ರವನ್ನೂ ಸರ್ಕಾರಿ ಕಚೇರಿಯಲ್ಲಿ ಲಗತ್ತಿಸುವ ಹಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುನೀಂದ್ರ ಕುಮಾರ್, ಗುರುಗಳಿಗೆ ವಂದನಾ ಅರ್ಪಣೆ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಗೆ ಶಕ್ತಿ ನೀಡಿದಂತಹ ಹಾಗೂ ದಾರಿ ತೋರಿಸಿದವರ ಫೋಟೋ ಇಟ್ಟು ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಆರ್​ಎಸ್​ಎಸ್ ಯಾವಾಗಲೂ ರಾಜಕೀಯದಲ್ಲಿ ಬೆರೆತಿಲ್ಲ. ಸಾಮಾಜಿಕ ಚಟುವಟಿಕೆಯನ್ನೇ ನಡೆಸಿಕೊಂಡು ಬಂದಿದೆ ಎಂದು ಸಮರ್ಥಿಸಿಕೊಂಡರು.

Intro:ಸರ್ಕಾರಿ ಕಚೇರಿಯಲ್ಲಿ ಆರ್ ಎಸ್ ಎಸ್ ನಾಯಕರ ಭಾವಚಿತ್ರಕ್ಕೆ ಪೂಜೆ!

ಬೆಂಗಳೂರು- ಸರ್ಕಾರಿ ಕಚೇರಿಗಳಲ್ಲಿ ಸಂಘ ಸಂಸ್ಥೆಗಳ ಅಥವಾ ಖಾಸಗಿ ವ್ಯಕ್ತಿಗಳ ಫೋಟೋ ಲಗತ್ತಿಸಬಾರದು ಎಂದು ಕಡ್ಡಾಯ ನಿಯಮವಿದೆ. ಆದ್ರೂ ಕಾನೂನುಬಾಹಿರವಾಗಿ ಆರ್ ಎಸ್ ಎಸ್ ಸಂಘಟನೆಯ ಮುಖಂಡರ ಫೋಟೋಗಳನ್ನು ಬಿಬಿಎಂಪಿ ಕಚೇರಿಯಲ್ಲಿ ಇಟ್ಟು ಪೂಜೆ ಸಲ್ಲಿಸಲಾಗಿದೆ. ಹೌದು ಇತ್ತೀಚೆಗಷ್ಟೇ ಬಿಬಿಎಂಪಿ ಪಕ್ಷದಿಂದ ಆಡಳಿತ ಪಕ್ಷದ ನಾಯಕನಾಗಿ, ಆರ್ ಎಸ್ ಎಸ್ ಹಿನ್ನಲೆಯ ಜಕ್ಕೂರು ವಾರ್ಡ್ ನ ಮುನೀಂದ್ರ ಕುಮಾರ್ ರನ್ನು ಸಂಘದ ಸೂಚನೆ ಮೇರೆಗೆ ಆಯ್ಕೆ ಮಾಡಲಾಗಿತ್ತು. ಇಂದು ಕಚೇರಿ ಪೂಜೆ ವೇಳೆ, ದೇವರ ಫೋಟೋದೊಂದಿಗೆ ಆರ್ ಎಸ್ ಎಸ್ ಸಂಸ್ಥಾಪಕರಾದ ಕೆ.ಬಿ.ಹೆಡಗೆವಾರ್ ಹಾಗೂ , ಎಮ್ ಎಸ್ ಗೋಲ್ವಾಲ್ಕರ್ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಆರ್ ಎಸ್ ಎಸ್ ಸಂಘ ಪೂಜೆಸುವ ಭಾರತ ಮಾತೆಯ ಫೋಟೋ ಕೂಡಾ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಸರ್ಕಾರಿ ಕಚೇರಿಯ‌ನ್ನು ಆರ್ ಎಸ್ ಎಸ್ ಕಚೇರಿಯಾಗಿ ಪರಿವರ್ತಿಸಿದುನೀಂದ್ರ ಕುಮಾರ್ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಬಿಬಿಎಂಪಿಯ ಕೆ.ಎಂಸಿ ಕಾಯ್ದೆ ಪ್ರಕಾರವೂ ಇದು ಕಾನೂನುಬಾಹಿರವಾಗಿದೆ. ಗಾಂಧೀಜಿ, ಬಸವಣ್ಣ, ಸಿಎಂ, ಪಿಎಂ ಭಾವಚಿತ್ರಗಳನ್ನು ಬಿಟ್ಟರೆ, ಬೇರೆ ಯಾರ ಭಾವಚಿತ್ರವನ್ನೂ ಸರ್ಕರಿ ಕಚೇರಿಯಲ್ಲಿ ಲಗತ್ತಿಸುವ ಹಾಗಿಲ್ಲ. ಇಷ್ಟಾದ್ರೂ ನಿಯಮಬಾಹಿರವಾಗಿ ಮುನಮದ್ರ ಕುಮಾರ್ ನಡೆದುಕೊಂಡಿದ್ದಾರೆ.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಮುನೀಂದ್ರ ಕುಮಾರ್,
ಗುರುಗಳಿಗೆ ವಂದನಾ ಅರ್ಪಣೆ ಸಮಯ ಇದು. ಹೀಗಾಗಿ ನಮ್ಮ ಸಂಘಟನೆ, ಶಕ್ತಿ ನೀಡಿದಂತಹ, ಹಾಗೂ ದಾರಿ ತೋರಿಸಿದವರ ಫೊಟೊ ಇಟ್ಟು ಪೂಜೆ ಸಲ್ಲಿಸಿದ್ದೇನೆ ಎಂದು ಮುನಿಂದ್ರ ಕುಮಾರ್ ಒಪ್ಪಿಕೊಂಡರು. ಅಲ್ಲದೆ ಆರ್ ಎಸ್ ಎಸ್ ಯಾವಾಗಲೂ ರಾಜಕೀಯದಲ್ಲಿ ಬೆರೆತಿಲ್ಲ. ಸಾಮಾಜಿಕ ಚಟುವಟಿಕೆಯನ್ನೇ ನಡೆಸಿಕೊಂಡು ಬಂದಿದೆ ಅಷ್ಟೇ ಎಂದು ಸಮರ್ಥಿಸಿಕೊಂಡರು.

ಸೌಮ್ಯಶ್ರೀ
Kn_bng_01_RSS_photo_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.