ETV Bharat / state

#jeenedo ಗೋವಾ ಸಿಎಂ ಅತ್ಯಾಚಾರ ಹೇಳಿಕೆಗೆ ಖಂಡನೆ : ಪಿಎಂ-ಸಿಎಂಗೆ ಪಾಠ ಮಾಡ್ಬೇಕು ಎಂದ ಮಹಿಳಾ ಹೋರಾಟಗಾರರು - ಮಹಿಳಾ ಉದ್ಯಮಿಗಳ ವೇದಿಕೆಯ ಸಂಸ್ಥಾಪಕಿ ರೂಪಾರಾಣಿ

ಅಪ್ರಾಪ್ತ ಬಾಲಕಿಯವರ ಅತ್ಯಾಚಾರ ಕುರಿತ ಗೋವಾ ಸಿಎಂ ಹೇಳಿಕೆಗೆ ರಾಜ್ಯದಲ್ಲಿಯೂ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಕುರಿತಾಗಿ ವಿರೋಧ ವ್ಯಕ್ತಪಡಿಸಿರುವ ಮಹಿಳಾ ಹೋರಾಟಗಾರರು ಮತ್ತು ಮಹಿಳಾ ಉದ್ಯಮಿಗಳು ಮುಖ್ಯಮಂತ್ರಿ ಪ್ರಮೋದ್​ ಅತ್ಯಾಚಾರಿಗಳಿಗೆ ಕುಮ್ಮಕ್ಕು ಕೊಡುವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಖಾರವಾಗಿ ಖಂಡಿಸಿದ್ದಾರೆ..

woman-fighter-condemned-on-goa-cm-rape-case-statement
ಗೋವಾ ಸಿಎಂ
author img

By

Published : Jul 31, 2021, 4:12 PM IST

Updated : Aug 4, 2021, 3:25 PM IST

ಬೆಂಗಳೂರು : ಗೋವಾದ ಬೆನೌಲಿಮ್ ಕಡಲತೀರದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣಕ್ಕೆ ಅಲ್ಲಿನ ಸಿಎಂ ಪ್ರಮೋದ್ ಸಾವಂತ್, ಹೆಣ್ಣುಮಕ್ಕಳು ಏಕೆ ರಾತ್ರಿಯಿಡೀ ಹೊರಗೆ ಹೋಗುತ್ತಾರೆ? ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ರೀತಿಯಲ್ಲಿ ನೀಡಿರುವ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿದೆ.

ಇದು ಅತ್ಯಾಚಾರಿಗಳಿಗೇ ಪರೋಕ್ಷವಾಗಿ ಕುಮ್ಮಕ್ಕು ನೀಡಿದ ರೀತಿಯಾಗಿದೆ ಎಂದು ಮಹಿಳಾಪರ ಹೋರಾಟಗಾರ್ತಿ, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಕೆ ಎಸ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ರಾಜ್ಯದ ಮಹಿಳಾಪರ ಹೋರಾಟಗಾರರು, ಮಹಿಳಾ ಉದ್ಯಮಿಗಳು ಗೋವಾ ಸಿಎಂ ಹೇಳಿಕೆ ಖಂಡಿಸಿ ಪ್ರತಿಕ್ರಿಯಿಸಿದ್ದಾರೆ.

ಗೋವಾ ಸಿಎಂ ಅತ್ಯಾಚಾರ ಹೇಳಿಕೆಗೆ ವ್ಯಾಪಕ ಖಂಡನೆ

ಜನವಾದಿ ಮಹಿಳಾ ಸಂಘಟನೆಯ ವಿಮಾಲಾ ಕೆ.ಎಸ್ ಅವರು ಮಾತನಾಡಿ, ಹೆಣ್ಣುಮಕ್ಕಳ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರಕ್ಕೆ ಕುಮ್ಮಕ್ಕು ಕೊಡುವ ರೀತಿ ಗೋವಾ ಸಿಎಂ ಸದನದಲ್ಲಿ ಮಾತನಾಡಿದ್ದಾರೆ. ಇದು ಯಾವ ರೀತಿಯಲ್ಲೇ ಹೇಳಿದ್ದರೂ ಇದು ಆಕ್ಷೇಪಾರ್ಹ, ಅತ್ಯಂತ ಖಂಡನೀಯವಾಗಿದೆ.

ಸಂವಿಧಾನಿಕ ಹುದ್ದೆಯಲ್ಲಿದ್ದು, ಸುಭದ್ರ ಸರ್ಕಾರ ನೀಡುವ ಪ್ರತಿಜ್ಞೆ ಮಾಡುವವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅತ್ಯಾಚಾರ ಮಾಡುವವರಿಗೆ ನಿಮ್ಮದೇನೂ ತಪ್ಪಿಲ್ಲ, ಆ ವೇಳೆಯಲ್ಲಿ ಓಡಾಡಿದವರದ್ದೇ ತಪ್ಪು ಎನ್ನುವ ಸೂಚನೆ ಕೊಟ್ಟಿದ್ದಾರೆ.

ಗೋವಾ ಸಿಎಂ ಮನುವಿನ ವಾರಸುದಾರ ಅನ್ನೋದು ಸಾಬೀತು : ಇದನ್ನು ಸುಭದ್ರ ಸರ್ಕಾರ ಎನ್ನಲು ಸಾಧ್ಯವಾ?, ಇದು ಮುಖ್ಯಮಂತ್ರಿಯ ಸ್ಥಾನದ ಘನತೆಗೆ ಚ್ಯುತಿ ತರುವುದಲ್ಲದೇ, ತಾವು ಮನುವಿನ ವಾರಸುದಾರ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಅತ್ಯಾಚಾರ, ದೌರ್ಜನ್ಯ ನಡೆದ ತಕ್ಷಣ, ಹೆಣ್ಣುಮಕ್ಕಳ ನಡೆ, ನುಡಿ, ಬಟ್ಟೆಯ ಬಗ್ಗೆಯೇ ಹೇಳಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಕೆಲಸವನ್ನು ಸಮಾಜ ಮತ್ತು ಆಡಳಿತ ನಡೆಸುವವರೇ ಹೇಳಿ, ಪರೋಕ್ಷವಾಗಿ ಅತ್ಯಾಚಾರಿಗಳಿಗೆ ಕುಮ್ಮಕ್ಕು ಕೊಡುವ ತರ ಮಾತನಾಡಿದ್ದಾರೆ. ಆ ರಾಜ್ಯದಲ್ಲಿ ಅತ್ಯಾಚಾರ, ದೌರ್ಜನ್ಯ ಎಸಗುವವರಿಗೆ ಫ್ರೀ ಲೈಸೆನ್ಸ್ ಕೊಟ್ಟ ರೀತಿ ಆಗಲ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಸಿಎಂಗೆ ಪಾಠ ಮಾಡಬೇಕು : ಪ್ರಗತಿಪರ ಹೋರಾಟಗಾರ್ತಿ ಜ್ಯೋತಿ ಅನಂತಸುಬ್ಬರಾವ್ ಮಾತನಾಡಿ, ಗೋವಾದ ಮುಖ್ಯಮಂತ್ರಿ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ತಮ್ಮ ಹೇಳಿಕೆಗೆ ಖಂಡನೆ ವ್ಯಕ್ತವಾದ ಮೇಲೆ ಇವತ್ತು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಇದು ಸಿಎಂ ಅವರ ಅಸೂಕ್ಷ್ಮತೆ ತೋರಿಸುತ್ತದೆ. ಮಹಿಳೆಯರು, ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ತೋರಿಸುತ್ತದೆ. ಹೆಣ್ಣುಮಕ್ಕಳ ಮೇಲೆ ಇಷ್ಟೆಲ್ಲ ಪೋಕ್ಸೋ ಪ್ರಕರಣ ಆದ್ರೂ ಗಂಭೀರವಾಗಿ ಪರಿಗಣಿಸಬೇಕಾದ ಸರ್ಕಾರ ಈ ರೀತಿ ನಡೆದುಕೊಂಡಿದ್ದು ವಿಪರ್ಯಾಸ. ಅವರದೇ ಪಕ್ಷದ ಪ್ರಧಾನಿ ಭೇಟಿ ಬಚಾವೋ, ಭೇಟಿ ಪಡಾವೋ ಅಂತಾರೆ. ಹೀಗಾಗಿ, ಮೋದಿಯವರು ತಮ್ಮ ಪಕ್ಷದ ಸಿಎಂಗಳಿಗೆ ಪಾಠ ಮಾಡಬೇಕಿದೆ ಎಂದರು.

ದೌರ್ಜನ್ಯ ತಡೆಗಟ್ಟುವ ಬದಲು, ಪೋಷಕರ ಮೇಲೆ ಆರೋಪ ಸರಿಯಲ್ಲ : ಪೋಷಕರು ತಮ್ಮ ಮಕ್ಕಳು ಚೆನ್ನಾಗಿರಬೇಕು ಅಂತಾ ಬಯಸುತ್ತಾರೆ. ನಮ್ಮ ದೇಶದಲ್ಲಿ ಸುರಕ್ಷತೆ ಇಲ್ಲ ಎಂದು ಹೇಳಬೇಕಾಗುತ್ತದೆ. ನೂರಾರು ಜನ ಓಡಾಡುವ ಟೂರಿಸ್ಟ್ ಸ್ಥಳ ಆಗಿರುವ ಗೋವಾ ಬೀಚ್​ನಲ್ಲಿ ಕ್ಯಾಮೆರಾ ಹಾಕಬೇಕು, ಪೊಲೀಸರನ್ನು ನೇಮಕ ಮಾಡಬೇಕು. ದೌರ್ಜನ್ಯ ತಡೆಗಟ್ಟುವ ಬದಲು, ತಂದೆ-ತಾಯಿಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಹೆಣ್ಣುಮಕ್ಕಳಿಗೆ ಮನೆಯಿಂದ ಆಚೆ ಕಳಿಸಲು ಸುರಕ್ಷತೆ ಬೇಕು ಎಂದು ಮಹಿಳಾ ಉದ್ಯಮಿಗಳ ವೇದಿಕೆಯ ಸಂಸ್ಥಾಪಕಿಯಾದ ರೂಪಾರಾಣಿಯವರು ಆಗ್ರಹಿಸಿದ್ದಾರೆ.

Last Updated : Aug 4, 2021, 3:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.