ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಎಲ್ಲೆಡೆ ಮತದಾನ ನಡೆಯುತ್ತಿದೆ. ಬೆಳಗ್ಗೆ ಏಳರಿಂದ 11 ಗಂಟೆವರೆಗೆ ಶೇ. 6.15 ರಷ್ಟು ಮತದಾನವಾಗಿದ್ದು, ಈವರೆಗೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕ್ಷೇತ್ರದ ಮತದಾರ ಸಂತೋಷ್ ಎಂಬುವರು ವಿಶಿಷ್ಟವಾಗಿ ಮತದಾನ ಮಾಡಿದ್ದಲ್ಲದೇ, ಸೇವ್ ಡೆಮಾಕ್ರಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಭಾವಚಿತ್ರ ಹಿಡಿದು, 'ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ, ಸೇವ್ ಡೆಮಾಕ್ರಸಿ' ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಇನ್ನು, ಮತಗಟ್ಟೆಗಳಿಗೆ ದೌಡಾಯಿಸುತ್ತಿರುವ ಮತದಾರರು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಹಾಕಿ ಹಕ್ಕು ಪ್ರದರ್ಶಿಸಿದರು. ಇನ್ನು, ಇದೇ ವೇಳೆ, ಕಲ್ಕೆರೆಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಬಳಿ ದಂಪತಿ ಮತದಾನ ಮಾಡಿ ತೋರು ಬೆರಳಿಗೆ ಹಾಕಿರುವ ಶಾಯಿಯನ್ನು ತೋರುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಮನ ಸೆಳೆದರು.