ETV Bharat / state

ಶ್ರೀನಿವಾಸ್ ಪ್ರಸಾದ್ ವಿರುದ್ಧ ಬಿಜೆಪಿ ನಾಯಕರು ಗರಂ ಆಗಿದ್ಯಾಕೆ? - undefined

ನೆಹರೂ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪರ ರಾಜ್ಯದ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್​​ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಗರಂ ಆಗಿದ್ದಾರೆ.

ಶ್ರೀನಿವಾಸ್ ಪ್ರಸಾದ್
author img

By

Published : May 11, 2019, 8:27 PM IST

ಬೆಂಗಳೂರು: ರಾಜೀವ್ ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ನಿಲುವನ್ನು ಟೀಕಿಸಿ ಹೇಳಿಕೆ ನೀಡಿರುವ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್​ ವಿರುದ್ಧ ರಾಜ್ಯದ ನಾಯಕರು ಗರಂ ಆಗಿದ್ದಾರೆ. ಮೋದಿಯನ್ನು ಸಮರ್ಥಿಸಿಕೊಳ್ಳುವ ಬದಲು ವಿರೋಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.

ನೆಹರೂ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪರ ರಾಜ್ಯದ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್​​ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿ‌ ಹೇಳಿಕೆಯನ್ನು ಬಹಿರಂಗವಾಗಿ ಆಕ್ಷೇಪಿಸುವ ಮೂಲಕ ಪಕ್ಷದ ಚೌಕಟ್ಟು ಮೀರಿದ್ದಾರೆ ಎಂದು ಪಕ್ಷದ ಒಳಗೆ ಅಸಮಾಧಾನ ವ್ಯಕ್ತವಾಗಿದೆ ಎಂಬ ಕೂಗು ಜೋರಾಗೇ ಸದ್ದು ಮಾಡುತ್ತಿದೆ.

ಪ್ರಸಾದ್​ ಅವರ ಈ ಹೇಳಿಕೆ ಆತಂಕ ತಂದಿದ್ದೇಕೆ?

ರಾಜ್ಯದಲ್ಲಿ ಲೋಕಸಭಾ ಕದನ ಮುಗಿದಿರುವ ಕಾರಣ ಇಲ್ಲಿ ಅವರ ಹೇಳಿಕೆ ಪರಿಣಾಮ ಬೀರದೇ ಇದ್ದರೂ ದೇಶದಲ್ಲಿ ಇನ್ನೂ‌ ಎರಡು ಹಂತದ ಚುನಾವಣೆ ನಡೆಯಬೇಕಿರುವುದರಿಂದ ರಾಷ್ಟ್ರ ಮಟ್ಟದಲ್ಲಿ ಈ ಹೇಳಿಕೆ ಪರಿಣಾಮ ಬೀರಲಿದೆ ಎನ್ನುವುದು ಬಿಜೆಪಿ ರಾಜ್ಯ ನಾಯಕರ ಲೆಕ್ಕಾಚಾರ. ಸ್ವ ಪಕ್ಷೀಯ ನಾಯಕರಿಂದಲೇ ಮೋದಿ ಹೇಳಿಕೆಗೆ ಖಂಡನೆ ವ್ಯಕ್ತವಾಗಿರುವುದು ಪ್ರತಿಪಕ್ಷ ಕಾಂಗ್ರೆಸ್​​ಗೆ ರಾಜಕೀಯ ಅಸ್ತ್ರ ಸಿಕ್ಕಂತಾಗುತ್ತದೆ ಎನ್ನುವುದು ಬಿಜೆಪಿ ರಾಜ್ಯ ನಾಯಕರ ಲೆಕ್ಕಾಚಾರ. ಸದ್ಯ ಚಿಂಚೋಳಿ ಹಾಗೂ ಕುಂದಗೋಳ ಉಪ‌ಚುನಾವಣಾ ಪ್ರಚಾರದಲ್ಲಿ ರಾಜ್ಯ ನಾಯಕರು‌ ತಮ್ಮನ್ನು ತೊಡಗಿಸಿಕೊಂಡಿದ್ದು, ಬಿಡುವಿಲ್ಲದ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಶ್ರೀನಿವಾಸ ಪ್ರಸಾದ್ ಹೇಳಿಕೆಯನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಬಳಿಕ ಈ ಹೇಳಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಬಿಜೆಪಿ ಆಪ್ತ ಮೂಲಗಳು‌ ತಿಳಿಸಿವೆ.

ಮೋದಿ ವಿರುದ್ಧ ಹೇಳಿಕೆ ಪರಿಣಾಮವೇನು?

ರಾಜೀವ್ ಗಾಂಧಿ ವಿರುದ್ಧದ ಮೋದಿ ಟೀಕೆಯನ್ನ ಬಹಿರಂಗವಾಗಿ‌ ವಿರೋಧಿಸಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಚಾಮರಾಜನಗರದಲ್ಲಿ ಅವರು ಗೆದ್ದು ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ರಚನೆಯಾದರೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗದಿರಲು ಈ ಹೇಳಿಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅಲ್ಲದೇ ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿಗೆ ಕರೆ ತರುವಲ್ಲಿ ಯಡಿಯೂರಪ್ಪ ಮಹ್ವತ್ವದ ಪಾತ್ರ ವಹಿಸಿದ್ದು, ಇದೀಗ ಅವರ ಇಮೇಜ್​ಗೂ ಹೈಕಮಾಂಡ್ ಮಟ್ಟದಲ್ಲಿ ಸ್ವಲ್ಪ ಧಕ್ಕೆಯಾಗಬಹುದು ಎನ್ನಲಾಗಿದೆ.

ಕೈ ತೊರೆದಿದ್ದೂ ಇದೇ ಕಾರಣಕ್ಕೆ:

ವ್ಯಕ್ತಿ ಮತ್ತು ಪಕ್ಷ ಲೆಕ್ಕಿಸದೇ ಅನ್ನಿಸಿದ್ದನ್ನ ನೇರವಾಗಿ ನುಡಿಯುವ ಶ್ರೀನಿವಾಸ್ ಪ್ರಸಾದ್ ತಮ್ಮ ರಾಜಕೀಯ ಅನುಭವದಲ್ಲಿ ನೇರ ನುಡಿಗೆ ಹೆಸರಾಗಿದ್ದಾರೆ. ಈ ರೀತಿಯ ನೇರ ನುಡಿಯಿಂದಲೇ ಸಿಎಂ ಆಗಿದ್ದ ಸಿದ್ದರಾಮಯ್ಯರನ್ನ ನೇರವಾಗಿ ಎದುರು ಹಾಕಿಕೊಂಡಿದ್ದರು ವಿ.ಶ್ರೀನಿವಾಸ್​ ಪ್ರಸಾದ್​. ಹೀಗಾಗಿಯೇ ಕಾಂಗ್ರೆಸ್​ನ ನಾಯಕರು ಕೂಡ ಪ್ರಸಾದ್​ರಿಂದ ಅಂತರ ಕಾಯ್ದುಕೊಂಡಿದ್ದರು. ಈ ಎಲ್ಲ ಬೆಳವಣೆಗೆಗಳಿಂದಾಗಿಯೇ ಕಾಂಗ್ರೆಸ್ ಪಕ್ಷವನ್ನ ಬಿಡುವಂತಹ ಪರಿಸ್ಥಿತಿಗೆ ಶ್ರೀನಿವಾಸ್ ಪ್ರಸಾದ್ ಬಂದು ತಲುಪಿದ್ದರು. ಇದೀಗ ಇಂತಹದ್ದೇ ಪರಿಸ್ಥಿರಿಗೆ ಮತ್ತೊಮ್ಮೆ ತಲುಪುತ್ತಾರಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

Intro:ಬೆಂಗಳೂರು:ರಾಜೀವ್ ಗಾಂಧಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ನಿಲುವನ್ನು ಟೀಕಿಸಿ ಹೇಳಿಕೆ ನೀಡಿರುವ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ವಿರುದ್ಧ ರಾಜ್ಯ ನಾಯಕರು ಗರಂ ಆಗಿದ್ದಾರೆ.ಮೋದಿಯನ್ನು ಸಮರ್ಥಿಸಿಕೊಳ್ಳುವ ಬದಲು ವಿರೋಧಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದುಬಂದಿದೆ.
Body:ನೆಹರೂ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಪರ ರಾಜ್ಯದ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದರೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಮೋದಿ‌ ಹೇಳಿಕೆಯನ್ನು ಬಹಿರಂಗವಾಗಿ ಆಕ್ಷೇಪಿಸುವ ಮೂಲಕ ಪಕ್ಷದ ಚೌಕಟ್ಟು ಮೀರಿದ್ದಾರೆ ಎಂದು ಪಕ್ಷದ ಒಳಗೆ ಅಸಮಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಲೋಕಸಭಾ ಕದನ ಮುಗಿದಿರುವ ಕಾರಣ ಇಲ್ಲಿ ಅವರ ಹೇಳಿಕೆ ಪರಿಣಾಮ ಬೀರದೇ ಇದ್ದರೂ ದೇಶದಲ್ಲಿ ಇನ್ನೂ‌ ಎರಡು ಹಂತದ ಚುನಾವಣೆ ನಡೆಯಬೇಕಿದ್ದು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರಲಿದೆ ಸ್ವ ಪಕ್ಷೀಯ ನಾಯಕರಿಂದಲೇ ಮೋದಿ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ ಎನ್ನುವುದನ್ನೇ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ.

ಸಧ್ಯ ಚಿಂಚೋಳಿ ಹಾಗು ಕುಂದಗೋಳ ಉಪ‌ಚುನಾವಣಾ ಪ್ರಚಾರದಲ್ಲಿ ರಾಜ್ಯ ನಾಯಕರು‌ ತೊಡಗಿದ್ದು ಬಿಡುವಿಲ್ಲದ ಪ್ರಚಾರ ಮಾಡುತ್ತಿದ್ದಾರೆ ಹೀಗಾಗಿ ಶ್ರೀನಿವಾಸ ಪ್ರಸಾದ್ ಹೇಳಿಕೆ ಸಂಬಂಧ ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಚುನಾವಣೆ ಬಳಿಕ ಈ ಹೇಳಿಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಬಿಜೆಪಿ ಆಪ್ತ ಮೂಲಗಳು‌ ತಿಳಿಸಿವೆ.ಚುನಾವಣೆ ನಂತರ ಹೈಕಮಾಂಡ್ ಗಮನಕ್ಕೂ ಈ ಸಂಬಂಧ ವರದಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅ

ಮೋದಿ ವಿರುದ್ಧ ಹೇಳಿಕೆ ಪರಿಣಾಮವೇನು?

ರಾಜೀವ್ ಗಾಂಧಿ ಬಗ್ಗೆ ಮೋದಿ ಭ್ರಷ್ಟಾಚಾರದ ಆರೋಪ ಮೋದಿ ಟೀಕೆಯನ್ನ ಬಹಿರಂಗವಾಗಿ‌ ವಿರೋಧಿಸಿದ್ದು ಶ್ರೀನಿವಾಸ್ ಪ್ರಸಾದ್ ಅವರಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.ಚಾಮರಾಜನಗರದಲ್ಲಿ ಅವರು ಗೆದ್ದು ಎನ್ಡಿಎ ಸರ್ಕಾರ ಕೇಂದ್ರದಲ್ಲಿ ರಚನೆಯಾದರೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಗದಿರಲು ಈ ಹೇಳಿಕೆ ಕಾರಣವಾಗುವ ಸಾಧ್ಯತೆ ಹೆಚ್ಚಿನ ಎನ್ನಲಾಗಿದೆ. ಅಲ್ಲದೇ ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಯಡಿಯೂರಪ್ಪ ಮಹ್ವದ ಪಾತ್ರ ವಹಿಸಿದ್ದು ಇದೀಗ ಅವರ ಇಮೇಜ್ ಗೂ ಹೈಕಮಾಂಡ್ ಮಟ್ಟದಲ್ಲಿ ಸ್ವಲ್ಪ ಧಕ್ಕೆಯಾಗಬಹುದು ಎನ್ನಲಾಗಿದೆ.

ಕೈ ತೊರೆದಿದ್ದೂ ಇದೇ ಕಾರಣಕ್ಕೆ:

ವ್ಯಕ್ತಿ ಮತ್ತು ಪಕ್ಷ ಲೆಕ್ಕಿಸದೇ ಅನ್ನಿಸಿದ್ದನ್ನ ನೇರವಾಗಿ ನುಡಿಯುವ ಶ್ರೀನುವಾಸ್ ಪ್ರಸಾದ್ ತಮ್ಮ ರಾಜಕೀಯ ಅನುಭವದಲ್ಲಿ ನೇರನುಡಿಗೆ ಹೆಸರಾಗಿದ್ದಾರೆ.ಈ ರೀತಿಯ ನೇರ ನುಡಿಯಿಂದಲೇ ಸಿಎಂ ಆಗಿದ್ದ ಸಿದ್ದರಾಮಯ್ಯರನ್ನ ನೇರವಾಗಿ ಸವಾಲ್ ಹಾಕುತ್ತಿದ್ದರು. ಹೀಗಾಗಿಯೇ ಕಾಂಗ್ರೆಸ್ ನ ನಾಯಕರು ಕೂಡ ಪ್ರಸಾದ್ ರಿಂದ ಅಂತರ ಕಾಯ್ದುಕೊಂಡಿದ್ದರು ಈ ಎಲ್ಲಾ ಬೆಳವಣೆಗೆಗಳಿಂದಾಗಿಯೇ ಕಾಂಗ್ರೆಸ್ ಪಕ್ಷವನ್ನ ಬಿಡುವಂತಹ ಪರಿಸ್ಥಿತಿಗೆ ಶ್ರೀನಿವಾಸ್ ಪ್ರಸಾದ್ ಬಂದು ತಲುಪಿದ್ದರು.ಇದೀಗ ಇಂತಹದ್ದೇ ಪರಿಸ್ಥಿರಿಗೆ ಮತ್ತೊಮ್ಮೆ ತಲುಪುತ್ತಾರಾ ಎನ್ನುವ ಪ್ರಶ್ನೆ ಹುಟ್ಟಿದೆ.
Conclusion:-ಪ್ರಶಾಂತ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.