ಬೆಂಗಳೂರು: ಆಸ್ಪತ್ರೆಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ವಿಕೃತ ಆನಂದ ಅನುಭವಿಸುತ್ತಿದ್ದ ಕಾಮುಕನನ್ನು ತಿಲಕ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ಅಸ್ಪತ್ರೆಯೊಂದರ ವೈದ್ಯೆ ನೀಡಿದ ದೂರಿನ ಮೇರೆಗೆ ಲ್ಯಾಬ್ ಟೆಕ್ನಿಷಿಯನ್ ಮಾಲತೇಶ್ನನ್ನು ಬಂಧಿಸಲಾಗಿದೆ. ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಮಾಡುತ್ತಿದ್ದ ಮನೋಜ್ ಹೆಚ್ಚಾಗಿ ಆಪರೇಷನ್ ಥಿಯೇಟರ್ನಲ್ಲಿ ಇರುತ್ತಿದ್ದ. ಆಪರೇಷನ್ ಮಾಡುವ ಮುನ್ನ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನೇ ಕಾಯುತ್ತಿದ್ದ. ಬಟ್ಟೆ ಚೇಂಜ್ ಮಾಡಲು ಆಗಮಿಸುತ್ತಿದ್ದ ಆರೋಪಿ ಚಾರ್ಜಿಂಗ್ ನೆಪದಲ್ಲಿ ಮೊಬೈಲ್ ಅಲ್ಲೇ ಇಡುತ್ತಿದ್ದ. ಬಳಿಕ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಬಳಿಕ ಮನೆಗೆ ಹೋಗಿ ಒಬ್ಬಂಟಿಯಾಗಿ ನೋಡಿ ವಿಕೃತ ಆನಂದ ಪಡುತ್ತಿದ್ದ ಎನ್ನಲಾಗ್ತಿದೆ.
ಇತ್ತೀಚೆಗೆ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ಚಾರ್ಜಿಂಗ್ ಹಾಕಿದ್ದ ಮೊಬೈಲ್ ಅನ್ನು ಗಮನಿಸಿದ್ದಾರೆ. ಅನುಮಾನಗೊಂಡು ಪರಿಶೀಲಿಸಿದಾಗ ರೆರ್ಕಾಡಿಂಗ್ ಮೋಡ್ನಲ್ಲಿ ಇರುವುದು ಗೊತ್ತಾಗಿದೆ. ಮೊಬೈಲ್ ಗ್ಯಾಲರಿ ನೋಡಿದಾಗ ಅಸಲಿ ವಿಚಾರ ಗೊತ್ತಾಗಿದೆ. ಈ ಸಂಬಂಧ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ದರ ತಗ್ಗಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ RBI ಗವರ್ನರ್ ತಾಕೀತು