ಬೆಂಗಳೂರು: ಅಧಿಕಾರಿಗಳ ನಿರ್ಲಕ್ಷದಿಂದ ಅಮೃತ್ ಮಹಲ್ ತಳಿಯ ಜಾನುವಾರುಗಳು ರೋಧನೆ ಅನುಭವಿಸುತ್ತಿರುವ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ ವರದಿ ರಾಜ್ಯದಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲಿ ಗೋ ಹತ್ಯಾ ನಿಷೇಧ ಕಡ್ಡಾಯಗೊಳಿಸುವುದಷ್ಟೇ ಅಲ್ಲ, ಅದನ್ನ ಮತ್ತಷ್ಟು ಬಲಪಡಿಸುವುದಾಗಿ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ... ಜಿಲ್ಲಾಡಳಿತದ ಕಣ್ಣು ತೆರೆಸಿದ ಈಟಿವಿ ಭಾರತ .. 1 ಗಂಟೆಯೊಳಗೆ ಫಲಶ್ರುತಿ.. ಅವು ನರಕದಿಂದ ಪಾರಾಗಲಿ!
ಬಿಜೆಪಿ ಕಚೇರಿಯಲ್ಲಿ ಗೋ ಪೂಜೆಯ ಸಂಭ್ರಮಾಚರಣೆ ಮಾಡಲಾಯಿತು. ಲಕ್ಷ್ಮಿ ಪೂಜೆ ಪ್ರಯುಕ್ತ ಗೋ ಪೂಜೆ ಹಾಗೂ ಭಗಿನಿ ನಿವೇದಿತಾ ಜನ್ಮದಿನವನ್ನು ಆಚರಿಸಲಾಯಿತು. ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ರವಿಕುಮಾರ್, ಚನ್ನರಾಯಪಟ್ಟಣದ ಬಳಿಯ ಅಮೃತಮಹಲ್ ಕಾವಲ್‌ನಲ್ಲಿ ತೊಂದರೆಗೆ ಸಿಲುಕಿದ್ದ ಎಲ್ಲ ಗೋವುಗಳನ್ನು ರಕ್ಷಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಆಸಕ್ತಿ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಗೋವು ಸಂರಕ್ಷಣೆ ಮಾಡಿಸಿ, ಅವುಗಳಿಗೆ ಮೇವು ಹಾಗೂ ಪ್ರತ್ಯೇಕ ಸ್ಥಳದಲ್ಲಿ ಆಶ್ರಯದ ವ್ಯವಸ್ಥೆ ಮಾಡಿಸಿದ್ದಾರೆ ಎಂದರು.
ಈಟಿವಿ ಭಾರತ ನಿನ್ನೆಯಷ್ಟೇ ಚನ್ನರಾಯಪಟ್ಟಣದ ಅಮೃತ್ ಮಹಲ್ ಕಾವಲ್‌ನಲ್ಲಿ ಜಾನುವಾರುಗಳು ನರಕ ಅನುಭವಿಸುತ್ತಿರುವ ಬಗ್ಗೆ ಲಕ್ಷ ಲಕ್ಷ ನೀಡಿದ್ರೂ ನಿರ್ಲಕ್ಷ್ಯ.. ಅಮೃತ್ ಮಹಲ್ ಜಾನುವಾರುಗಳಿಗೆ ನರಕ.. ಎಂಬ ಸುದ್ದಿ ಪ್ರಸಾರ ಮಾಡಿತ್ತು. ಇದಾದ 1 ಗಂಟೆಯೊಳಗೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರು ಭೇಟಿ ನೀಡಿದರು.