ಬೆಂಗಳೂರು: ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ನೀರು ಸೋರುತ್ತಿರುವುದನ್ನ ನೋಡಿ ಜನರಲ್ಲಿ ಆತಂಕ ಹೆಚ್ಚಾಗಿದೆ.
ಸಣ್ಣ ಮಳೆಯನ್ನೂ ತಡೆಯಲಾಗದಷ್ಟು ಕಳಪೆ ಕಾಮಗಾರಿ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ಹಲವು ದಿನಗಳಿಂದ ಸಾಧಾರಣ ಮಳೆಯನ್ನು ತಡೆಯುವ ಸಾಮರ್ಥ್ಯ ನಿಲ್ದಾಣದ ಕಾಮಗಾರಿಯಲ್ಲಿ ಇಲ್ಲ. ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಸ್ಥಳವಾಗಿದ್ದು, ಕಳಪೆ ಗುಣಮಟ್ಟದ ಕಟ್ಟಡ ಈಗ ಜನರಲ್ಲಿ ಆತಂಕ ಸೃಷ್ಟಿಸಿದೆ.
ಪ್ರತಿನಿತ್ಯ ಹಸಿರು, ನೇರಳೆ ಬಣ್ಣದ ಮೆಟ್ರೋ ರೈಲನ್ನ ಬದಲಿಸುವ ಜಾಗದಲ್ಲಿ ಇಂತ ಕಳಪೆ ಕಾಮಗಾರಿ ಕಂಡು ಬಂದಿದೆ. ಈವರೆಗೂ ಯಾವುದೇ ಅಧಿಕಾರಿ ಅಥವಾ ಇಲಾಖೆ ಕ್ರಮ ಕೈಗೊಂಡಿಲ್ಲ ಎಂಬ ಕೂಗು ಸಹ ಕೇಳಿ ಬಂದಿದೆ.