ಬೆಂಗಳೂರು: ನೈಸರ್ಗಿಕ ಆರೋಗ್ಯ ಕ್ರಮದ ಮೂಲಕ ಮಹಾಮಾರಿ ಕೋವಿಡ್ 19 ಸೋಂಕನ್ನು ತಡೆಗಟ್ಟುವ ಕುರಿತು ಪ್ರಖ್ಯಾತ ನ್ಯಾಚುರೋಪತಿ ವೈದ್ಯನಡಾ. ಅರುಣ್ ಶರ್ಮಾ ಅವರು ಅಕ್ಟೋಬರ್ 29 ರಿಂದ ನವೆಂಬರ್ 4ವರೆಗೆ ದೇವನಹಳ್ಳಿಯ ಐವಿಸಿ ರಸ್ತೆ ಬಳಿ ಇರೋ ಸ್ಕೂಲ್ ಆಫ್ ಏನ್ಶಿಯೆಂಟ್ ವಿಸ್ಡಮ್ ಆವರಣದಲ್ಲಿ ಕಾರ್ಯಾಗಾರ ನಡೆಸಲಿದ್ದಾರೆ.
ಪಾರಂಗತ ಡಾ. ಅರುಣ್ ಶರ್ಮಾ : ಭಾರತದಲ್ಲಿ ಸನಾತನ ಕಾಲದಿಂದಲೂ ಬಳಕೆಯಲ್ಲಿರುವ ನೈಸರ್ಗಿಕ ವಿಧಾನಗಳನ್ನು ಹಳೆಯ ತಾಳೆಗರಿಗಳಲ್ಲಿ ಬರೆದಿಡಲಾಗಿದೆ. ನೈಸರ್ಗಿಕ ಆರೋಗ್ಯ ಪದ್ಧತಿಯ ಪಿತಾಮಹ ಎಂದೇ ಪರಿಗಣಿಸಲ್ಪಡುವ ಆಚಾರ್ಯ ಲಕ್ಷ್ಮಣ ಶರ್ಮಾ ಅವರ ವಂಶದ ಕುಡಿಯಾಗಿರುವ ಡಾ.ಅರುಣ್ ಶರ್ಮಾ ಅವರೂ ಸಹ ನೈಸರ್ಗಿಕ ಆರೋಗ್ಯ ಪದ್ಧತಿಯಲ್ಲಿ ಪಾರಂಗತರಾಗಿದ್ದಾರೆ.
ನೈಸರ್ಗಿಕ ಸ್ವಚ್ಛತೆ ಎಂಬುದು ಸಂಪೂರ್ಣ ಸರಳ, ಸುಲಭ ಮತ್ತು ಸುರಕ್ಷಿತ ವೈಜ್ಞಾನಿಕ ವಿಧಾನವಾಗಿದೆ. ಇದು ಇತ್ತೀಚಿನ ದಿನಗಳ ಅಗತ್ಯವೂ ಹೌದು. ನೈಸರ್ಗಿಕ ಅರೋಗ್ಯ ಕ್ರಮಗಳ ಕುರಿತು ತಿಳಿದುಕೊಂಡು ಅವುಗಳನ್ನು ಅನುಸರಿಸಿ ಹೊಸ ರೀತಿಯ ಅನುಭವ ಪಡೆಯಲಿಚ್ಛಿಸುವ, ಸ್ವತಃ ಇದರ ಪ್ರಭಾವಕಾರಿ ಅಂಶಗಳನ್ನು ಅರಿಯುವ ಆಸಕ್ತಿಯುಳ್ಳವರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.
ಸ್ಕೂಲ್ ಆಫ್ ಏನ್ಶಿಯೆಂಟ್ ವಿಸ್ಡಮ್
ಈವಿಸಿ ರಸ್ತೆ, ದೇವನಹಳ್ಳಿ, ಬೆಂಗಳೂರು-562 110
ದಿನಾಂಕ- 29 ಅಕ್ಟೋಬರ್ ನಿಂದ ನವೆಂಬರ್ 4, 2020ರವರೆಗೆ
ಹೆಚ್ಚಿನ ಮಾಹಿತಿಗಾಗಿ - 94487 10000