ETV Bharat / state

Women safety: ಮಹಿಳಾ ಸುರಕ್ಷತೆ ಕುರಿತು ಪಾರ್ಕ್​ಗಳಲ್ಲಿ ಅರಿವು ಮೂಡಿಸಿದ ಬೆಂಗಳೂರು ಸಿಟಿ ಪೊಲೀಸರು.. ಸೇಫ್ಟಿ ಐಲ್ಯಾಂಡ್​ ಕುರಿತು ಮಾಹಿತಿ - ಮಹಿಳಾ ಸುರಕ್ಷತೆ

ಬೆಂಗಳೂರಿನ ಪಾರ್ಕ್​ಗಳಲ್ಲಿ ಮಂಗಳವಾರ ಸಿಟಿ ಪೊಲೀಸರು ಮಹಿಳಾ ಸುರಕ್ಷತೆ ಕುರಿತು ಅರಿವು ಮೂಡಿಸಿದರು.

City police
ಮಹಿಳಾ ಸುರಕ್ಷತೆ ಕುರಿತು ಪಾರ್ಕ್​ಗಳಲ್ಲಿ ಅರಿವು ಮೂಡಿಸಿದ ಸಿಟಿ ಪೊಲೀಸರು
author img

By

Published : Jun 27, 2023, 9:01 PM IST

ಬೆಂಗಳೂರು: ನಗರದ ಮಹಿಳೆಯರಲ್ಲಿ ಸುರಕ್ಷತೆಯ ಭಾವನೆ ಗಟ್ಟಿಗೊಳಿಸಲು ಹಾಗೂ ಅಪರಾಧ ನಡೆದಾಗ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಕಳೆದ ವಾರ ಜನಸಂದಣಿ ಪ್ರದೇಶ ಹಾಗೂ ಬಸ್​ಗಳಲ್ಲಿ ತೆರಳಿ ಜಾಗೃತಿ ಮೂಡಿಸಿದ್ದ ಪೊಲೀಸರು, ಇದೀಗ ಪಾರ್ಕ್​ಗಳಿಗೆ ಹೋಗಿ ಅರಿವು ಮೂಡಿಸಿದರು.

ಅಪಾಯ ಸಂದರ್ಭಗಳಲ್ಲಿ ಪೊಲೀಸರಿಗೆ ಸಂಪರ್ಕಿಸುವ ಸಹಾಯವಾಣಿ 112ಗೆ ಕರೆ, ಸೇಫ್ಟಿ ಐಲ್ಯಾಂಡ್ ಬಳಕೆ, ಸಾಮಾಜಿಕ ಜಾಲತಾಣ ಹೇಗೆ ಬಳಸಬೇಕು ಎಂಬುದರ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ತೆರಳಿ ಜಾಗೃತಿ ಮೂಡಿಸಿದ್ದರು. ಇದೀಗ ಬೆಳಗ್ಗೆ ಹಾಗೂ ಸಂಜೆ ವೇಳೆ ತೆರಳಿ ಪಾರ್ಕ್​ಗಳಿಗೆ ಹೋಗುವ ಮಹಿಳೆಯರಿಗೆ ಅಪರಾಧ ನಿಯಂತ್ರಣ ಬಗ್ಗೆ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಪೊಲೀಸರು ಅರಿವು ಮೂಡಿಸಿದರು.

ಸರಗಳ್ಳತನ, ಬ್ಯಾಂಕಿಂಗ್ ವಂಚನೆ ಸೇರಿದಂತೆ ಮಹಿಳೆಯರ ಮೇಲಾಗುವ ಅಪರಾಧ ಪ್ರಕರಣಗಳು ಹಾಗೂ ಕರ್ನಾಟಕ ಪೊಲೀಸ್ ಆ್ಯಪ್, ಪೊಲೀಸ್ ಕಂಟ್ರೋಲ್ ನಂಬರ್ 112 ಕರೆ, ಸಾಮಾಜಿಕ ಜಾಲತಾಣಗಳ ಬಳಕೆ ಸೇರಿದಂತೆ ಅರಿವು ಮೂಡಿಸುವಂತೆ ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಟಾಸ್ಕ್ ನೀಡಿದ್ದರು. ಇದರಂತೆ ನಗರ ಪೊಲೀಸರು ಪಾರ್ಕ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸಿ ಜನಸ್ನೇಹಿ ಪೊಲೀಸ್​ಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ಭಿತ್ತಿಪತ್ರ ಅಂಟಿಸುತ್ತಿದ್ದಾರೆ.

ಇ- ಪ್ರತಿಜ್ಞೆಗೆ ಉತ್ತಮ ಮೆಚ್ಚುಗೆ: ವಿಶ್ವ ಮಾದಕ ವಸ್ತು ಸೇವನೆ ಹಾಗೂ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಸಾರ್ವಜನಿಕರನ್ನ ಅಭಿಯಾನದಲ್ಲಿ ತೊಡಗಿಸಿ ಅವರನ್ನ ಭಾಗಿಯಾಗಲು say yes to life, No to Drugs ಎಂಬ ಧ್ಯೇಯವಾಕ್ಯ ಬಳಸಿದ್ದರು. ಕ್ಯೂ ಆರ್ ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ನಗರ ಪೊಲೀಸರು ಮನವಿ ಮಾಡಿದ್ದರು.‌ ಮನವಿಗೆ ಸ್ಪಂದಿಸಿರುವ ನಾಗರಿಕರು ಒಂದೇ ದಿನದಲ್ಲೇ 30 ಸಾವಿರ ಜನರು ನೋಂದಣಿಯಾಗಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಸೇಫ್ಟಿ ಐಲ್ಯಾಂಡ್ ಸಾಧನಗಳು: ಸೇಫ್ಟಿ ಐಲ್ಯಾಂಡ್ ಸಾಧನಗಳು ಬೆಂಗಳೂರಿನ ವಿವಿಧ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾದ ನೀಲಿ ಬಣ್ಣದಲ್ಲಿರುವ ಟೆಲಿಫೋನ್ ಬೂತ್‌ನಂತತೆ ಕಾಣುತ್ತವೆ. ಯಾವುದೇ ವ್ಯಕ್ತಿ ಸಂಕಷ್ಟದಲ್ಲಿರುವಾಗ ಹಾಗೂ ಪೊಲೀಸರು ದೂರದಲ್ಲಿರುವಾಗ ಮತ್ತು ಅವರ ಮೊಬೈಲ್ ಫೋನ್‌ಗೆ ದೊರೆಯದಿದ್ದಾಗ, ಅವರು ಹತ್ತಿರದ ಪೊಲೀಸ್ ಸ್ಟೇಷನ್​ಗಳನ್ನು ಸಂಪರ್ಕಿಸಲು ಸೇಫ್ಟಿ ಐಲ್ಯಾಂಡ್ ಯಂತ್ರಗಳನ್ನು ಬಳಕೆ ಮಾಡಹುದು. ಪ್ರತಿಯೊಂದು ಸೇಫ್ಟಿ ಐಲ್ಯಾಂಡ್ ಸಾಧನದ ಸಮೀಪದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದು ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಸರಿಯಾದ ವೇಳೆ ಮಾಹಿತಿಯನ್ನು ನೀಡುತ್ತದೆ. ಬಳಕೆದಾರರು ಸಾಧನದಲ್ಲಿರುವ ಎಸ್​ಒಎಸ್​ ಬಟನ್ ಕ್ಲಿಕ್ ಮಾಡಬೇಕು. ಇದು ಸಮೀಪದ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಆದಷ್ಟು ಬೇಗ ಆ ಪ್ರದೇಶವನ್ನು ತಲುಪುತ್ತಾರೆ.

ಇದನ್ನೂ ಓದಿ: ಮುಂಗಾರು ವಿಳಂಬ: ವಿಜಯಪುರದ ಆಲಮಟ್ಟಿ ಜಲಾಶಯದಲ್ಲಿ ಕುಸಿಯುತ್ತಿದೆ ನೀರಿನ ಮಟ್ಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.