ಬೆಂಗಳೂರು: ಪುಟಾಣಿ ಮಕ್ಕಳಿಂದ ಹಿಡಿದು ಹಲ್ಲು ಬಿದ್ದ ಅಜ್ಜಿಯವರೆಗೂ ಚಾಕೊಲೇಟ್ ಅಂದರೆ ಅಚ್ಚುಮೆಚ್ಚು. ಬಾಯಿಗಿಟ್ಟರೆ ಕರಗುವ, ಕಟಕಟ ಜಗಿದರೆ ಅರೆಕ್ಷಣದಲ್ಲಿ ನೀರಾಗುವ ಚಾಕೊಲೇಟ್ಗೆ ಸಖತ್ ಬೇಡಿಕೆ ಇದೆ.
ಅಂದಹಾಗೆ, ಇವತ್ತು ವರ್ಲ್ಡ್ ಚಾಕೊಲೇಟ್ ಡೇ. ಹೀಗಾಗಿಯೇ ಕೋರಮಂಗಲದ ಆಬ್ರಿ ಚಾಕೊಲೇಟ್ ಸೆಂಟರ್ನಲ್ಲಿ ಇಂದು ನೂರಾರು ಬಗೆಯ ಚಾಕೊಲೇಟ್ಗಳನ್ನ ಪ್ರದರ್ಶನ ಮಾಡಲಾಯಿತು.
ಚಾಕೋಲೇಟ್ನಲ್ಲಿ ಚದುರಂಗ, ಚಾಕೋಲೇನಲ್ಲೆ ವಿಶ್ವಕಪ್
ವಿಶ್ವ ಚಾಕೊಲೇಟ್ ದಿನದ ಅಂಗವಾಗಿ ಚಾಕೊಲೇಟ್ನಲ್ಲೇ ವರ್ಲ್ಡ್ ಕಪ್ ತಯಾರಿಸಲಾಗಿದೆ. ಡಾರ್ಕ್ ಚಾಕೊಲೇಟ್ ಬಳಸಿ, ಸುಮಾರು 20 ಕೆಜಿಯ ವರ್ಲ್ಡ್ ಕಪ್ ಪ್ರತಿಯನ್ನು ಮಾಡಲಾಗಿದೆ. ಈಗಾಗಲೇ ಚಾಕೊಲೇಟ್ ಪ್ರದರ್ಶನಕ್ಕೆ ಇಟ್ಟಿದ್ದು, ಚಾಕೊಲೇಟ್ ಸವಿಯಲು ಬರೋ ಮಂದಿ ಫೋಟೋ ಕಿಕ್ಲಿಸಿಕೊಳ್ಳುತ್ತಿದ್ದಾರೆ. ವರ್ಲ್ಡ್ ಕಪ್ ಮ್ಯಾಚ್ ಮುಗಿದ ಮೇಲೆ ಅದನ್ನ ಸಾರ್ವಜನಿಕರಿಗೆ ಹಂಚಲಾಗುವುದು ಅಂತಾ ಅಂಗಡಿ ಮಾಲೀಕರಾದ ಕಿಶೋರ್ ತಿಳಿಸಿದ್ದಾರೆ. ಇನ್ನು ಚದುರಂಗ ಆಟ ಥೀಮ್ನ ಚಾಕೊಲೇಟ್, ಟೂ ವ್ಹೀಲರ್, ಟೆಡ್ಡಿ ಬೇರ್, ಪೆಗ್ವಿನ್ ಹೀಗೆ ನಾನಾ ಆಕಾರದ ಚಾಕೊಲೇಟ್ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಕಾಫಿ ಡಾರ್ಕ್, ಡಾರ್ಕ್ ಆಲಮಂಡ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಬಗೆಯ ಹಲವು ದೇಶಗಳ ಆಯ್ದ ಚಾಕೊಲೇಟ್ಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಹೆಸರಿನಲ್ಲಿ ಕಿಕ್ ಕೊಟ್ಟು ತಿನ್ನುವ ಆಸೆ ಬರಿಸುವ ಚಾಕೊಲೇಟ್ ಈಗ ಎಲ್ಲರನ್ನೂ ಸೆಳೆಯುತ್ತಿವೆ. ಇನ್ನು ಚಾಕೊಲೇಟ್ ಡೇ ಅಂಗವಾಗಿ ಗ್ರಾಹಕರಿಗೆ ಆಫರ್ ನೀಡಲಾಗುತ್ತಿದೆ.