ETV Bharat / state

ಕೇಸ್ ನಿಲ್ಲುವ ದಾಖಲೆ ಸಿಗುತ್ತಿದ್ದಂತೆ ದೂರು ದಾಖಲು: ಬಾಲಚಂದ್ರ ಜಾರಕಿಹೊಳಿ‌ - cs case ]

ನಮ್ಮ ಇಡೀ ಕುಟುಂಬ ಕಾನೂನು ಹೋರಾಟ ನಡೆಸಲಿದೆ. ಮಾಹಿತಿ ಕಲೆಹಾಕಲಿದೆ, ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ಬಿಡುವುದಿಲ್ಲ. ಸಾಕ್ಷಿಗಳಿಲ್ಲದೆ ದೂರು ನೀಡಬಾರದು ಎಂದು ಕಾಯಿತ್ತಿದ್ದೇವೆ, ಡಿಟೆಕ್ಟಿವ್ ಏಜೆನ್ಸಿ ನೆರವು ಪಡೆದುಕೊಳ್ಳುತ್ತಿದ್ದೇವೆ. ಅಗತ್ಯ ಮಾಹಿತಿಗಳು ಲಭ್ಯವಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಪ್ರಕರಣದಲ್ಲಿ ಭಾಗಿಯಾಗಿರುವ 9 ಜನರ ವಿರುದ್ಧವೂ ದೂರು ದಾಖಲಿಸುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ‌ ಹೇಳಿದ್ದಾರೆ.

we complaint against CD Case : Balachandra Jarkiholi
ಬಾಲಚಂದ್ರ ಜಾರಕಿಹೊಳಿ‌
author img

By

Published : Mar 10, 2021, 12:24 AM IST

ಬೆಂಗಳೂರು: ರಮೇಶ್ ಜಾರಕಿಹೊಳಿ‌ ವಿರುದ್ಧ ನಡೆಸಿರುವ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ಖಚಿತವಾಗಿದ್ದು, ಪೂರಕ ಮಾಹಿತಿ ಕಲೆಹಾಕುತ್ತಿದ್ದೇವೆ. ನಮ್ಮ ದೂರು ಕೋರ್ಟ್ ನಲ್ಲಿ ನಿಲ್ಲಲಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ದೂರ ನೀಡಲಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹೇಳಿದ್ದಾರೆ.

ಆರೋಪದ ಕುರಿತು ಸಹೋದರ ರಮೇಶ್ ಜಾರಕಿಹೊಳಿ‌ ಸುದ್ದಿಗೋಷ್ಟಿ ನಡೆಸಿದ ನಂತರ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ‌, ಸಿಡಿ ಬಗ್ಗೆ ಖಾಸಗಿ ಏಜೆನ್ಸಿ ಮೂಲಕ ಮಾಹಿತಿ ಕೆಲೆಹಾಕುತ್ತಿದ್ದೇವೆ. ದೆಹಲಿಯ ನಮ್ಮ ಹಿರಿಯ ವಕೀಲರ ಜೊತೆ ಚರ್ಚೆ ನಡೆಸಿದ್ದೇವೆ. ಬೆಂಗಳೂರು,ಬೆಳಗಾವಿ, ಗೋಕಾಕ್ ಈ ಮೂರು ಸ್ಥಳಗಳಲ್ಲಿ ಎಲ್ಲಿ ದೂರು ಕೊಡಬೇಕು ಎಂದು ಚಿಂತಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದೆ ಇಂತಹ ತಪ್ಪು ಮಾಡುವವರಿಗೆ ಇದು ಪಾಠವಾಗಬೇಕು ಎಂದಿದ್ದಾರೆ.

ನಮ್ಮ ಇಡೀ ಕುಟುಂಬ ಕಾನೂನು ಹೋರಾಟ ನಡೆಸಲಿದೆ. ಮಾಹಿತಿ ಕಲೆಹಾಕಲಿದೆ,ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ಬಿಡುವುದಿಲ್ಲ. ಸಾಕ್ಷಿಗಳಿಲ್ಲದೆ ದೂರು ನೀಡಬಾರದು ಎಂದು ಕಾಯಿತ್ತಿದ್ದೇವೆ, ಡಿಟೆಕ್ಟಿವ್ ಏಜೆನ್ಸಿ ನೆರವು ಪಡೆದುಕೊಳ್ಳುತ್ತಿದ್ದೇವೆ. ಅಗತ್ಯ ಮಾಹಿತಿಗಳು ಲಭ್ಯವಾಗುತ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಪ್ರಕರಣದಲ್ಲಿ ಭಾಗಿಯಾಗಿರುವ 9 ಜನರ ವಿರುದ್ಧವೂ ದೂರು ದಾಖಲಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಸಂಪುಟಕ್ಕೆ ರಮೇಶ್ ಜಾರಕಿಹೊಳಿ‌:

ರಮೇಶ್ ಜಾರಕಿಹೊಳಿ‌ ನಿರಪರಾಧಿ ಎಂದು ಸಾಬೀತಾದ‌ ನಂತರ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎನ್ನುವ ಮೂಲಕ ಆದಷ್ಟು ಬೇಗ ಬಿಎಸ್​ವೈ ಸಂಪುಟಕ್ಕೆ ರಮೇಶ್ ಜಾರಕಿಹೊಳಿ‌ ರೀ ಎಂಟ್ರಿ ಕೊಡುವ ಸುಳಿವು ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.