ಬೆಂಗಳೂರು : ಟಿ ಕೆ ಹಳ್ಳಿಯಲ್ಲಿರುವ 4ನೇ ಹಂತದ 2ನೇ ಘಟ್ಟದ 2500 ಮಿ.ಮೀ ವ್ಯಾಸದ ಬಿ ಎಸ್ ವಾಲ್ವ್ ಸಂ. 1ರ 250 ಮಿ.ಮೀ ವ್ಯಾಸದ ಮಾರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿರುವ ಹಿನ್ನಲೆ ನಿನ್ನೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತುರ್ತು ಕಾಮಗಾರಿ ಕೈಗೊಳ್ಳಲಾಗಿತ್ತು. ಇದರಿಂದಾಗಿ ಕೆಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನಂದಿನಿ ಲೇಔಟ್, ಆರ್.ಆರ್ ನಗರ, ರಾಜಾಜಿನಗರ, ನಾಗರಬಾವಿ,ಯಲಹಂಕ, ಬ್ಯಾಟರಾಯನಪುರ, ಹೆಚ್ಆರ್‌ಸಿಆರ್, ದಾಸರಹಳ್ಳಿ, ಚಂದ್ರಲೇಔಟ್, ಕೆಂಗೇರಿ, ಬಾಣಸವಾಡಿ ಮತ್ತು ಉತ್ತರ ವಿಭಾಗದ ಬಹುತೇಕ ಭಾಗಗಳು, ಅಂಜನಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜಂಬೂಸವಾರಿ ದಿಣ್ಣೆ, ಕೊತ್ತನೂರು ದಿಣ್ಣೆ, ಕೋಡಿ ಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಕೂಡ್ಲು, ಹೊಂಗಸಂದ್ರ, ಮಂಗಮ್ಮನಪಾಳ್ಯ, ಮಾರತ್ ಹಳ್ಳಿ, ಹೂಡಿ, ಎ.ನಾರಾಯಣಪುರ, ಕೆ.ಆರ್ ಪುರಂ, ರಾಮಮೂರ್ತಿ ನಗರ, ವೈಟ್ ಫೀಲ್ಡ್, ಸಿ.ವಿ.ರಾಮನ್ ನಗರ,ಹಳೆ ಏರ್ಪೋರ್ಟ್ ರಸ್ತೆ, ಹೆಚ್‌ಆರ್‌ಬಿಆರ್ ಲೇಔಟ್, ಓಂಎಂಬಿಆರ್ ಲೇಔಟ್, ರಾಮಯ್ಯ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಓದಿ : ಕಲರಿ ಪಯಟ್ಟು: ಯುದ್ಧ ಕಲೆಯಲ್ಲಿ ಸಾಹಸಗಾಥೆ ಬರೆದ ಮೀನಾಕ್ಷಿ ಅಮ್ಮ..!