ದೇವನಹಳ್ಳಿ : ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಕೆಲವು ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದಕ್ಕೆ ಕೆಐಎಎಲ್ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ.
ಹ್ಯಾಂಡ್ ಟೂಲ್‍ಗಳು, ಬ್ಲೇಡ್‍ಗಳು, ಲೈಟರ್ಗಳು, ತೆಂಗಿನಕಾಯಿಗಳು, ಟಾಯ್ ಗನ್‍ಗಳು, ತುಪ್ಪದ ಪ್ಯಾಕೇಟ್‍ಗಳು, ಮಸಾಲೆ ಪದಾರ್ಥಗಳು ಸೇರಿದಂತೆ ಕೆಲವು ವಸ್ತುಗಳು ನಿರ್ಬಂಧಿಸಲ್ಪಟ್ಟಿವೆ. ಒಂದು ವೇಳೆ ತೆಗೆದುಕೊಂಡು ಹೋಗಿದ್ದಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲ್ಲಿದ್ದಾರೆ. ಈ ವಾರ ಸುಮಾರು 500ಕ್ಕೂ ಹೆಚ್ಚು ಕೆಜಿ ನಿರ್ಬಂಧಿತ ವಸ್ತುಗಳು ತಪಾಸಣೆ ವೇಳೆ ಸಿಕ್ಕಿರುವುದು ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆ 2024ಕ್ಕೆ ಪೂರ್ಣಗೊಳ್ಳಲಿದೆ: ಸಂಸದ ಬಚ್ಚೇಗೌಡ
ಪ್ರಯಾಣಿಕರಿಗೂ ಸಹ ಯಾವುದು ನಿರ್ಬಂಧಿತ ವಸ್ತುಗಳು ಎಂಬ ಬಗ್ಗೆ ಮಾಹಿತಿ ಇರಲ್ಲ. ಇದರಿಂದ ಪ್ರಯಾಣಿಕರು ತಮ್ಮ ಜತೆಗೆ ನಿರ್ಬಂಧಿತ ವಸ್ತುಗಳನ್ನು ಇಟ್ಕೊಂಡು ಬರುತ್ತಾರೆ. ತಪಾಸಣೆ ನಡೆಸುವ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ನಿರ್ಬಂಧಿತ ವಸ್ತುಗಳು ಕಂಡು ಬಂದಲ್ಲಿ ವಶಕ್ಕೆ ಪಡೆಯಲ್ಲಿದ್ದಾರೆ.
ಇದರಿಂದ ಪ್ರಯಾಣಿಕರಿಗೆ ಮುಜುಗರ ಆಗಲಿದೆ. ಜೊತೆಗೆ ಸಿಐಎಸ್‌ಎಫ್ ಭಧ್ರತಾ ಸಿಬ್ಬಂದಿಯ ಕೆಲಸದ ಮೇಲೆ ಒತ್ತಡ ಬಿದ್ದು, ತಪಾಸಣಾ ಕಾರ್ಯ ನಿಧಾನವಾಗಲಿದೆ. ಈ ಕಾರಣದಿಂದ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಪ್ರಯಾಣಿಕರಿಗೆ ಮನವಿ ಮಾಡಿದ್ದು, ಈ ಕೆಳಕಂಡ ವಸ್ತುಗಳನ್ನ ಜೊತೆಯಲ್ಲಿ ತರದಂತೆ ಪ್ರಯಾಣಿಕರಲ್ಲಿ ವಿನಂತಿಸಿದೆ.
ನಿರ್ಬಂಧಿತ ವಸ್ತುಗಳು
ಲೈಟರ್, ಕತ್ತರಿ(ಸಿಸರ್), ಟಾಯ್ ವೆಪನ್‍ಗಳು,
ಚೂಪಾದ ಲೋಹದ ವಸ್ತುಗಳು, ಕ್ರೀಡಾ ವಸ್ತುಗಳು
ಗನ್‍ಗಳು ಮತ್ತು ಫೈರ್ ಆರ್ಮ್‍ಗಳು,
ಹತಾರಗಳು, ಆತ್ಮರಕ್ಷಣೆಯ ಉಪಕರಣಗಳು,
ಸ್ಫೋಟಕ ವಸ್ತುಗಳು, ದಹನಶೀಲ ವಸ್ತುಗಳು
ರಾಸಾಯನಿಕಗಳು, ಏರೋಸಾಲ್‍ಗಳು ಮತ್ತು ದ್ರವಗಳು ಮತ್ತು ಸ್ಥಳೀಯವಾಗಿ ಅಪಾಯಕಾರಿ ಎಂದು ಗುರುತಿಸಲಾದ ವಸ್ತುಗಳಾಗಿವೆ.