ETV Bharat / state

ಮುಖಗವಸಿನ ಕುರಿತು ಜಾಗೃತಿಗೆ ರಾಜ್ಯಾದ್ಯಂತ ಮಾಸ್ಕ್​ ಡೇ ಆಚರಣೆ, ಚಿತ್ರ ನಟರು ಭಾಗಿ: ಸಿಎಂ - ಸಾಂಸ್ಥಿಕ ಕ್ವಾರಂಟೈನ್

ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗು ಏಳು ದಿನ ಹೋಂ ಕ್ವಾರಂಟೈನ್, ಚೆನ್ನೈ, ದೆಹಲಿಯಿಂದ ಬರುವವರಿಗೆ 3 ದಿನ ಸಾಂಸ್ಥಿಕ ಮತ್ತು 11 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

CM
ಸಿಎಂ
author img

By

Published : Jun 15, 2020, 5:10 PM IST

ಬೆಂಗಳೂರು: ಇನ್ನುಮುಂದೆ ರಾಜ್ಯದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಮಾಸ್ಕ್ ಡೇ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ

ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿ ಗೋಷ್ಠಿ ನಡೆಸಿದ ಸಿಎಂ, ಬೆಂಗಳೂರು ನಗರದಲ್ಲಿ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣ ಕುರಿತು ಸವಿಸ್ತಾರವಾಗಿ ಚರ್ಚೆಮಾಡಲಾಯಿತು. ಈ ದಿನದವರೆಗೆ ರಾಜ್ಯದಲ್ಲಿ 7000 ಪ್ರಕರಣ ಕಂಡುಬಂದುದ್ದು, ಅದರಲ್ಲಿ 3,955 ಜನ ಬಿಡುಗಡೆ ಆಗಿದ್ದಾರೆ, 89 ಸಾವು ಸಂಭವಿಸಿವೆ, ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.2 ಹಾಗೂ ದೇಶದಲ್ಲಿ ಇದರ ಪ್ರಮಾಣ ಶೇ. 2.8 ರಷ್ಟಿದೆ ರಾಜ್ಯದಲ್ಲಿ‌ ಗುಣಮುಖ ಪ್ರಮಾಣ ಶೇ.56.5 ಇದ್ದರೆ ದೇಶದಲ್ಲಿ 51 ಶೇ. ಇದೆ ಎಂದರು.

ರಾಜ್ಯದಲ್ಲಿ ಇದುವರೆಗೆ 71 ಲ್ಯಾಬ್ ಗಳ‌ ಸ್ಥಾಪನೆ ಮಾಡಲಾಗಿದೆ 41 ಸರ್ಕಾರಿ ಮತ್ತು 30 ಖಾಸಗಿ ಲ್ಯಾಬ್​ಗಳಿವೆ ಈವರೆಗೆ, 4,40,684 ಪರೀಕ್ಷೆ ನಡೆಸಲಾಗಿದೆ. ಒಟ್ಟು 2,956 ಆಕ್ಟೀವ್ ಕೇಸ್ ಇದೆ. ಬೆಂಗಳೂರಿನಲ್ಲಿ 697 ಪ್ರಕರಣ ಇವೆ, 36 ಸಾವು ಸಂಭವಿಸಿದೆ, 330 ಆಕ್ಟೀವ್ ಪ್ರಕರಣ ಇವೆ, ರಾಜ್ಯದಲ್ಲಿ 16 ಜನ ಐಸಿಯುನಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗು ಏಳು ದಿನ ಹೋಂ ಕ್ವಾರಂಟೈನ್, ಚೆನ್ನೈ, ದೆಹಲಿಯಿಂದ ಬರುವವರಿಗೆ 3 ದಿನ ಸಾಂಸ್ಥಿಕ ಮತ್ತು 11 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

ಇದೇ ಗುರುವಾರ ಮಾಸ್ಕ್ ಡೇ ಆಚರಣೆ ಮಾಡಲಾಗುತ್ತದೆ, ಬೆಂಗಳೂರಿನಲ್ಲಿ ವಿಧಾನಸೌಧದ ಸಮೀಪ ಅಂಬೇಡ್ಕರ್ ಪ್ರತಿಮೆ ಎದುರು ಸಿನಿಮಾ ನಟರು, ಕ್ರೀಡಾಪಟುಗಳನ್ನು ಸೇರಿಸಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಬೆಂಗಳೂರು ಮಾತ್ರವಲ್ಲ ಎಲ್ಲಾ ಜಿಲ್ಲಾ ತಾಲೂಕು, ಹೋಬಳಿಗಳಲ್ಲಿ ಮಾಸ್ಕ್ ಡೇ ಮಾಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ವಾಕ್ ಮಾಡಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ರೋಗಲಕ್ಷಣ ಇಲ್ಲದೇ ಇಲ್ಲದವರು ಶೇ.93, ರೋಗ ಲಕ್ಷಣ ಇರುವವರು ಕೇವಲ 7 ರಷ್ಟು ಮಾತ್ರ ಇದ್ದಾರೆ. ಈ ಸಂಗತಿ ಗಮನುಸಬೇಕಿದೆ. ಇಡಿ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ವಿಶೇಷ ಪ್ರಯತ್ನ ಮಾಡಿದ್ದೇವೆ ಇದಕ್ಕೆ ಜೆ.ಪಿ ನಡ್ಡಾ ಅಭಿನಂದನೆ ಸಲ್ಲಿಸಿದ್ದಾರೆ ಎಂದರು.

ಇನ್ಮುಂದೆ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕೈಗೊಳ್ಳದ ವ್ಯಕ್ತಿಗಳಿಗೆ 200 ರೂ ಆರಂಭಿಕ ದಂಡ ವಿಧಿಸಲಾಗುತ್ತದೆ. ಇದನ್ನು ಇಡೀ ರಾಜ್ಯಾದ್ಯಂತ ಜಾರಿ ಮಾಡಲಾಗುತ್ತದೆ ಎಂದರು. ಪ್ರತಿ 10 ಲಕ್ಷ ಜನರಲ್ಲಿ 7,100 ಪರೀಕ್ಷೆ ನಡೆಸಲಾಗಿದೆ ಐಸಿಎಂಆರ್ ಮಾರ್ಗಸೂಚಿಗಿಂತ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಕೊರೊನಾ ವೈರಾಣು ಹರಡುವಿಕೆ ಸರಿಪಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಿದ್ದೇವೆ. ಬೆಂಗಳೂರು ಸುತ್ತಮುತ್ತಕ್ಕೆ ಕೋವಿಡ್ ವಿಶೇಷ ಕಾರ್ಯಪಡೆ ರಚಿಸಿದ್ದೇವೆ. ಬಿಬಿಎಂಪಿ ಆಯುಕ್ತರು ಸುತ್ತಮುತ್ತ ಜಿಲ್ಲೆಗಳೊಂದಿಗೆ ವಿಶೇಷ ಗಮನ ಕೊಡಲು ಸೂಚಿಸಿದ್ದೇನೆ ಎಂದರು.

ಕೊರೊನಾ ತಡೆಗೆ ಶಕ್ತಿಮೀತಿ ಪ್ರಯತ್ನ ಮಾಡೋಣ, ಮಾಧ್ಯಮ‌ ಸಹಕಾರ ಕೂಡ ಬೇಕಿದೆ. 7000 ಪ್ರಕರಣದಲ್ಲಿ 4386 ಮಹಾರಾಷ್ಟ್ರದಿಂದ ಬಂದಿದ್ದಾರೆ, 1340 ಅವರ ಸಂಪರ್ಕಿದಂದ ಬಂದವರಾಗಿದ್ದಾರೆ, 216 ಹೊರದೇಶದಿಂದ ಬಂದವರು, 87 ಜನ ದೆಹಲಿಯಿಂದ, ತಮಿಳುನಾಡಿನಿಂದ 67, ಗುಜರಾತ್​ನಿಂದ ಬಂದ 62 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದರು.

ಕೊರೊನಾ ಹೆಚ್ಚಾಗುವ ಸೂಚನೆ ಇರುವ ಕಾರಣ ಅಗತ್ಯ ಬಿಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ಈ ರಾಜ್ಯಕ್ಕೆ ಕೊಡುತ್ತಿದ್ದೇನೆ. ಜನತೆಯ ಸಹಕಾರ ಕೂಡ ಬೇಕು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರು.

ಲಾಕ್ ಡೌನ್ ಇಲ್ಲ:

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಇನ್ನು ಹೆಚ್ಚು ರಿಲ್ಯಾಕ್ಸ್ ಮಾಡುವಂತೆ ಮೋದಿಗೆ ಮನವಿ ಮಾಡಲಿದ್ದೇನೆ. ನಮ್ಮ ರಾಜ್ಯದಲ್ಲಿ ಸ್ಥಳೀಯ ಆತಂಕ ಇಲ್ಲ, ಹೊರಗಡೆಯಿಂದ ಬಂದವರಿಂದ ಆತಂಕ ಸೃಷ್ಟಿಯಾಗಿದೆ ಅಷ್ಟೇ, ಅವರನ್ನ ಕ್ವಾರಂಟೈನ್​ನಲ್ಲಿ ಇಟ್ಟು ಕ್ರಮ ಕೈಗೊಳ್ಳಲಾಗುತ್ತದೆ. ದುಬಾರಿ ಬಿಲ್ ಮಾಡುವ ಖಾಸಗಿಯವರ ಮೇಲೆ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಸಂಕಷ್ಟದ ಕಾಲದಲ್ಲಿ‌ ಸುಲಿಗೆ ಮಾಡಬೇಡಿ ಎಂದು ವಿನಂತಿ ಮಾಡುತ್ತೇನೆ ಈ ಸಂಬಂಧ ಸೂಚನೆ ನೀಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.