ETV Bharat / state

ಸ್ವಾತಂತ್ರ ನಂತರ ಭಾರತದಲ್ಲಿನ ನೀರಾವರಿ ಅಭಿವೃದ್ಧಿಯ ಸ್ಥಿತಿಗತಿ ಹೇಗಿದೆ?

ಭಾರತ ಕೃಷಿ ಪ್ರಧಾನ ರಾಷ್ಟ್ರ. ಭಾರತದ ಆರ್ಥಿಕತೆಯಲ್ಲಿ ಕೃಷಿ ಪಾಲು ಗಣನೀಯವಾಗಿದೆ. ಹೀಗಾಗಿ ನಮ್ಮ ದೇಶದ ಆರ್ಥಿಕತೆ ಕೃಷಿಯ ಸುತ್ತ ಅವಲಂಬಿತವಾಗಿದೆ. ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ನೀರಾವರಿಗೆ ಆದಿ ಕಾಲದಿಂದಲೂ ಆದ್ಯತೆಗಳನ್ನು ಕೊಡಲಾಗುತ್ತ ಬಂದಿರುವುದನ್ನು ನೋಡಬಹುದಾಗಿದೆ. ಬ್ರಿಟೀಷ್ ಆಳ್ವಿಕೆಯ ಸಂದರ್ಭ ದಲ್ಲೂ ಭಾರತದಲ್ಲಿ ಅನೇಕ ದೊಡ್ಡ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ನಂತರದಲ್ಲಿ ಅದರ ಬೆಳವಣಿಗೆಯನ್ನು ಈ ರೀತಿ ನೋಡಬಹುದು.

ಭಾರತದಲ್ಲಿನ ನೀರಾವರಿ ಅಭಿವೃದ್ಧಿಯ ಸ್ಥಿತಿಗತಿ ಕುರಿತ ಮಾಹಿತಿ
author img

By

Published : Aug 15, 2019, 5:39 AM IST

ಬೆಂಗಳೂರು: ಭಾರತ ಕೃಷಿ ಪ್ರಧಾನ ರಾಷ್ಟ್ರ. ಭಾರತದ ಆರ್ಥಿಕತೆಯಲ್ಲಿ ಕೃಷಿ ಪಾಲು ಗಣನೀಯವಾಗಿದೆ. ಹೀಗಾಗಿ ನಮ್ಮ ದೇಶದ ಆರ್ಥಿಕತೆ ಕೃಷಿಯ ಸುತ್ತ ಅವಲಂಬಿತವಾಗಿದೆ. ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ನೀರಾವರಿಗೆ ಆದಿ ಕಾಲದಿಂದಲೂ ಆದ್ಯತೆಗಳನ್ನು ಕೊಡಲಾಗುತ್ತ ಬಂದಿರುವುದನ್ನು ನೋಡಬಹುದಾಗಿದೆ. ಬ್ರಿಟೀಷ್ ಆಳ್ವಿಕೆಯ ಸಂದರ್ಭ ದಲ್ಲೂ ಭಾರತದಲ್ಲಿ ಅನೇಕ ದೊಡ್ಡ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ನಂತರದಲ್ಲಿ ಅದರ ಬೆಳವಣಿಗೆಯನ್ನು ಈ ರೀತಿ ನೋಡಬಹುದು.

irrigaration information
ಭಾರತದಲ್ಲಿನ ನೀರಾವರಿ ಅಭಿವೃದ್ಧಿಯ ಸ್ಥಿತಿಗತಿ ಕುರಿತ ಮಾಹಿತಿ

1940ರಲ್ಲಿ ಬ್ರಿಟೀಷರು ಉತ್ತರ ಪ್ರದೇಶ, ಪಂಜಾಬ್, ಅಸ್ಸಾಂ, ಬಿಹಾರ, ಒರಿಸ್ಸಾದಲ್ಲಿ ಹೆಚ್ಚು ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಪ್ರಮುಖವಾಗಿ ಗಂಗಾ ಮೇಲ್ದಂಡೆ ಕಾಲುವೆ, ಕೃಷ್ಣ ಹಾಗೂ ಗೋದಾವರಿ ಜಲಾನಯನ ವ್ಯವಸ್ಥೆ, ಪೆರಿಯಾರ್ ಅಣೆಕಟ್ಟು, ಪೆರಿಯಾರ್ ನಾಲೆಗಳನ್ನು ನಿರ್ಮಿಸಿದ್ದರು. 1947ರಲ್ಲಿ ಭಾರತದಲ್ಲಿನ ನೀರಾವರಿ ಪ್ರದೇಶ ಸುಮಾರು 22 ಮಿಲಿಯ ಹೆಕ್ಟೇರ್ ಗೆ ಏರಿಕೆಯಾಗಿತ್ತು.

ಸ್ವತಂತ್ರೋತ್ತರ ನೀರಾವರಿ ಪ್ರಗತಿ:

ಸ್ವತಂತ್ರ ಭಾರತದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. 1947 ರಿಂದ, ಭಾರತೀಯ ಆರ್ಥಿಕನೀತಿಯನ್ನು ಯೋಜನಾ ವಿಧಾನದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಮಾಡಲಾಗಿದೆ. ಇದನ್ನು, ಪಂಚ ವಾರ್ಷಿಕ ಯೋಜನೆಗಳ ಮೂಲಕ ಕೈಗೊಳ್ಳಲಾಯಿತು. ಪಂಚ ವಾರ್ಷಿಕ ಯೋಜನೆಗಳಲ್ಲಿ ನೀರಾವರಿ ಅಭಿವೃದ್ಧಿಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ, ಅನುದಾನವನ್ನು ನೀಡಲಾಗುತ್ತಿದೆ.

ಕಳೆದ 60 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 2200 ಬೃಹತ್ ಹಾಗೂ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 10ನೇ ಪಂಚವಾರ್ಷಿಕ ಯೋಜನೆ ಅಂತ್ಯದ ವೇಳೆಗೆ ಸುಮಾರು 1400 ಯೋಜನೆಗಳು ಪೂರ್ಣಗೊಂಡಿವೆ.

1951ರಲ್ಲಿ ಭಾರತದಲ್ಲಿ ಒಟ್ಟು 280 ಬೃಹತ್ ಅಣೆಕಟ್ಟುಗಳಿದ್ದವು. ನಂತರದ ದಿನಗಳಲ್ಲಿ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ ಕಾರಣ ಬೃಹತ್ ಅಣೆಕಟ್ಟುಗಳ ಸಂಖ್ಯೆ 4500ಕ್ಕೂ ಅಧಿಕವಾಗಿದೆ. 1951ರ ವೇಳೆಗೆ ಭಾರತದಲ್ಲಿ ಸುಮಾರು 22.6 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ನೀರಾವರಿ ಆಧಾರಿತ ಕೃಷಿ ಮಾಡಲಾಗುತ್ತಿತ್ತು. 1995ರಲ್ಲಿ ನೀರಾವರಿ ಕೃಷಿ ಪ್ರದೇಶ ಸುಮಾರು 90 ದಶಲಕ್ಷ ಹೆಕ್ಟೇರ್ ಗೆ ಏರಿಕೆಯಾಗಿತ್ತು.

ನೀರಾವರಿ ಯೋಜನಾ ವೆಚ್ಚ ಮೊದಲ‌ ಪಂಚವಾರ್ಷಿಕ ಯೋಜನೆಯಲ್ಲಿನ 441.8 ಕೋಟಿ ರೂ.ನಿಂದ 10ನೇ ಪಂಚವಾರ್ಷಿಕ ಯೋಜನೆ ವೇಳೆಗೆ 1,00,106 ಕೋಟಿ ರೂ. ಗೆ ತಲುಪಿತ್ತು.

1950ರಿಂದ 1985ರವರೆಗೆ ಭಾರತ ನೀರಾವರಿ ಅಭಿವೃದ್ಧಿಗಾಗಿ ಸುಮಾರು 17,000 ಕೋಟಿ ರೂ. ಹೂಡಿಕೆ ಮಾಡಲಾಗಿತ್ತು. 2000-2005ರಲ್ಲಿ ಭಾರತ ಸುಮಾರು 1,20,000 ಕೋಟಿ ರೂ. ಹಾಗೂ 2005-10ರಲ್ಲಿ ಸುಮಾರು 2,10,000 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಲಾಗಿದೆ.

ಕೇಂದ್ರ ಜಲ ಆಯೋಗದ ಪ್ರಕಾರ ಭಾರತದ ನೀರಾವರಿ ಸಾಮರ್ಥ್ಯ ಸುಮಾರು 140 ಮಿಲಿಯ ಹೆಕ್ಟೇರ್. ಅದರಂತೆ ಭಾರತದಲ್ಲಿ ಸದ್ಯ 112 ಮಿಲಿಯ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಸೃಷ್ಟಿಸಲಾಗಿದೆ. ಕೇವಲ 93 ಮಿಲಿಯ ಹೆಕ್ಟೇರ್ ನೀರಾವರಿ ಪ್ರದೇದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ದೇಶದ ಬಹು‌ಪಾಲು ಬರ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನೆಲೆ ಭಾರತ ಸರ್ಕಾರ ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಬಹು ಅಂಶಗಳ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳನ್ನು ಅಲ್ಪಕಾಲಿಕ, ಮಧ್ಯಮ ಹಾಗೂ ದೀರ್ಘ ಕಾಲಿಕವಾಗಿ ವಿಂಗಡಿಸಲಾಗಿದ್ದು, ಕ್ರಮವಾಗಿ 2020, 2025 ಮತ್ತು 2035ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಡಲಾಗಿದೆ.

ಸ್ವತಂತ್ರ್ಯದ ಬಳಿಕ ಬೃಹತ್ ಹಾಗೂ ಮಧ್ಯಮ ನೀರಾವರಿ ಯೋಜನೆಗಳಿಗೆ ಸುಮಾರು 4,00,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು 583 ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 3,41,900 ಕೋಟಿ ರೂ.ಗೆ ಯೋಜನಾ ವೆಚ್ಚ ಏರಿಕೆಯಾಗಿದೆ.

ಪಂಚವಾರ್ಷಿಕವಾರು ನೀರಾವರಿ ವೆಚ್ಚಗಳ ವಿವರ:

1 (1951-56) 441.8 ಕೋಟಿ

2 (1956-61) 541.6 ಕೋಟಿ

3 (1961-66) 1019 ಕೋಟಿ

4 (1969-74) 2415 ಕೋಟಿ

5 (1974-78) 3925.8ಕೋಟಿ

6 (1980-85) 11,528.7 ಕೋಟಿ

7 (1985-90) 18,734.1ಕೋಟಿ

8 (1992-97) 34,957.4 ಕೋಟಿ

9 (1997-02) 83049.1 ಕೋಟಿ

10 (2002-07) 1,00,105 ಕೋಟಿ

11 (2007-12) 2,11,700 ಕೋಟಿ

Intro:GggBody:KN_BNG_04_INDEPENDENCESTORY_IRRIGATION_SCRIPT_7201951

ಸ್ವಾತಂತ್ರ ನಂತರ ಭಾರತದಲ್ಲಿನ ನೀರಾವರಿ ಅಭಿವೃದ್ಧಿಯ ಸ್ಥಿತಿಗತಿ ಹೇಗಿದೆ?

ಬೆಂಗಳೂರು: ಭಾರತ ಆನದಿ ಕಾಲದಿಂದಲೂ ನೀರಾವರಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದ ರಾಷ್ಟ್ರವಾಗಿದೆ. ರಾಜ ಮಹರಾಜರ ಕಾಲದಿಂದಲೂ ಭಾರತ ಖಂಡದಲ್ಲಿ ವ್ಯಾಪಕವಾಗಿ ಕಾಲುವೆಗಳು, ನಾಲೆಗಳನ್ನು ನಿರ್ಮಿಸಿ ಕೃಷಿ ಚಟುವಟಿಕೆಗಳನ್ನು ಮಾಡಲಾಗುತ್ತಿತ್ತು. ಸ್ವಾತಂತ್ರ ನಂತರ ಭಾರತಾದ್ಯಂತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಯಿತು.

ಭಾರತ ಕೃಷಿ ಪ್ರಧಾನ ರಾಷ್ಟ್ರ. ಭಾರತದ ಆರ್ಥಿಕತೆಯಲ್ಲಿ ಕೃಷಿ ಪಾಲು ಗಣನೀಯವಾಗಿದೆ. ಹೀಗಾಗಿ ನಮ್ಮ ದೇಶದ ಆರ್ಥಿಕತೆ ಕೃಷಿಯ ಸುತ್ತ ಅವಲಂಬಿತವಾಗಿದೆ. ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ನೀರಾವರಿಗೆ ಆದಿ ಕಾಲದಿಂದಲೂ ಅದ್ಯತೆಗಳನ್ನು ಕೊಡಲಾಗುತ್ತಾ ಬಂದಿರುವುದನ್ನು ನೋಡಬಹುದಾಗಿದೆ. ಬ್ರಿಟೀಷ್ ಆಳ್ವಿಕೆಯ ಸಂದರ್ಭ ದಲ್ಲೂ ಭಾರತದಲ್ಲಿ ಅನೇಕ ದೊಡ್ಡ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. 1800 ಇಸವಿ ವೇಳೆಗೆ ಭಾರತದಲ್ಲಿ ಸುಮಾರು 8,00,000 ಹೆಕ್ಟೇರ್ ಜಮೀನಿನಲ್ಲಿ ನೀರಾವರಿ ಆಧರಿತ ಬೆಳೆಗಳನ್ನು ಬೆಳೆಸಲಾಗುತ್ತಿತ್ತು.

1940ರಲ್ಲಿ ಬ್ರಿಟೀಷರು ಉತ್ತರ ಪ್ರದೇಶ, ಪಂಜಾಬ್, ಅಸ್ಸಾಂ, ಬಿಹಾರ, ಒರಿಸ್ಸಾದಲ್ಲಿ ಹೆಚ್ಚು ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು. ಪ್ರಮುಖವಾಗಿ ಗಂಗಾ ಮೇಲ್ದಂಡೆ ಕಾಲುವೆ, ಕೃಷ್ಣ ಹಾಗೂ ಗೋಧಾವರಿ ಜಲಾನಯನ ವ್ಯವಸ್ಥೆ, ಪೆರಿಯಾರ್ ಅಣೆಕಟ್ಟು, ಪೆರಿಯಾರ್ ನಾಲೆಗಳನ್ನು ನಿರ್ಮಿಸಿದ್ದರು. 1947ರಲ್ಲಿ ಭಾರತದಲ್ಲಿನ ನೀರಾವರಿ ಪ್ರದೇಶ ಸುಮಾರು 22 ಮಿಲಿಯ ಹೆಕ್ಟೇರ್ ಗೆ ಏರಿಕೆಯಾಗಿತ್ತು.

ಸ್ವತಂತ್ರೋತ್ತರ ನೀರಾವರಿ ಪ್ರಗತಿ:

ಸ್ವತಂತ್ರ ಭಾರತದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಭಾರತದ ಆರ್ಥಿಕತೆ ಕೃಷಿ ಮೇಲೆ ಅವಲಂಬಿತವಾಗಿದ್ದ ಕಾರಣ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟಿದೆ.

1947 ರಿಂದ, ಭಾರತೀಯ ಆರ್ಥಿಕನೀತಿಯನ್ನು ಯೋಜನಾ ವಿಧಾನದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡ ಮಾಡಲಾಗಿದೆ. ಇದನ್ನು, ಪಂಚ ವಾರ್ಷಿಕ ಯೋಜನೆಗಳ ಮೂಲಕ ಕೈಗೊಳ್ಳಲಾಯಿತು. ಪಂಚ ವಾರ್ಷಿಕ ಯೋಜನೆಗಳಲ್ಲಿ ನೀರಾವರಿ ಅಭಿವೃದ್ಧಿಗೆ ಎಲ್ಲಗಿಂತ ಹೆಚ್ಚಿನ ಆದ್ಯತೆ, ಅನುದಾನವನ್ನು ನೀಡಲಾಗುತ್ತಿದೆ.

ಕಳೆದ 60 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 2200 ಬೃಹತ್ ಹಾಗೂ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 10ನೇ ಪಂಚವಾರ್ಷಿಕ ಯೋಜನೆ ಅಂತ್ಯದ ವೇಳೆಗೆ ಸುಮಾರು 1400 ಯೋಜನೆಗಳು ಪೂರ್ಣಗೊಂಡಿವೆ.

1951ರಲ್ಲಿ ಭಾರತದಲ್ಲಿ ಒಟ್ಟು 280 ಬೃಹತ್ ಅಣೆಕಟ್ಟುಗಳಿದ್ದವು. ನಂತರದ ದಿನಗಳಲ್ಲಿ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ ಕಾರಣ ಬೃಹತ್ ಅಣೆಕಟ್ಟುಗಳ ಸಂಖ್ಯೆ 4500ಕ್ಕೂ ಅಧಿಕವಾಗಿದೆ. 1951 ವೇಳೆಗೆ ಭಾರತದಲ್ಲಿ ಸುಮಾರು 22.6 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ನೀರಾವರಿ ಆಧಾರಿತ ಕೃಷಿ ಮಾಡಲಾಗುತ್ತಿತ್ತು. 1995ರಲ್ಲಿ ನೀರಾವರಿ ಕೃಷಿ ಪ್ರದೇಶ ಸುಮಾರು 90 ದಶಲಕ್ಷ ಹೆಕ್ಟೇರ್ ಗೆ ಏರಿಕೆಯಾಗಿತ್ತು.

ನೀರಾವರಿ ಯೋಜನಾ ವೆಚ್ಚ ಮೊದಲ‌ ಪಂಚವಾರ್ಷಿಕ ಯೋಜನೆಯಲ್ಲಿನ 441.8 ಕೋಟಿ ರೂ.ನಿಂದ 10ನೇ ಪಂಚವಾರ್ಷಿಕ ಯೋಜನೆ ವೇಳೆಗೆ 1,00,106 ಕೋಟಿ ರೂ. ಗೆ ತಲುಪಿತ್ತು.

1950ರಿಂದ 1985ರವರೆಗೆ ಭಾರತ ನೀರಾವರಿ ಅಭಿವೃದ್ಧಿಗಾಗಿ ಸುಮಾರು 17,000 ಕೋಟಿ ರೂ. ಹೂಡಿಕೆ ಮಾಡಲಾಗಿತ್ತು. 2000-2005ರಲ್ಲಿ ಭಾರತ ಸುಮಾರು 1,20,000 ಕೋಟಿ ರೂ. ಹಾಗೂ 2005-2010ರಲ್ಲಿ ಸುಮಾರು 2,10,000 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಲಾಗಿದೆ.

ಕೇಂದ್ರ ಜಲ ಆಯೋಗದ ಪ್ರಕಾರ ಭಾರತದ ನೀರಾವರಿ ಸಾಮರ್ಥ್ಯ ಸುಮಾರು 140 ಮಿಲಿಯ ಹೆಕ್ಟೇರ್. ಅದರಂತೆ ಭಾರತದಲ್ಲಿ ಸದ್ಯ 112 ಮಿಲಿಯ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಸೃಷ್ಟಿಸಲಾಗಿದೆ. ಕೇವಲ 93 ಮಿಲಿಯ ಹೆಕ್ಟೇರ್ ನೀರಾವರಿ ಪ್ರದೇದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ದೇಶದ ಬಹು‌ಪಾಲು ಬರ ಪರಿಸ್ಥಿತಿ ಉಂಟಾಗುತ್ತಿರುವ ಹಿನ್ನೆಲೆ ಭಾರತ ಸರ್ಕಾರ ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಬಹುಅಂಶಗಳ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಗಳನ್ನು ಅಲ್ಪಕಾಲಿಕ, ಮಧ್ಯಮ ಹಾಗೂ ದೀರ್ಘ ಕಾಲಿಕವಾಗಿ ವಿಂಗಡಿಸಲಾಗಿದ್ದು, ಕ್ರಮವಾಗಿ 2020, 2025 ಮತ್ತು 2035ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಡಲಾಗಿದೆ.

ಸ್ವತಂತ್ರ್ಯದ ಬಳಿಕ ಬೃಹತ್ ಹಾಗೂ ಮಧ್ಯಮ ನೀರಾವರಿ ಯೋಜನೆಗಳಿಗೆ ಸುಮಾರು 4,00,000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಒಟ್ಟು 583 ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 3,41,900 ಕೋಟಿ ರೂ.ಗೆ ಯೋಜನಾ ವೆಚ್ಚ ಏರಿಕೆಯಾಗಿದೆ.

ಪಂಚವಾರ್ಷಿಕವಾರು ನೀರಾವರಿ ವೆಚ್ಚಗಳ ವಿವರ:

1 (51-56) 441.8 ಕೋಟಿ

2 (56-61) 541.6 ಕೋಟಿ

3 (61-66) 1019 ಕೋಟಿ

4 (69-74) 2415 ಕೋಟಿ

5 (74-78) 3925.8ಕೋಟಿ

6 (80-85) 11,528.7 ಕೋಟಿ

7 (85-90) 18,734.1ಕೋಟಿ

8 (92-97) 34,957.4 ಕೋಟಿ

9 (97-02) 83049.1 ಕೋಟಿ

10 (2002-07) 1,00,105 ಕೋಟಿ

11 (2007-12) 2,11,700 ಕೋಟಿConclusion:Gggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.