ETV Bharat / state

ವಿಧಾನಸಭೆಯತ್ತ ಗಮನ ಹರಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್.. ಆಯ್ಕೆ ಕ್ಷೇತ್ರ ಯಾವುದು ಗೊತ್ತಾ? - ವಿಧಾನಸಭೆಯತ್ತ ಗಮನ ಹರಿಸಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

ಇದೀಗ 2023ರ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅವರು ತಮ್ಮ ತವರು ಜಿಲ್ಲೆಯಾದ ಮೈಸೂರಿನಿಂದ ಕಣಕ್ಕಿಳಿಯುವ ಯತ್ನ ನಡೆಸಿದ್ದಾರೆ.

pushpa amarnath
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್
author img

By

Published : Nov 12, 2022, 12:22 PM IST

ಬೆಂಗಳೂರು: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ನಿವಾಸಕ್ಕೆ ನಿತ್ಯ ಭೇಟಿ ನೀಡುತ್ತಿದ್ದು, ಮೈಸೂರು ಇಲ್ಲವೇ ಚಾಮರಾಜನಗರ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಕೆಳ ಮನೆಗೆ ಸ್ಪರ್ಧಿಸುವ ಆಶಯ ಹೊಂದಿದ್ದಾರೆ.

ಐದಾರು ತಿಂಗಳ ಹಿಂದೆ ವಿಧಾನ ಪರಿಷತ್​ಗೆ ನಾಮನಿರ್ದೇಶನಗೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗಿರುವ ಅವರು, ಅವಕಾಶ ಸಿಕ್ಕರೆ ವಿಧಾನಸಭೆ ಪ್ರವೇಶಕ್ಕೆ ಪ್ರಯತ್ನ ನಡೆಸಲು ಮುಂದಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶ್ರೀರಕ್ಷೆಯಿಂದ 2019ರ ಫೆಬ್ರವರಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಮೂರು ವರ್ಷದ ಕಾಲಾವಧಿಗೆ ಆಯ್ಕೆಯಾಗಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಿದ ಡಿ.ಕೆ. ಶಿವಕುಮಾರ್ ಸಹ ಇವರನ್ನು ಬದಲಿಸುವ ಕಾರ್ಯ ಮಾಡಿಲ್ಲ.

ಆರೇಳು ತಿಂಗಳಿಂದೇಚೆಗೆ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಮಹಿಳಾ ಪ್ರತಿನಿಧಿಗಳು ತಮ್ಮ ಅವಧಿ ಪೂರ್ಣಗೊಳಿಸಿದ ಸಂದರ್ಭ ಕನಿಷ್ಠ ಒಬ್ಬರಿಗಾದರೂ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆ ಸಂದರ್ಭ ಡಾ. ಪುಷ್ಪಾ ಅಮರನಾಥ್ ವಿಧಾನ ಪರಿಷತ್ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ, ಆಯ್ಕೆಯಾಗುವ ಅವಕಾಶ ಒದಗಿ ಬಂದಿರಲಿಲ್ಲ.

pushpa amarnath
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್

ಇದನ್ನೂ ಓದಿ: ಪುಷ್ಪಾ ಅಮರನಾಥ್​ ಪರ ಲಾಬಿಗೆ ಹೋದ್ರು.. ಸಿದ್ದರಾಮಯ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಾಪಸಾದ್ರು

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಅಖಾಡ: ಇದೀಗ 2023ರ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಪುಷ್ಪಾ ಅವರು ತಮ್ಮ ತವರು ಜಿಲ್ಲೆಯಾದ ಮೈಸೂರಿನಿಂದ ಕಣಕ್ಕಿಳಿಯುವ ಯತ್ನ ನಡೆಸಿದ್ದಾರೆ. ಜಿಲ್ಲೆಯ 11 ಕ್ಷೇತ್ರಗಳ ಪೈಕಿ 2013 ರಲ್ಲಿ ಕಾಂಗ್ರೆಸ್ 8 ಕ್ಷೇತ್ರವನ್ನು ಗೆದ್ದುಕೊಂಡಿದ್ದು, ಆದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಸಂಖ್ಯೆ 3 ಕ್ಕೆ ಕುಸಿದಿದೆ. 3 ಸ್ಥಾನ ಗೆದ್ದಿದ್ದ ಜೆಡಿಎಸ್ ಇನ್ನೆರಡು ಸ್ಥಾನ ಹೆಚ್ಚಾಗಿ ಗಳಿಸಿದ್ದರೆ, ಶೂನ್ಯವಿದ್ದ ಬಿಜೆಪಿ 3 ಸ್ಥಾನ ಗೆದ್ದಿದೆ.

ಇದಾದ ಬಳಿಕ ನಡೆದ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್​ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹೆಚ್.ವಿಶ್ವನಾಥ್ ಕಾಂಗ್ರೆಸ್ ವಿರುದ್ಧ ಸೋತಿದ್ದಾರೆ. ಈ ಹಿನ್ನೆಲೆ 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬಲ 4ಕ್ಕೆ ಏರಿದೆ. ಈ ಸಾರಿ ವರುಣ ಕ್ಷೇತ್ರದಿಂದ ಪುತ್ರನ ಬದಲು ತಾವೇ ಸ್ಪರ್ಧಿಸಲು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಉಳಿದಂತೆ ಹುಣಸೂರಿನಿಂದ ಹೆಚ್.ಪಿ. ಮಂಜುನಾಥ್, ನರಸಿಂಹರಾಜ ಕ್ಷೇತ್ರದಿಂದ ತನ್ವೀರ್ ಸೇಠ್, ಹೆಚ್.ಡಿ. ಕೋಟೆಯಿಂದ ಸಿ. ಅನಿಲ್ ಕುಮಾರ್ ಸ್ಪರ್ಧೆ ಬಹುತೇಕ ಪಕ್ಕಾ ಆಗಿದೆ. ಉಳಿದ 8 ಕ್ಷೇತ್ರಗಳ ಪೈಕಿ ಒಂದರಿಂದ ಸ್ಪರ್ಧಿಸುವ ಇಂಗಿತವನ್ನು ಪುಷ್ಪಾ ಹೊಂದಿದ್ದಾರೆ. ತಮ್ಮ ಸ್ಪರ್ಧೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿ ಮನವಿ ಮಾಡಿದ್ದು, ಎರಡು ಕ್ಷೇತ್ರದ ಹೆಸರನ್ನು ಸಹ ವಿವರಿಸಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯನ್ನು ಕೆಳಗಿಳಿಸಿ: ಸಿದ್ದರಾಮಯ್ಯ ಮನೆ ಮುಂದೆ ಕೈ ಕಾರ್ಯಕರ್ತೆಯರ ಪ್ರತಿಭಟನೆ

ಇನ್ನೊಂದೆಡೆ, ಈ ಬಾರಿ ತಾವು ತಿ. ನರಸೀಪುರ ಬದಲು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನ ಎಂ. ಅಶ್ವಿನ್ ಕುಮಾರ್ ವಿರುದ್ಧ 28 ಸಾವಿರ ಮತಗಳ ಭಾರಿ ಅಂತರದ ಸೋಲು ಕಂಡಿದ್ದ ಮಹದೇವಪ್ಪ, ಈ ಬಾರಿ ನಂಜನಗೂಡಿನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಸಂಸದ ಹಾಗೂ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಹರ್ಷವರ್ಧನ್ ಬಿಜೆಪಿ ಶಾಸಕರಾಗಿದ್ದು, ಇವರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.

ತಿ. ನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯುವ ಆಶಯ: ಮಹದೇವಪ್ಪ ಅವರ ತಿ. ನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯುವ ಆಶಯ ಪುಷ್ಪಾ ಅವರದ್ದಾಗಿದೆ. ಇದು ಸಾಧ್ಯವಾಗದಿದ್ದರೆ ಕೃಷ್ಣರಾಜನಗರ ಕ್ಷೇತ್ರದಿಂದ ಟಿಕೆಟ್ ಸಿಕ್ಕರೂ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ವಿರುದ್ಧ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೈಸೂರಿನ ಎರಡು ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ತಿಳಿಸಿರುವ ಪುಷ್ಪಾ ಅಮರನಾಥ್, ಇಲ್ಲಿಂದ ಸಾಧ್ಯವಾಗದಿದ್ದರೆ ಪಕ್ಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಸಂಸದ ಪ್ರತಾಪ್​ ಸಿಂಹ ವಿರುದ್ಧ ಪುಷ್ಪಾ ಅಮರನಾಥ್ ವಾಗ್ದಾಳಿ

ಇಲ್ಲಿ ಸದ್ಯಕ್ಕೆ ಜೆಡಿಎಸ್ ಬೆಂಬಲಿತ ಬಿಎಸ್​ಪಿ ಶಾಸಕ ಎನ್. ಮಹೇಶ್ ಶಾಸಕರಾಗಿದ್ದಾರೆ. ಹಿಂದೆ ಎಂ.ಆರ್. ಮಂಜುನಾಥ್ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರ ಬದಲು ತಮಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ 3 ವರ್ಷ 10 ತಿಂಗಳು ಪೂರೈಸಿರುವ ಪುಷ್ಪಾ ಅಮರನಾಥ್ ಈಗಾಗಲೇ ಬೋನಸ್ ಅವಧಿಯಲ್ಲಿ ಇದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆ ಬಳಿಕ ಹೊಸ ಅಧ್ಯಕ್ಷರ ಆಯ್ಕೆ ಬಹುತೇಕ ಪಕ್ಕಾ ಆಗಿದೆ. ಇದರಿಂದ ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನವೇ ವಿಧಾನಸಭೆ ಪ್ರವೇಶಿಸುವ ಇಂಗಿತವನ್ನು ಪುಷ್ಪಾ ಹೊಂದಿದ್ದಾರೆ. ಇದಕ್ಕೆ ರಾಜ್ಯ ನಾಯಕರ ಸಹಕಾರ ಹೇಗೆ ಸಿಗಲಿದೆ ಎಂದು ನೋಡಬೇಕಿದೆ.

ಅವಕಾಶ ಸಿಕ್ಕರೆ ಸ್ಪರ್ಧೆ: ತಮ್ಮ ಸ್ಪರ್ಧೆ ವಿಚಾರವಾಗಿ ನಡೆಯುತ್ತಿರುವ ಚಟುವಟಿಕೆ ಕುರಿತು ಮಾತನಾಡಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮೈಸೂರು ಜಿಲ್ಲೆಯ ಎರಡು ಕ್ಷೇತ್ರ ಇಲ್ಲವೇ ಚಾಮರಾಜನಗರದ ಕೊಳ್ಳೆಗಾಲದಿಂದ ಟಿಕೆಟ್ ಕೇಳಿದ್ದು ನಿಜ. ರಾಜ್ಯ ಕಾಂಗ್ರೆಸ್ ನಾಯಕರು ಅದರಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವಕಾಶ ಮಾಡಿಕೊಟ್ಟರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತೇನೆ. ನಾನು ಗೆಲ್ಲಲು ಅವಕಾಶ ಇರುವ ಕ್ಷೇತ್ರವನ್ನೇ ನಾಯಕರಿಗೆ ವಿವರಿಸಿದ್ದೇನೆ. ಗೆಲುವಿಗೆ ಅಗತ್ಯವಿರುವ ತಂತ್ರಗಾರಿಕೆಯ ಮಾಹಿತಿ ನೀಡಿದ್ದೇನೆ. ನಾನು ಮನವಿ ಮಾಡಿರುವ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿದ್ದೇನೆ. ಅವಕಾಶ ಸಿಕ್ಕರೆ ಗೆಲುವು ಶತಸಿದ್ಧ, ರಾಜ್ಯ ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದರೆ ಅವಕಾಶ ದೊರೆಯುವುದು ಕಷ್ಟವಲ್ಲ. ವಿಧಾನ ಪರಿಷತ್ ಪ್ರವೇಶಿಸುವ ಆಸೆ ವ್ಯಕ್ತಪಡಿಸಿದ್ದು ನಿಜ. ಇಂದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನ ನಡೆಸಿರುವುದೂ ನಿಜ. ಅವಕಾಶ ಸಿಕ್ಕರೆ ಕ್ಷೇತ್ರದ ಜನರ ಸೇವೆಯ ಭಾಗ್ಯ ಪಡೆಯುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.