ಬೆಂಗಳೂರು : ಕೊರೊನಾ ವಿರುದ್ಧದ ಸಮರಕ್ಕೆ ವಿಪ್ರೋ ಸಮೂಹ ಸಂಸ್ಥೆ ಹಾಗೂ ಅಜೀಂ ಪ್ರೇಮ್ಜಿ ಪ್ರತಿಷ್ಠಾನ ಸೇರಿ 1125 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಕೋವಿಡ್-19ರ ಕಡಿವಾಣಕ್ಕೆ ಬದ್ಧತೆ ಹಣವನ್ನಾಗಿ ಇದನ್ನಿರಿಸಲಾಗಿದೆ.
ಈ ಬದ್ಧತೆ ಹಣವನ್ನ ಪ್ರತ್ಯೇಕ ವೈದ್ಯಕೀಯ ಸೇವೆಗಳನ್ನು ಕಲ್ಪಿಸೋದಕ್ಕೆ ಉಪಯೋಗಿಸಿಕೊಳ್ಳಬಹುದಾಗಿದೆ. ವಿಪ್ರೋ ನಿಯಮಿತ್ತ- 25 ಕೋಟಿ, ವಿಪ್ರೋ ಉದ್ಯಮಗಳು-100 ಕೋಟಿ ಹಾಗೂ ಅಜಿಂ ಪ್ರೇಮ್ಜಿ ಪ್ರತಿಷ್ಠಾನ 1000 ಕೋಟಿಯನ್ನು ಕೊರೊನಾ ವಿರುದ್ಧದ ಯುದ್ಧಕ್ಕೆ ನೀಡುತ್ತಿವೆ.
ಈಗಾಗಲೇ ಪ್ರತಿಷ್ಠಾನದಲ್ಲಿ 1600 ಜನರ ತಂಡವಿದೆ. ದೇಶದ ಹಲವು ಸಂಘ-ಸಂಸ್ಥೆಗಳ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿವೆ.