ETV Bharat / state

ಶೀಘ್ರದಲ್ಲೇ ಚಾಲಕ ಸ್ನೇಹಿ ವಿಧೇಯಕ ಮಂಡನೆ ಆಗಲಿದೆ : ಸಚಿವ ಶಿವರಾಂ ಹೆಬ್ಬಾರ್ - ಚಾಲಕ ಸ್ನೇಹಿ ವಿಧೇಯಕ ಜಾರಿಗೆ

ಪ್ರಧಾನಿ ಇಂದಿರಾ ಗಾಂಧಿ ಮೇಲೆ ಮಮತೆಯೂ ಇಲ್ಲ , ದ್ವೇಷವೂ ಇಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ. ನಾಳೆಯೇ ಬದಲಾವಣೆ ಮಾಡ್ತೇವೆ ಎಂದೇನು ಸಿಎಂ ಹೇಳಿಲ್ಲ. ಸಿಎಂ ಮಾಡುವ ತೀರ್ಮಾನಕ್ಕೆ ನಾವು ಬದ್ಧ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ನಿರ್ಣಯ ತೆಗೆದುಕೊಳ್ತಾರೆ..

: Minister Shivaram Hebbar
ಸಚಿವ ಶಿವರಾಂ ಹೆಬ್ಬಾರ್
author img

By

Published : Aug 13, 2021, 8:46 PM IST

ಬೆಂಗಳೂರು : ಆಟೋ, ಟ್ರಕ್, ಬಸ್ ಸೇರಿದಂತೆ ಚಾಲಕರಿಗೆ ಅನುಕೂಲಕರ ವಿಧೇಯಕ ಮಂಡನೆಗೆ ಕಾರ್ಮಿಕ ಇಲಾಖೆ ಉದ್ದೇಶಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು. ಇಂದು ವಿಕಾಸಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ದೃಢ ಹೆಜ್ಜೆ ಇಡಬೇಕೆಂದು ನಿರ್ಧಾರ ಮಾಡಿದ್ದೇನೆ.

ಅತೀ ಶೀಘ್ರದಲ್ಲೇ ಹೊಸ ಬಿಲ್ ಮಂಡನೆ ಮಾಡಲಿದ್ದೇವೆ. ಆಟೋರಿಕ್ಷಾ, ಟ್ರಕ್, ಬಸ್ ಸೇರಿದಂತೆ ಎಲ್ಲಾ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಸಂಬಂಧಪಟ್ಟಂತೆ ಹೊಸ ಬಿಲ್ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದರು. ಚಾಲಕರು ಮೃತರಾದರೆ 5 ಲಕ್ಷ ರೂ.‌ ಪರಿಹಾರ ನೀಡುವುದು ಸೇರಿ ಹಲವು ಚಾಲಕ‌ ಸ್ನೇಹಿ ಸೌಲಭ್ಯಗಳು ಹೊಸ ಬಿಲ್​​​ನಲ್ಲಿರಲಿವೆ.

ಬರುವ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡನೆ ಮಾಡಲಾಗುವುದು. ಒಂದು ಕಾಲಕ್ಕೆ ನಾನು ಚಾಲಕನಾಗಿ ಕೆಲಸ ಮಾಡಿದ್ದೇನೆ. ನನಗೆ ಚಾಲಕನ ಸಂಕಷ್ಟ ಗೊತ್ತಿದೆ. ಅದಕ್ಕಾಗಿ ಹೊಸ ಬಿಲ್ ತರಲಾಗುತ್ತಿದೆ ಎಂದರು.

ವಲಸೆ ಕಾರ್ಮಿಕರಿಗೆ ಪ್ರಮುಖ ಜಿಲ್ಲೆಯಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನ ಮಾಡಲಾಗಿದೆ. ಅಸಂಘಟಿತ ವಲಯಕ್ಕೆ ಮಾಧ್ಯಮ ಸೇರಿದಂತೆ ಹಲವು ವರ್ಗಗಳನ್ನು ಸೇರಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು. ಹಲವು ವರ್ಗಗಳು ಅಸಂಘಟಿತ ವಲಯಕ್ಕೆ ಸೇರಿಸಲು ಮನವಿ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು. ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯಧನ ದುಪ್ಪಟ್ಟು ಮಾಡಲು ತಿರ್ಮಾನ ಮಾಡಲಾಗಿದೆ ಎಂದರು.

ಇಂದಿರಾ ಮೇಲೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ : ಪ್ರಧಾನಿ ಇಂದಿರಾ ಗಾಂಧಿ ಮೇಲೆ ಮಮತೆಯೂ ಇಲ್ಲ , ದ್ವೇಷವೂ ಇಲ್ಲ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ. ನಾಳೆಯೇ ಬದಲಾವಣೆ ಮಾಡ್ತೇವೆ ಎಂದೇನು ಸಿಎಂ ಹೇಳಿಲ್ಲ. ಸಿಎಂ ಮಾಡುವ ತೀರ್ಮಾನಕ್ಕೆ ನಾವು ಬದ್ಧ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ನಿರ್ಣಯ ತೆಗೆದುಕೊಳ್ತಾರೆ ಎಂದರು.

ಓದಿ: ಬೆಂದುಹೋದ ಪ್ರೀತಿ.. ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.