ಬೆಂಗಳೂರು: ಮುಂದಿನ ದಿನಗಳಲ್ಲಿ ವಿಶ್ವ ವಿದ್ಯಾಲಯಗಳು ದೊಡ್ಡ ದೊಡ್ಡ ಸಂಸ್ಥೆಗಳನ್ನು ನಡೆಸುವಂತಾಗಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಸಚಿವ ಅಶ್ವಥ ನಾರಾಯಣ್ ಹೇಳಿದರು.
ಟೆಕ್ ಸಮ್ಮಿಟ್ ಬಗ್ಗೆ ಮಾತನಾಡಿ, ಅಮೆರಿಕಾ ದೇಶದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ದೊಡ್ಡ ಸಂಸ್ಥೆಗಳನ್ನು ಉತ್ತಮವಾಗಿ ನಡೆಸುತ್ತಿದೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಆಗಬೇಕು. ನಮ್ಮಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ತುಂಬಾ ಕಡಿಮೆ, ನಾವು ಇನ್ನು ಮುಂದುವರೆಯಬೇಕು ಎಂದರು.
ನಮ್ಮ ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಎಲ್ಲಾ ರಾಷ್ಟ್ರಗಳ ಸಂಸ್ಥೆಗಳು ಬಂದು ತಮ್ಮ ಶಾಖೆಯನ್ನು ತೆರೆಯಬೇಕು. ಜೊತೆಗೆ ನಮ್ಮ ದೇಶದ ಸ್ಟಾರ್ಟ್ ಅಪ್ಗಳು ಅಕಾಶದೆತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.