ETV Bharat / state

ಗಂಡನ ಅನುಮಾನಕ್ಕೆ ಬೇಸತ್ತ ಮಹಿಳೆ.. ವಿಚ್ಛೇದನಕ್ಕೆ ಮುಂದಾದ ಪತ್ನಿ ಕೊಂದ ಪತಿ ಅರೆಸ್ಟ್ - ಬೆಂಗಳೂರು ಅಪರಾಧ ಸುದ್ದಿ

ಶೀಲ ಶಂಕಿಸಿ ಪತ್ನಿಯನ್ನು ಕೊಲೆ‌ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

wife murderer arrested by Bengaluru police, Bengaluru crime news, Bengaluru police department,  ಪತ್ನಿ ಕೊಲೆ‌ ಮಾಡಿದ ಆರೋಪಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಪೊಲೀಸ್​ ಇಲಾಖೆ,
ಶೀಲ ಶಂಕಿಸಿ ಪತ್ನಿ ಕೊಲೆ‌ ಮಾಡಿದ ಆರೋಪ
author img

By

Published : Mar 9, 2022, 1:34 PM IST

ಬೆಂಗಳೂರು: ಶೀಲ ಶಂಕಿಸಿ ಬೆಲ್ಟ್​ನಿಂದ ಪತ್ನಿ ಕುತ್ತಿಗೆ ಬಿಗಿದು ಕೊಲೆ ಮಾಡಿದ ಆರೋಪದಡಿ ಆಕೆಯ ಪತಿಯನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ‌.

ರಾಯಚೂರು ನಿವಾಸಿಯಾಗಿರುವ ನೀಲಕಂಠ ಬಂಧಿತ ಆರೋಪಿ‌. ನೀಲಕಂಠ ಹಾಗೂ ಮೃತ ನಾಗಮ್ಮ ದಂಪತಿಯು ಹೆಚ್​ಎಎಲ್ ಕಾಳಪ್ಪ ಲೇಔಟ್​ನಲ್ಲಿ ವಾಸವಾಗಿದ್ದರು. 17 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಎಂಟು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕ್ಯಾಬ್ ಚಾಲಕನಾಗಿ ನೀಲಕಂಠ ಕೆಲಸ‌ ಮಾಡುತ್ತಿದ್ದರು. ಇತ್ತ ಹೆಂಡತಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ನೀಲಕಂಠ ಕೆಲ ದಿನಗಳ ಹಿಂದೆ ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ.‌ ಮೊನ್ನೆಯೂ ಸಹ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ‌ ಅಸಮಾಧಾನಗೊಂಡು ಪತ್ನಿ ವಿಚ್ಛೇದನ ಪಡೆಯುವಂತೆ ತಾಕೀತು ಮಾಡಿದ್ದಳಂತೆ.‌ ಇದರಿಂದ ಕುಪಿತಗೊಂಡ ನೀಲಕಂಠ ಬೆಲ್ಟ್‌ನಿಂದ ಕತ್ತು ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.