ಆನೇಕಲ್: ಕಣ್ಣೆದುರು ದೈತ್ಯ ಕಾಡಾನೆ. ಆದರೂ ಹೆದರದ ಗಟ್ಟಿ ಗುಂಡಿಗೆಯ ಗೂಳಿ. ಗುಟುರು ಹಾಕಿ ಕಾಲು ಕೆದರಿ ನೀನಾ? ನಾನಾ? ಎಂದು ತೊಡೆ ತಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾಡಂಚಿನಲ್ಲಿ ಸಹಜವಾಗಿ ಮಾನವ-ವನ್ಯ ಜೀವಿಗಳ ಸಂಘರ್ಷ ಆನೇಕಲ್ ಸುತ್ತಮುತ್ತ ಸರ್ವೇ ಸಾಮಾನ್ಯ ಎಂಬಂತಿದೆ. ಆನೇಕಲ್ನ ಕಾಡಂಚಿನ ಗ್ರಾಮವೊಂದರಲ್ಲಿ ನಾಡಿಗೆ ಬಂದ ಒಂಟಿ ಸಲಗಕ್ಕೆ ಗೂಳಿಯೊಂದು ಸವಾಲು ಹಾಕಿದ ದೃಶ್ಯವಿದು.
ತಮಿಳುನಾಡು ಹಾಗೂ ಆನೇಕಲ್ ಗಡಿಗೆ ಹೊಂದಿಕೊಂಡಂತಿರುವ ಡೆಂಕಣಿಕೋಟೆಯ ಭಾಗದ ಕಾಡಂಚಿನ ಹಳ್ಳಿಗೆ ನುಗ್ಗಲು ಯತ್ನಿಸಿದ ಸಲಗಕ್ಕೆ ಗುಟುರು ಹಾಕಿ ಕಾಲ್ಕೀಳುವಂತೆ ಮಾಡಿದೆ ಈ ಗೂಳಿ.