ETV Bharat / state

ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ: ಬಿಬಿಎಂಪಿ ಆಯುಕ್ತ

ಚುನಾವಣೆಯ ದಿನ ಕೊನೆಯ ಒಂದು ಗಂಟೆ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮತ್ತು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ತಿಳಿಸಿದ್ದಾರೆ.

vote chance give to corona patients, vote chance give to corona patients in election day, vote chance give to corona patients news, by poll, by poll 2020, by poll 2020 news, RR Nagar by election, Sira by Election,  ಕೋವಿಡ್ ಸೋಂಕಿತರಿಗೆ ಮತದಾನ,  ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ  ಚುನಾವಣೆ ದಿನ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ, ಉಪ ಚುನಾವಣೆ, ಉಪ ಚುನಾವಣೆ 2020, ಉಪ ಚುನಾವಣೆ 2020 ಸುದ್ದಿ, ಆರ್​ಆರ್​ ನಗರ ಉಪ ಚುನಾವಣೆ, ಶಿರಾ ಉಪ ಚುನಾವಣೆ,
ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್ ಸುದ್ದಿಗೋಷ್ಠಿ
author img

By

Published : Oct 29, 2020, 4:22 PM IST

ಬೆಂಗಳೂರು: ಪ್ರತಿಯೊಬ್ಬರ ಮತದಾನದ ಹಕ್ಕನ್ನು ಕಾಪಾಡುವ ಸಲುವಾಗಿ ಕೋವಿಡ್ ರೋಗಿಗಳಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ‌ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಕಳೆದ 17 ದಿನದಲ್ಲಿ 1177 ಕೋವಿಡ್ ಪಾಸಿಟಿವ್ ರೋಗಿಗಳು ಇದ್ದು, ಎಲ್ಲರಿಗೂ ಮಾಸ್ಕ್ , ಫೇಸ್ ಶೀಲ್ಡ್, ಗ್ಲೌಸ್, ಪಿಪಿಇ ಕಿಟ್ ನೀಡಲಾಗಿದೆ. ಮತದಾನ ಮಾಡಲು ಇಚ್ಛಿಸುವವರಿಗೆ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಮಾಡಲಿದ್ದಾರೆ. ಅಲ್ಲದೆ ಇಂದಿನಿಂದ 3 ನೇ ತಾರೀಕಿನವರೆಗೆ ಪಾಸಿಟಿವ್ ಇರುವವರಿಗೆ ಕಂಟ್ರೋಲ್ ರೂಂನಿಂದ ಕರೆ ಮಾಡಲಾಗುತ್ತದೆ. ಮನೆಬಾಗಿಲಿಗೆ ಪಿಪಿಇ ಕಿಟ್ ಹಾಗೂ ಆಂಬುಲೆನ್ಸ್ ಹೋಗಲಿದೆ. ಮತದಾನದ ಕೊನೆಯ ಒಂದು ಗಂಟೆ ಅಂದ್ರೆ 5 ರಿಂದ 6 ಗಂಟೆಯವರೆಗೆ ಮತದಾನ ಮಾಡಿಸಿ, ವಾಪಸ್ ಮನೆಗೆ ಬಿಡಲಾಗುತ್ತದೆ ಎಂದರು.

ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್ ಸುದ್ದಿಗೋಷ್ಠಿ

9 ವಾರ್ಡ್​ಗಳಿಗೆ ತಲಾ ಹತ್ತು ಆಂಬುಲೆನ್ಸ್​ನಂತೆ 90 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. 4-30 ಕ್ಕೆ ಕೋವಿಡ್ ಪಾಸಿಟಿವ್ ವ್ಯಕ್ತಿಯ ಮನೆ ಮುಂದೆ ಆಂಬುಲೆನ್ಸ್ ಹೋಗಲಿದೆ. ಕೋವಿಡ್ ಪಾಸಿಟಿವ್​ನ ಲಕ್ಷಣ ಇರುವವರಿಗೆ ಕೂಡಾ ಬಿಬಿಎಂಪಿ ವಾಹನ ಕಳಿಸಲಿದೆ. ನಿನ್ನೆಯವರೆಗೆ ಆಸ್ಪತ್ರೆಯಲ್ಲಿ 317 ಜನ, ಮನೆಯಲ್ಲಿ 842, ಸಿಸಿಸಿ ಸೆಂಟರ್​ನಲ್ಲಿ 17 ಜನ ಕ್ವಾರಂಟೈನ್​ನಲ್ಲಿದ್ದಾರೆ. ಬೇರೆ ಮತದಾರರು ತಡವಾಗಿ ಓಟ್ ಹಾಕಲು ಬಂದ್ರೂ, ಮತಗಟ್ಟೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ಮತದಾನಕ್ಕೆ ಅವಕಾಶ ಮಾಡಲಾಗುವುದು ಎಂದರು.

ಒಟ್ಟು 695 ವಿಶೇಷ ಚೇತನರು ಹಾಗೂ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ಅವಕಾಶ ಇದ್ದು, ಪಾಲಿಕೆ ಸಿಬ್ಬಂದಿ ಮನೆಗೆ ನೀಡಿ ವಿಡಿಯೋ ಮತದಾನ ಹಾಕಿಸಿಕೊಂಡು ಕವರ್ ಒಳಗೆ ಹಾಕಿ ವಾಪಸ್ ಕೊಡಬೇಕಾಗುತ್ತದೆ. ಇದರ ಕಂಪ್ಲೀಟ್ ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ ಎಂದರು.

ಬ್ಯಾಲೆಟ್ ಯೂನಿಟ್​ನಲ್ಲಿ ಹದಿನಾರು ಹೆಸರು ಇರುವ ಅವಕಾಶ ಇದೆ. ಆದ್ರೆ ಹದಿನಾರು ಅಭ್ಯರ್ಥಿಗಳೇ ಇರೋದ್ರಿಂದ ನೋಟಾಗಾಗಿ ಇನ್ನೊಂದು ಬ್ಯಾಲೆಟ್ ಯೂನಿಟ್ ಮಾಡಲಾಗಿದೆ. ಬ್ಯಾಲೆಟ್ ಯೂನಿಟ್ ಒಂದು, ಹಾಗೂ ನೋಟಾಗಾಗಿ ಇನ್ನೊಂದು ಬ್ಯಾಲೆಟ್ ಯೂನಿಟ್ ಇರಲಿದೆ. ಮೊದಲನೆಯದ್ದರಲ್ಲಿ ಹದಿನಾರು ಅಭ್ಯರ್ಥಿಗಳ ಹೆಸರು ಹಾಗೂ ಇನ್ನೊಂದರಲ್ಲಿ ನೋಟಾ ಮತದಾನಕ್ಕೆ ಅವಕಾಶ ಇರಲಿದೆ ಎಂದು ತಿಳಿಸಿದರು.

ಒಟ್ಟು 678 ಮತಗಟ್ಟೆಗಳು 144 ಜಾಗಗಳಲ್ಲಿ ಇವೆ. ಒಟ್ಟು 88 ಕ್ರಿಟಿಕಲ್ ಮತಗಟ್ಟೆಗಳು ಇರಲಿದ್ದು, ಪೊಲೀಸ್ ಬಂದೋಬಸ್ತ್ ನೀಡಲಾಗಿದೆ‌. ಈ ಮತಗಟ್ಟೆಗಳಿಗೆ ವಿಡಿಯೋಗ್ರಾಫರ್ಸ್, ಮೈಕ್ರೋ ಅಬ್ಸರ್ವರ್ಸ್​ ಅನ್ನು ನೇಮಿಸಲಾಗಿದೆ. 4,000 ಜನ ಸಿಬ್ಬಂದಿಗೆ ಎರಡು ಹಂತದ ಚುನಾವಣಾ ತರಬೇತಿ ನೀಡಲಾಗಿದೆ. 950 ಕಂಟ್ರೋಲ್ ಯೂನಿಟ್, 950 ಬ್ಯಾಲೆಟ್ ಯೂನಿಟ್, 1117 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ ಎಂದರು.

ಮತದಾರರು ಮಾಡಬೇಕಾದ್ದು ಏನು?

ಮತದಾರರಿಗೆ ಬಲಗೈಗೆ ಕೈಗವಸು ನೀಡಲಾಗುತ್ತದೆ. ಮತದಾರರು ಮತಗಟ್ಟೆ ಮುಂದೆ ಮೂರು ಕ್ಯೂನಲ್ಲಿ ನಿಲ್ಲಬೇಕು. ಮಹಿಳೆಯರು, ಪುರುಷರು, ವಿಶೇಷ ಚೇತನರಿಗಾಗಿ ಮೂರು ಕ್ಯೂ ಇರಲಿದೆ. ಆರೋಗ್ಯ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಮುಂದೆ ಮಾರ್ಕಿಂಗ್ ಮಾಡಲಾಗಿದ್ದು, 678 ಥರ್ಮಲ್ ಸ್ಕ್ಯಾನಿಂಗ್ ಯಂತ್ರ ಕೊಡಲಾಗಿದೆ. ಈ ಸ್ಕ್ಯಾನಿಂಗ್ ಮುಗಿದ ಬಳಿಕ ಕೈ ಸ್ಯಾನಿಟೈಸ್ ಮಾಡಿ, ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು. ಓಟರ್ ಐಡಿಯನ್ನು ಪರಿಶೀಲಿಸಲು, ಮಾಸ್ಕ್ ತೆಗೆದು ಮುಖ ತೋರಿಸಬೇಕಾಗುತ್ತದೆ. ಎಡಗೈ ಮಧ್ಯ ಬೆರಳಿಗೆ ಇಂಕ್ ಹಾಕಲಾಗುತ್ತದೆ. ರಿಜಿಸ್ಟರ್​ನಲ್ಲಿ ಸಹಿ ಮಾಡಲು, ಚುನಾವಣಾ ಆಯೋಗದಿಂದ ಕೊಡಲಾಗುವುದು. ಮತದಾರರೇ ತಂದರೆ ಅದಕ್ಕೂ ಅವಕಾಶ ಇದೆ ಎಂದರು.

ಇನ್ನ ಆರ್​ಆರ್ ನಗರ ಕ್ಷೇತ್ರದಲ್ಲಿ 27 ಲಕ್ಷ ರೂ ನಗದು, 3 ಲಕ್ಷ ವೆಚ್ಚದ 209 ಲೀಟರ್ ಮದ್ಯ, 16.48 ಲೀಟರ್ ಬಿಯರ್ ಜಪ್ತಿಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.