ETV Bharat / state

ಭದ್ರಕೋಟೆ ಹಳೇ ಮೈಸೂರನ್ನು ಉಳಿಸಿಕೊಳ್ಳುವುದೇ ಜೆಡಿಎಸ್? - ಕಿಂಗ್ ಮೇಕರ್ ಆಗುವುದೇ ಜೆಡಿಎಸ್‌

ಹಲವು ವರ್ಷಗಳಿಂದಲೂ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ.

JDS save the old Mysore part  JDS strategy in Old mysore part  JDS win in Old mysore part  ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್  ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗ  ಜೆಡಿಎಸ್​ಗೆ ಭರ್ಜರಿ ಗೆಲುವು  ಹೆಚ್​ಡಿ ದೇವೇಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ  ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ಅಭ್ಯರ್ಥಿಗಳು  ಬಿಜೆಪಿ ಹೊಸ ತಂತ್ರಗಾರಿಕೆ  ಕಿಂಗ್ ಮೇಕರ್ ಆಗುವುದೇ ಜೆಡಿಎಸ್‌  ಮೈಸೂರಿನಲ್ಲಿ ಬೃಹತ್ ಸಮಾವೇಶ
ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್
author img

By

Published : Apr 29, 2023, 11:09 AM IST

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಕಳೆದ ಬಾರಿ ಜೆಡಿಎಸ್​ ಭರ್ಜರಿ ಗೆಲುವು ಗಳಿಸಿತ್ತು. ಆದರೆ, ಈ ಬಾರಿ ಜೆಡಿಎಸ್​ಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪ್ರಬಲ ಪೈಪೋಟಿ ಎದುರಾಗಿದೆ. ಹಾಗಾಗಿ ಭದ್ರಕೋಟೆ ಉಳಿಸಿಕೊಳ್ಳುವುದು ಜೆಡಿಎಸ್​ಗೆ ಸವಾಲಾಗಿದೆ ಎಂದೇ ಹೇಳಬಹುದು.

ಹೆಚ್​ಡಿ ದೇವೇಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ ಅವರು ಮತದಾರರನ್ನು ಸೆಳೆಯುವ ಪ್ರಮುಖ ನಾಯಕರು. ಆದ್ರೆ ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಎಲ್ಲಾ ಭಾಗದಲ್ಲೂ ಈ ಬಾರಿ ಪ್ರಚಾರ ಕಷ್ಟ. ಇದು ಸಹ ಹಿನ್ನೆಡೆಗೆ ಕಾರಣವಾಗಬಹುದು. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವಂತೆ ಎರಡನೇ ಹಂತದ ನಾಯಕರ ಕೊರತೆಯೂ ಪಕ್ಷದಲ್ಲಿದೆ. ಹಾಗಾಗಿ, ಜೆಡಿಎಸ್​ನಲ್ಲಿ ಪ್ರಚಾರಕ್ಕೆ ತೊಂದರೆಯಾಬಹುದು. ಹಳೇ ಮೈಸೂರು ಭಾಗ ಬಿಟ್ಟರೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗಗಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಇಲ್ಲ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೊರೆಯೂ ಇದೆ. ರಾಷ್ಟ್ರೀಯ ಪಕ್ಷಗಳಂತೆ ಸಂಪನ್ಮೂಲ ಕ್ರೋಢಿಕರಣದಲ್ಲಿ ಹಿಂದೆ ಉಳಿದಿರುವ ಜೆಡಿಎಸ್, ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯನ್ನು ಎದುರಿಸಿದೆ. ಇದೆಲ್ಲವೂ ಜೆಡಿಎಸ್​ಗೆ ಸವಾಲಾಗಿ ಪರಿಣಮಿಸಿದೆ.

ಹಳೇ ಮೈಸೂರು ಭಾಗದಲ್ಲಿ 57 ಕ್ಷೇತ್ರಗಳಿವೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬೇಕೆಂದಾದರೆ ಈ ಕ್ಷೇತ್ರಗಳ ಚುನಾವಣೆ ಗೆಲುವು ಪ್ರಮುಖವಾಗಿದೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರು ಶೇ.17 ರಷ್ಟಿದ್ದು, ಇವರ ಒಲವು ಯಾರ ಮೇಲಿರುತ್ತದೆಯೋ ಅವರು ಅಧಿಕಾರಿದ ಗದ್ದುಗೆ ಹಿಡಿಯುತ್ತಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಳೇ ಮೈಸೂರು ಪ್ರದೇಶವು ರಾಜ್ಯದಲ್ಲಿ ಚುನಾವಣಾ ತಂತ್ರದ ದೃಷ್ಟಿಯಿಂದ ತುಂಬಾ ಪ್ರಬಲ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವು ಜೆಡಿಎಸ್​ನ ಸಾಂಪ್ರದಾಯಿಕ ಭದ್ರಕೋಟೆ ಎಂಬ ಹೆಗ್ಗಳಿಕೆಯೂ ಹೊಂದಿದೆ. ಸದ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆ ಈ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಗಳು ಕಂಡು ಬರುತ್ತಿದ್ದು, ಈ ಬಾರಿ ತೀವ್ರ ಪೈಪೋಟಿಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಹ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದು, ಜೆಡಿಎಸ್ ಕೋಟೆಯನ್ನು ಕೆಡವಲು ನಾನಾ ರೀತಿ ತಂತ್ರಗಳನ್ನು ಮಾಡುತ್ತಿವೆ.

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ಅಭ್ಯರ್ಥಿಗಳು ಸಹ ಹಳೇ ಮೈಸೂರು ಭಾಗದಲ್ಲಿರುವುದು ಮತ್ತೊಂದು ವಿಶೇಷ. ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 52 ಸ್ಥಾನಗಳು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿರ್ಣಾಯಕವಾಗಿವೆ. ಮತ್ತೊಂದೆಡೆ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರಿನಲ್ಲಿ ಯಾವುದೇ ಪಕ್ಷ ಗೆದ್ದರೂ ಕರ್ನಾಟಕವನ್ನು ಗೆದ್ದು ಅಧಿಕಾರ ಹಿಡಿಯಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಮೊದಲಿನಿಂದಲೂ ಕಾಂಗ್ರೆಸ್‌ನ ಮೂಲ ಭದ್ರಕೋಟೆಯಾಗಿತ್ತು. ಇತ್ತೀಚಿನ ದಶಕದಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಒಕ್ಕಲಿಗ ಸಮುದಾಯದ ಮತಗಳು ಹಳೇ ಮೈಸೂರು ಭಾಗದಲ್ಲಿ ಶೇ.17 ರಷ್ಟಿದ್ದರೂ, ಈ ಕ್ಷೇತ್ರಗಳಲ್ಲಿ ಎಸ್‌ಸಿ-ಎಸ್‌ಟಿ ಪ್ರಾಬಲ್ಯವೂ ಇದೆ ಎಂಬುದನ್ನು ತಳ್ಳಿಹಾಕುವಂತೆ ಇಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಇಡೀ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿತ್ತು. ಕಾಂಗ್ರೆಸ್‌ಗೆ ಇಲ್ಲಿಂದ ಉತ್ತಮ ಸ್ಥಾನ ಸಿಗುತ್ತಿತ್ತು. ಆದರೆ ಕಳೆದ ಕೆಲವು ಚುನಾವಣೆಗಳಲ್ಲಿ ನಿರೀಕ್ಷಿತ ಸ್ಥಾನಗಳು ಸಿಗಲಿಲ್ಲ. 2018 ರ ಚುನಾವಣೆಯಲ್ಲಿ ಹಳೇ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಪಡೆದುಕೊಂಡಿದೆ. ಇದು 2013 ಕ್ಕಿಂತ 6 ಸ್ಥಾನ ಕಡಿಮೆಯಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಒಕ್ಕಲಿಗರಾದ ಕಾರಣ ಇಲ್ಲಿ ಕಾಂಗ್ರೆಸ್ ಇನ್ನೂ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

JDS save the old Mysore part  JDS strategy in Old mysore part  JDS win in Old mysore part  ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್  ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗ  ಜೆಡಿಎಸ್​ಗೆ ಭರ್ಜರಿ ಗೆಲುವು  ಹೆಚ್​ಡಿ ದೇವೇಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ  ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ಅಭ್ಯರ್ಥಿಗಳು  ಬಿಜೆಪಿ ಹೊಸ ತಂತ್ರಗಾರಿಕೆ  ಕಿಂಗ್ ಮೇಕರ್ ಆಗುವುದೇ ಜೆಡಿಎಸ್‌  ಮೈಸೂರಿನಲ್ಲಿ ಬೃಹತ್ ಸಮಾವೇಶ
ಹೆಚ್​ಡಿ ಕುಮಾರಸ್ವಾಮಿ

ಬಿಜೆಪಿ ಹೊಸ ತಂತ್ರಗಾರಿಕೆ : ಇನ್ನೂ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಯಾವುದೇ ದೊಡ್ಡ ಮುಖ ಇಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಒಂದಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿಗೆ ಹಿನ್ನಡೆಯಾಗಿತ್ತು. ಈಗ ಈ ಬಾರಿ ಬಿಜೆಪಿ ಹೊಸ ಲೆಕ್ಕಾಚಾರ ಹಾಕಿಕೊಂಡು ಅಖಾಡಕ್ಕೆ ಇಳಿದಿದೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿರುವ ಕಾರಣ ಸಚಿವ ವಿ.ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಣಕ್ಕಿಳಿಸಿದೆ. ಅದೇ ರೀತಿ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ ಅವರು ಸ್ಪರ್ಧಿಸಿದ್ದಾರೆ.

ಇನ್ನೂ ಮೈಸೂರು, ಮಂಡ್ಯ ಮತ್ತಿತರ ಕಡೆ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಹೊಸ ತಂತ್ರಗಾರಿಕೆಯನ್ನು ಮಾಡಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲೇಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ನಾಯಕರಿಂದ ಈ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡಿಸಲಾಗುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ ರೋಡ್ ಶೋ ನಡೆಸಿದ್ದರು. ಮೊನ್ನೆಯಷ್ಟೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಪ್ರಚಾರ ನಡೆಸಿದ ಅಬ್ಬರ ಭಾಷಣ ಮಾಡಿದ್ದರು. ಇದಕ್ಕೆ ಸಂಸದೆ ಸುಮಲತಾ ಅಂಬರೀಶ್ ಸಹ ಸಾಥ್ ನೀಡಿದ್ದರು. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್‌ ಕೋಟೆಯನ್ನು ಒಡೆಯುವುದೇ ಬಿಜೆಪಿ ಪ್ರಮುಖ ಅಜೆಂಡಾ ಆಗಿದೆ.

ಕಿಂಗ್ ಮೇಕರ್ ಆಗುವುದೇ ಜೆಡಿಎಸ್‌? : ಜೆಡಿಎಸ್‌ ಭದ್ರ ಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಒಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಹವಣಿಸುತ್ತಿದೆ. 1983 ರಿಂದಲೂ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್​ಡಿ ದೇವೇಗೌಡರ ಪ್ರಭಾವ ಬಹುಸಂಖ್ಯಾತ ಸಮುದಾಯದ ಮೇಲಿದೆ. 2004ರಲ್ಲಿ ಇಲ್ಲಿಂದ ಒಟ್ಟು 46 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಈ ಭಾಗದಲ್ಲಿ ತನ್ನ ಛಾಪು ಮೂಡಿಸಿತ್ತು. ಇದರೊಂದಿಗೆ ಈ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದ್ದು, ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಕಾರ್ಯತಂತ್ರ ರೂಪಿಸುತ್ತಿದೆ.

ಜೆಡಿಎಸ್‌ ಮುಂದಿರುವ ಸವಾಲುಗಳೇನು? : ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳಲು ಜೆಡಿಎಸ್​ಗೆ ಅಗ್ನಿ ಪರೀಕ್ಷೆ ಆರಂಭವಾಗಿದೆ. ಕಳೆದ ಬಾರಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭರ್ಜರಿ ಗೆಲುವು ಸಾಧಿಸಿತ್ತು. ಹಳೇ ಮೈಸೂರು ಭಾಗ ಹೊರತುಪಡಿಸಿದರೆ ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಜೆಡಿಎಸ್‌ ಪಕ್ಷಕ್ಕೆ ದೊಡ್ಡ ಶಕ್ತಿ ಇಲ್ಲ. ಕಾಂಗ್ರೆಸ್, ಬಿಜೆಪಿಯಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಇದೆ. ಬಿಜೆಪಿ-ಕಾಂಗ್ರೆಸ್‍ನಂತೆ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿಂದೆ ಉಳಿದಿದೆ. ಅಲ್ಲದೆ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇರುವುದು ಜೆಡಿಎಸ್​ಗೆ ಮತ್ತೊಂದು ಸವಾಲಾಗಿದೆ. ತನ್ನ ನೆಲದಲ್ಲಿ ಹೆಚ್ಚು ಸೀಟುಗಳನ್ನು ದಕ್ಕಿಸಿಕೊಂಡರೆ ಮಾತ್ರವೇ ಅಧಿಕಾರದ ರಾಜಕಾರಣದಲ್ಲಿ ದಾಳ ಉರುಳಿಸಬಹುದು ಎಂಬ ಲೆಕ್ಕಾಚಾರ ಹಾಕಿದೆ. ಹಾಗಾಗಿ, ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಲು ಕಸರತ್ತು ನಡೆಸಿದೆ.

ಮೈಸೂರಿನಲ್ಲಿ ಬೃಹತ್ ಸಮಾವೇಶ : ಮೈಸೂರಿನಲ್ಲಿ ಕೆಲ ದಿನಗಳ ಹಿಂದೆ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭ ಮಾಡಿ ಕುಮಾರಸ್ವಾಮಿ ಅವರು ಶಕ್ತಿ ಪ್ರದರ್ಶನ ನಡೆಸಿದ್ದರು. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಭಾವನಾತ್ಮಕ ಭಾಷಣ ಮಾಡಿದ್ದು, ರಾಜ್ಯದ ಜನರ ಗಮನಸೆಳೆದಿತ್ತು. ತಮ್ಮ ತಂದೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ನಾಯಕತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ 1994 ರಲ್ಲಿ ಜನರು ಅದರಲ್ಲೂ ಮುಖ್ಯವಾಗಿ ಒಕ್ಕಲಿಗ ಸಮಾಜದ ಮತದಾರರು ನೀಡಿದ ಬೆಂಬಲವನ್ನು ಹೆಚ್​ಡಿ ಕುಮಾರಸ್ವಾಮಿ ಈಗ ತಮ್ಮ ಪಕ್ಷಕ್ಕೆ ನಿರೀಕ್ಷಿಸಿದ್ದಾರೆ. ಹೀಗಾಗಿ ಜನತಾದಳ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದನ್ನು ಪ್ರಸ್ತಾವಿಸಿದ್ದಾರೆ. ಆದರೆ ಜನತಾದಳಕ್ಕೆ ಅಂದಿನ ಪರಿಸ್ಥಿತಿ ಇವತ್ತು ಜೆಡಿಎಸ್‌ಗೆ ಇಲ್ಲ. ಅಂದು ಜನತಾದಳದಲ್ಲಿ ಘಟಾನುಘಟಿ ನಾಯಕರಿದ್ದರು. ಹೆಚ್​ಡಿ ದೇವೇಗೌಡ ಅವರು ಮಾಸ್‌ ಲೀಡರ್‌ ಆಗಿ ಹೊರಹೊಮ್ಮಿದ್ದರು. ಈಗ ಜೆಡಿಎಸ್​ಗೆ ಅಷ್ಟು ಸುಲಭವಾಗಿಲ್ಲ. 1994ರ ವಿಧಾನಸಭೆ ಚುನಾವಣೆ ಪರಿಸ್ಥಿತಿ ಇರಲಿ, ಕಳೆದ 2018ರ ವಿಧಾನಸಭೆ ಚುನಾವಣೆಯ ಅನುಕೂಲಕರ ಪರಿಸ್ಥಿತಿ ಜೆಡಿಎಸ್‌ಗೆ ಈಗಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಹಿಂದೆ ಜೆಡಿಎಸ್‌ ಗೆದ್ದಿದೆಷ್ಟು? : ಹಳೇ ಮೈಸೂರು ಭಾಗದಲ್ಲಿ 57 ವಿಧಾನಸಭಾ ಕ್ಷೇತ್ರಗಳಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ 27 ಸ್ಥಾನಗಳನ್ನು ಗೆದಿತ್ತು. ಕಾಂಗ್ರೆಸ್‌ 17, ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಪರೇಶನ್‌ ಕಮಲದ ನಂತರ ಬಿಜೆಪಿ ಸ್ಥಾನಗಳು 15ಕ್ಕೆ ಏರಿಕೆ ಆಗಿತ್ತು. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್‌ ಸಾಧನೆ ಶೂನ್ಯ. ತುಮಕೂರಿನಲ್ಲಿ 11ರಲ್ಲಿ 4, ಚಿಕ್ಕಬಳ್ಳಾಪುರ 5ರಲ್ಲಿ 1, ಕೋಲಾರ 6 ರಲ್ಲಿ 1, ಮಂಡ್ಯದಲ್ಲಿ 7ಕ್ಕೆ 7 ಸ್ಥಾನ ತನ್ನದಾಗಿಸಿಕೊಂಡಿತ್ತು. ಹಾಸನದಲ್ಲಿ 7ಕ್ಕೆ 6 ಸ್ಥಾನ ಜೆಡಿಎಸ್‌ ಪಾಲಾಗಿತ್ತು. ಇನ್ನು ಮೈಸೂರಿನಲ್ಲಿ 11ಕ್ಕೆ 5, ರಾಮನಗರದಲ್ಲಿ 4 ರಲ್ಲಿ 3 ಸ್ಥಾನಗಳು ಜೆಡಿಎಸ್‌ ಗೆಲುವು ಕಂಡಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಹಿಂದಿನ ಫಲಿತಾಂಶ ಮರಳುವುದೇ ಎಂಬುದು ಮೇ 13 ರಂದು ಗೊತ್ತಾಗಲಿದೆ.

ಓದಿ: ಬಿಜೆಪಿ ಸರ್ಕಾರಕ್ಕೆ ಮತ ನೀಡಿದರೆ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.