ಬೆಂಗಳೂರು: ವಾಟ್ಸಪ್ ಬಳಕೆದಾರರಿಗೆ ನಿನ್ನೆ ತಡರಾತ್ರಿಯಿಂದ ಪಿಂಕ್ ವಾಟ್ಸಪ್ ಡೌನ್ಲೋಡ್ ಲಿಂಕ್ ಹೊಸ ತಲೆನೋವು ತಂದಿದೆ. ಗ್ರೂಪ್ನಲ್ಲಿ ಶೇರ್ ಮಾಡಲಾಗುತ್ತಿರುವ ಈ ಲಿಂಕ್ ಒತ್ತಿದರೆ ಸಾಕು ಎಲ್ಲಾ ಗ್ರೂಪ್ಗೂ ಈ ಲಿಂಕ್ ಆಟೋಮ್ಯಾಟಿಕ್ ಆಗಿ ಶೇರ್ ಆಗುತ್ತಿದೆ.
ಎಲ್ಲಾ ವಾಟ್ಸಪ್ ಬಳಕೆದಾರರಿಗೂ ‘ನಿಮ್ಮ ವಾಟ್ಸಪ್ನಲ್ಲಿ ಹೊಸ ಪಿಂಕ್ ವಾಟ್ಸಪ್ ಹೊಸ ವೈಶಿಷ್ಟ್ಯಗಳನ್ನು ಆನಂದಿಸಿ’ ಎಂಬ ಸಂದೇಶ ಬಂದಿದ್ದು, ಈ ಲಿಂಕ್ ಕ್ಲಿಕ್ ಮಾಡಿದಾಕ್ಷಣ ಎಲ್ಲರಿಗೂ ಲಿಂಕ್ ಶೇರ್ ಆಗುತ್ತಿದೆ.
ಮೇಲಿನ ಮೆಸೇಜ್ನೊಂದಿಗೆ ಲಿಂಕ್ ಕ್ಲಿಕ್ ಮಾಡುವುದರಿಂದ ದೂರವಿರಲು ನೈತಿಕ ಹ್ಯಾಕರ್‌ಗಳು ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಲಿಂಕ್ ದೊಡ್ಡ ಡೇಟಾ ಕದಿಯುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, ಪಿಂಕ್ ವಾಟ್ಸಪ್ ಪೂರ್ವನಿರ್ಮಿತ ವೈರಸ್ನೊಂದಿಗೆ ಬರುತ್ತದೆ. ಕ್ಲಿಕ್ ಮಾಡಿದಾಗ ಬಳಕೆದಾರರು ಉಪಯೋಗಿಸುತ್ತಿರುವ ಹಲವಾರು ಸಂಖ್ಯೆಗಳು ಮತ್ತು ಗುಂಪುಗಳೊಂದಿಗೆ ಸಂದೇಶಗಳು ಸ್ವಯಂಚಾಲಿತವಾಗಿ ಹಂಚಿಕೆಯಾಗುತ್ತಿವೆ. ಆಂಡ್ರಾಯ್ಡ್‌ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ ಹ್ಯಾಕರ್‌ಗಳು ಬಳಕೆದಾರರ ಸ್ಥಳ, ಸಂಪರ್ಕಗಳು, ಎಸ್‌ಎಂಎಸ್ ಮತ್ತು ಕ್ಯಾಮರಾವನ್ನು ಸಹ ತಮ್ಮ ತೆಕ್ಕೆಗೆ ಬಳಸಿಕೊಳ್ಳಬಹುದು.
‘ನೀವು ಕ್ಲಿಕ್ ಮಾಡುವ ಮೊದಲು ಯೋಚಿಸಿ’ ಎಂದು ನೈತಿಕ ಹ್ಯಾಕರ್ ರಘೋಥಮ್ ಮೃತಿಕೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈಗಾಗಲೇ ಲಿಂಕ್ ಬಳಸಿದ್ದರೆ ಏನು ಮಾಡಬೇಕು?
ವಾಟ್ಸಪ್ ಬಳಕೆದಾರರು ಈಗಾಗಲೇ ಲಿಂಕ್ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಸ್ಥಾಪಿಸಿದ್ದರೆ, ಏನು ಮಾಡಬೇಕೆಂಬುದು ಇಲ್ಲಿದೆ:
ಸೆಟ್ಟಿಂಗ್‌ಗಳು -> ಅಪ್ಲಿಕೇಶನ್‌ಗಳು -> ಪಿಂಕ್ ವಾಟ್ಸಪ್ -> ಸಂಗ್ರಹ ಮತ್ತು ಡೇಟಾ -> ಸ್ಥಾಪಿಸು ಎಂದು ಸೆಟ್ಟಿಂಗ್ಸ್ ಮೂಲಕ ಡಿಸೇಬಲ್ ಮಾಡಬಹುದು.