ETV Bharat / state

ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂ ತೀರ್ಪು: ಮೈತ್ರಿ ಸರ್ಕಾರದ ಭವಿಷ್ಯವೂ ನಿರ್ಧಾರ - kannada news

ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಿಸಿ ಅತೃಪ್ತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಲಿದೆ. ಹೀಗಾಗಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ ನೆಟ್ಟಿದೆ.

ಸುಪ್ರೀಂಕೋರ್ಟ್​ನಲ್ಲಿಂದು ಅತೃಪ್ತರು v/s ಸ್ಪೀಕರ್ ಕದನ
author img

By

Published : Jul 12, 2019, 9:12 AM IST

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಂದುವರಿಯಲಿದ್ದು, ಇಂದೇ ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆದು ಹೊರಬೀಳುವ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಅತೃಪ್ತ ಶಾಸಕರ ವಾದವಾಗಿದೆ. ಮತ್ತೊಂದೆಡೆ ಕಾನೂನು ಪ್ರಕಾರ ಪ್ರಕ್ರಿಯೆಗಳನ್ನು ಅನುಸರಿಸಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶದ ಅಗತ್ಯತೆ ಇದೆ ಎನ್ನುವುದು ಸ್ಪೀಕರ್ ಅವರ ಪ್ರತಿವಾದ ಆಗಿದೆ. ಅತೃಪ್ತರ ಬಗ್ಗೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ಲೋಹಟಗಿ ವಾದ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಪೀಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದು, ಎರಡೂ ಗುಂಪಿನ ನಡುವೆ ಕಾನೂನು ಸಮರ ನಡೆಯಲಿದೆ.

ಸ್ಪೀಕರ್ ಮತ್ತು ಬಂಡಾಯ ಶಾಸಕರ ನಿಲುವಿನಿಂದ ರಾಜೀನಾಮೆ ಅಂಗೀಕಾರ ಪ್ರಹಸನ ತೀವ್ರ ಕುತೂಹಲ ಘಟ್ಟ ಪಡೆದಿದೆ. ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಆದೇಶಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹಾಗೆಯೇ ಸ್ಪೀಕರ್ ಗೆ ಕಾಲಾವಕಾಶ ನೀಡಿದರೆ ಸದ್ಯಕ್ಕೆ ಸರ್ಕಾರ ಅಪಾಯದಿಂದ ಪಾರಾಗಲಿದೆ. ಆಡಳಿತ ಪಕ್ಷಗಳು ಹಾಗು ಪ್ರತಿಪಕ್ಷಗಳ ನಾಯಕರು ವಿಧಾನಮಂಡಲ ಅಧಿವೇಶನ ಆರಂಭವಾಗುವ ಇಂದು ಕೋರ್ಟ್​ನಲ್ಲಿ ನಡೆಯುವ ವಿಚಾರಣೆಯನ್ನು ರಾಜಕೀಯ ತಂತ್ರಗಾರಿಕೆ ರೂಪಿಸಲು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Intro:ಸುಪ್ರೀಂಕೋರ್ಟ್ ನಲ್ಲಿ ಇಂದು ಅತೃಪ್ತರು v/s ಸ್ಪೀಕರ್
ಕದನ ...ಜಯ ಯಾರಿಗೆ...?

ಬೆಂಗಳೂರು : ಶಾಸಕರ ರಾಜೀನಾಮೆ ಅಂಗೀಕಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನಲ್ಲಿ ಬಂಡಾಯ ಶಾಸಕರು ಹಾಗು ಸ್ಪೀಕರ್ ನಡುವೆ ಇಂದು ಶುಕ್ರವಾರ ಕಾನೂನು ಸಮರ ನಡೆಯಲಿದೆ.

ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆದು ಹೊರಬೀಳುವ ತೀರ್ಪಿನ ಮೇಲೆ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ.

Body: ತಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಅತೃಪ್ತ ಶಾಸಕರ ವಾದವಾಗಿದೆ. ಕಾನೂನು ಪ್ರಕಾರ ಪ್ರಕ್ರಿಯೆಗಳನ್ನು ಅನುಸರಿಸಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶದ ಅಗತ್ಯತೆ ಇದೆ ಎನ್ನುವುದು ಸ್ಪೀಕರ್ ಅವರ ಪ್ರತಿ ವಾದ ವಾಗಿದೆ.

ಅತೃಪ್ತರ ಬಗ್ಗೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ಲೋಹಟಿ ವಾದ ಮಾಡಲಿದ್ದಾರೆ ಇದಕ್ಕೆ ಪ್ರತಿಯಾಗಿ ಸ್ಪೀಕರ್ ಅವರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಪ್ರಯಿವಾದ ಮಂಡಿಸಲಿದ್ದು ಎರಡೂ ಗುಂಪಿನ ನಡುವೆ ಕಾನೂನು ಸಮರ ನಡೆಯಲಿದೆ.

ಸ್ಪೀಕರ್ ಅವರು ತಮ್ಮ ಅರ್ಜಿಯಲ್ಲಿ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುತ್ತಿಲ್ಲ, ನಿಯಮಾವಳಿಗಳಂತೆ ನಿರ್ಧಾರ ಮಾಡಲು ಸಮಯಾವಕಾಶ ಬೇಕಾಗುತ್ತದೆ. ಮೇಲಾಗಿ ನಿಗದಿತ ಕಾಲಮಿತಿಯೊಳಗೆ ರಾಜೀನಾಮೆ ಕುರಿತು ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ತಮಗೆ ಆದೇಶ ನೀಡು ವಂತಿಲ್ಲ ಎಂದು ಪ್ರಸ್ಥಾಪಿಸಿದ್ದಾರೆ

ಇದರೊಂದಿಗೆ ರಾಜೀನಾಮೆ ನೀಡಿರುವ ಶಾಸಕರ ಅನರ್ಹತೆ ಗೊಳಿಸುವ ದೂರಿನ ವಿಚಾರಣೆ ಸಹ ನಡೆಸಬೇಕಾಗಿದೆ ಎಂದೂ ವಾದ ಮಾಂಡಿಸಲಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಸ್ಪೀಕರ್ ಅವರು ನಿನ್ನೆ ಅತೃಪ್ತರ ರಾಜೀನಾಮೆಗಳನ್ನ ಖುದ್ದಾಗಿ ಸ್ವೀಕರಿಸಿದ್ದಾರೆ. ಆದರೆ ಅವುಗಳನ್ನು ಅಂಗೀಕರಿಸುವ ಇಲ್ಲವೇ ತಿರಸ್ಕರಿಸುವ ನಿರ್ದಾರಕ್ಕೆ ಕಾಲಾವಕಾಶ ದ ಅಗತ್ಯತೆ ಇದೆ ಎಂದು ಅಭಿಪ್ರಾಯ ನಿನ್ನೆ ಸುದ್ದಿಗೋಷ್ಟಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಕೋರ್ಟಗೆ ರಾಜೀನಾಮೆ ಕುರಿತು ಮಾಹಿತಿಯನ್ನು ವರದಿ ರೂಪದಲ್ಲಿ ನೀಡಲಾಗುವುದೆಂದು ತಿಳಿಸಿದ್ದರು.

Conclusion:ಸ್ಪೀಕರ್ ಮತ್ತು ಬಂಡಾಯ ಶಾಸಕರ ನಿಲುವಿನಿಂದ ರಾಜೀನಾಮೆ ಅಂಗೀಕಾರ ಪ್ರಹಸನ ತೀವ್ರ ಕುತೂಹಲ ಘಟ್ಟ ಪಡೆದಿದೆ. ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಆದೇಶಿಸಿದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಸಂಕಷ್ಟಕ್ಕೆ ಸಿಲುಕಲಿದೆ.ಹಾಗೆಯೇ ಸ್ಪೀಕರ್ ಗೆ ಕಾಲಾವಕಾಶ ನೀಡಿದರೆ ಸದ್ಯಕ್ಕೆ ಅಪಾಯದಿಂದ ಸರಕಾರ ಪಾರಾಗಲಿದೆ. ಆಡಳಿತ ಪಕ್ಷಗಳು ಹಾಗು ಪ್ರತಿಪಕ್ಷಗಳು ವಿಧಾನ ಮಂಂಡಳ ಅಧಿವೇಶನ ಆರಂಭವಾಗುವ ಇಂದು ಕೋರ್ಟನಲ್ಲಿ ನಡೆಯುವ ವಿಚಾರಣೆಯನ್ನು ರಾಜಕೀಯ ತಂತ್ರಗಾರಿಕೆ ರೂಪಿಸಲು ಕುತೂಹಲದಿಂದ ಎದುರುನೋಡುತ್ತಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.