ETV Bharat / state

ಪ್ರವೀಣ್​ ಕೊಲೆ ಪ್ರಕರಣ: ಪಿಎಫ್​ಐ, ಎಸ್​​ಡಿಪಿಐ ಮೇಲೆ ಅನುಮಾನವಿದೆ ಎಂದ ಗೃಹ ಸಚಿವರು - etv bharat kannada

ಪ್ರವೀಣ್​ ನೆಟ್ಟಾರು ಕೊಲೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಸಹಜ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Home minister araga jnanendra
ಪ್ರವೀಣ್​ ಕೊಲೆ ಪ್ರಕರಣ: ಪಿಎಫ್​ಐ, ಎಸ್​​ಡಿಪಿಐ ಮೇಲೆ ಅನುಮಾನವಿದೆ ಎಂದ ಗೃಹ ಸಚಿವರು
author img

By

Published : Jul 28, 2022, 11:19 AM IST

Updated : Jul 28, 2022, 12:32 PM IST

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದ​ ತನಿಖೆ ಮುಂದುವರೆದಿದೆ. ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ನಮಗೆ ಪಿಎಫ್​ಐ ಮತ್ತು ಎಸ್​​ಡಿಪಿಐ ಮೇಲೆ ಅನುಮಾನವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪ್ರವೀಣ್​ ಕೊಲೆ ಪ್ರಕರಣದ ಬಗ್ಗೆ ಗೃಹ ಸಚಿವರ ಪ್ತತಿಕ್ರಿಯೆ

ಈ ಬಗ್ಗೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಅವರು, ಸದ್ಯ ನಾನು ಯಾರ ಬಗ್ಗೆಯೂ ಕಾಮೆಂಟ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿರ್ದಿಷ್ಟ ವ್ಯಕ್ತಿ ಎಂದು ಹೇಳಲಾಗಲ್ಲ, ಯಾರೇ ಇರಲಿ ಪೊಲೀಸರು ಪತ್ತೆ ಮಾಡುತ್ತಾರೆ. ಕೊಲೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗಿರುವುದು ಸಹಜ. ಪ್ರವೀಣ್​ ತುಂಬಾ ಒಳ್ಳೆಯ ವ್ಯಕ್ತಿ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ನಾವು ನಿರ್ವಹಿಸುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ: ಸಾಧನಾ ಸಮಾವೇಶ ದಿಢೀರ್ ರದ್ದು: ಮೊಸರನ್ನ, ಬಾದುಷಾ, ಪಲಾವ್ ಶಾಲೆ-ಹಾಸ್ಟೆಲ್​ಗೆ ವಿತರಣೆ

Last Updated : Jul 28, 2022, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.