ಬೆಂಗಳೂರು :ಜನವರಿ 5 ರಂದು ಶ್ರೀ ಚೈತನ್ಯ ಟೆಕ್ನೋ ಶಾಲೆಯ 10 ರಾಜ್ಯಗಳ, 73 ಶಾಖೆಯ 2000ಕ್ಕೂ ಹೆಚ್ಚು ಪ್ರೈಮರಿ ವಿದ್ಯಾರ್ಥಿಗಳು 400 ಜೂಮ್ ಲಿಂಕ್ ನಿಂದ 100 ನಿಮಿಷಗಳಲ್ಲಿ 100 ಮ್ಯಾಥೆಮ್ಯಾಟಿಕ್ಸ್ ಟೇಬಲ್ಸ್ ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿ ವರ್ಲ್ಡ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಈ ಕುರಿತು ಇಂದು ಖಾಸಗಿ ಹೋಟೆಲ್ನಲ್ಲಿ ನೆಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಚೈತನ್ಯ ಶಾಲೆಗಳ ಶೈಕ್ಷಣಿಕ ನಿರ್ದೇಶಕಿ ಡಾ.ಸೀಮಾ ಈ ದಾಖಲೆಯನ್ನು ವರ್ಲ್ಡ್ ಆಪ್ ರೆಕಾರ್ಡ್ ಲಂಡನ್ ಮೇಲ್ವಿಚಾರಣೆ ನಡೆಸಿತು. ಇದರಿಂದ ಶಾಲೆ ವಿಶ್ವದಾಖಲೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮಕ್ಕಳ ಮಾನಸಿಕ ಬುದ್ದಿಮತ್ತೆ ಹೆಚ್ಚಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಸಾ(ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ) ಹಮ್ಮಿಕೊಳ್ಳುವ ವಿಶ್ವ ಸ್ಪೇಸ್ ಸೆಟಲ್ಮೆಂಟ್ ಸ್ಪರ್ಧೆಯಲ್ಲಿ ಶ್ರೀ ಚೈತನ್ಯ ಟೆಕ್ಕೋ ಶಾಲೆ ಭಾಗವಹಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮದಿಂದ ವಿಶ್ವ ದಾಖಲೆ ಸಾಧ್ಯವಾಗಿದೆ ಶ್ರೀ ಚೈತನ್ಯ ಶಾಲೆಗಳು ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಆಗಿದೆ. ಪ್ರೈಮರಿ ಪ್ರಿ-ಪ್ರೈಮರಿ, ಸ್ಥಾನದಲ್ಲಿ ಮಕ್ಕಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರತರಲು ಅವರ ಮೆದುಳಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡುವುದು, ಯಾವುದೇ ಒತ್ತಡವಿಲ್ಲದೇ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಬಾಲ್ಯದಿಂದಲೇ ಅವರನ್ನು ವಿಜೇತರನ್ನಾಗಿಸುವುದು ಶ್ರೀ ಚೈತನ್ಯ ಶಾಲೆಗಳ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ರಿಸರ್ಚ್ ಬೇಸ್ಡ್ ಕರಿಕ್ಯುಲಂ: ಶ್ರೀ ಚೈತನ್ಯ ಸೈಂಟಿಫಿಕ್ ಮೆಥಡ್ಸ್, ರಿಸರ್ಚ್ ಬೇಸ್ಡ್ ಕರಿಕ್ಯುಲಂ, ವೇಲ್ ಪ್ಲಾನ್ಡ್ ಟೀಚಿಂಗ್ ಸಿಸ್ಟಮ್ ಇದ್ದು ಅದಕ್ಕೆ ಇಂತಹ ವರ್ಲ್ಡ್ ರೆಕಾರ್ಡ್ ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.
ನಾಸಾ ಸ್ಪರ್ಧೆಯಲ್ಲಿ ಸತತ ಒಂಬತ್ತನೇ ವರ್ಷ ವಿಶ್ವ ಚಾಂಪಿಯನ್: ಪ್ರಪಂಚದಲ್ಲಿ ಏಷ್ಟೋ ದೇಶಗಳು ಭಾಗವಹಿಸುವ, ನಾಸಾ ಎನ್ಎಸ್ಎಸ್ ಸ್ಪೇಸ್ ಸೆಟ್ಲಮೆಂಟ್ ಸ್ಪರ್ಧೆಯಲ್ಲಿ ಶ್ರೀಚೈತನ್ಯ ಶಾಲೆ ಸತತ ಒಂಬತ್ತನೇ ವರ್ಷ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಶ್ರೀ ಚೈತನ್ಯ ಶಾಲೆಗಳ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿ. ಈ ಈವೆಂಟ್ನಲ್ಲಿ ಭಾಗವಹಿಸಿದ ಪುಟ್ಟ ಮಕ್ಕಳನ್ನು ಅಭಿನಂದಿಸಿದರು.
ಶ್ಲಾಘನೀಯ ಕಾರ್ಯಕ್ರಮ: ಶಾಲೆಯ ಮುಖ್ಯಸ್ಥ ಡಾ.ಬಿ.ಎಸ್. ರಾವ್ ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು. ಶಿಕ್ಷಕರು ಇಂತಹ ಪ್ರತಿಭಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ನಗರದ ಉಲ್ಲಾಳ ಶಾಲೆಯ 85 ವಿದ್ಯಾರ್ಥಿಗಳು ಭಾಗಿ: ಬೆಂಗಳೂರಿನ ಉಲ್ಲಾಳದಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ನ 85 ವಿದ್ಯಾರ್ಥಿಗಳು (ಮಾವೇರಿಕ್ಸ್) ಪಾಲ್ಗೊಂಡು 100 ನಿಮಿಷಗಳಲ್ಲಿ 1-100 ರವರೆಗೆ ಮಗ್ಗಿಯನ್ನು ಪಠಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್ ಪ್ರತೀ ವರ್ಷವೂ ಮಕ್ಕಳಿಗೆ ಬೇರೆ ಬೇರೆ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ತಮ್ಮ ಸಂಸ್ಥೆಯ ಮಕ್ಕಳ ಹೆಸರನ್ನು ವರ್ಲ್ಡ್ ರೆಕಾರ್ಡ್ ನಲ್ಲಿ ನೊಂದಾಯಿಸುವಲ್ಲಿ ಸಹಕರಿಸುತ್ತಾ ಬಂದಿದೆ. ಈ ಬಾರಿ ಮಕ್ಕಳಿಂದ ಮಗ್ಗಿ ಹೇಳಿಸುವ ಮೂಲಕ ಮತ್ತೊಂದು ದಾಖಲೆಯ ಪುಟ ತೆರೆದಿದ್ದಾರೆ. 2 ರಿಂದ 10 ವರ್ಷದೊಳಗಿನ ಮಕ್ಕಳು ಮಗ್ಗಿ ಹೇಳುವ ಮೂಲಕ ದಾಖಲೆ ಸೇರಿದ್ದು, ಈ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ ಪ್ರಾಂಶುಪಾಲರಾದ ಸಂದ್ಯಾ ಮಕ್ಕಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ :ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ರಾಮನಗರದ ಬಾಲಕಿ ಆಯ್ಕೆ