ಬೆಂಗಳೂರು: ಬೆಂಗಳೂರು ನಗರ ಸಂಚಾರ ವಿಭಾಗದ ವತಿಯಿಂದ ಕಳೆದ ವರ್ಷ ದೋಷಪೂರಿತ ನೋಂದಣಿ ಫಲಕ ಮತ್ತು ನಂಬರ್ ಫಲಕ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ವಾಹನಗಳ ಸವಾರರ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನೋಂದಣಿ ಫಲಕ ರಹಿತ 1,535 ಹಾಗೂ ದೋಷಪೂರಿತ ನೋಂದಣಿವಿರುವ 1,13,517 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ನೋಂದಣಿ ಫಲಕಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚುವ ಮೂಲಕ ಸಂಚಾರ ನಿಯಮ ಉಲ್ಲಂಘನೆಯ ಕಾನೂನು ಜಾರಿ ಕ್ರಮವನ್ನು ವಂಚನೆ ಮಾಡುತ್ತಿದ್ದವರ ವಿರುದ್ಧ 22 ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
880 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 909 ಮಂದಿ ಮೃಪಟ್ಟಿದ್ದರು. ಮಾರಣಾಂತಿಕವಲ್ಲದ 4,095 ಅಪಘಾತ ಪ್ರಕರಣಗಳಲ್ಲಿ 4,201 ಮಂದಿ ಗಾಯಗೊಂಡಿದ್ದರು. ಸಂಪರ್ಕ ರಹಿತವಾಗಿ 87,25,321 ಪ್ರಕರಣಗಳು ದಾಖಲಾಗಿವೆ. ಸಂಪರ್ಕ ಸಹಿತವಾಗಿ 2,49,624 ಸೇರಿದಂತೆ ಸುಮಾರು 90 ಲಕ್ಷ ಸಂಚಾರ ನಿಯಮ ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 184.83 ಕೋಟಿ ದಂಡವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ 7,055 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ'' ಎಂದು ಪೊಲೀಸರು ತಿಳಿದ್ದಾರೆ.
ಇತ್ತೀಚಿನ ಪ್ರಕರಣ- ಒಂದೇ ಸ್ಕೂಟಿಯಿಂದ 643 ಬಾರಿ ಸಂಚಾರ ನಿಯಮ ಉಲ್ಲಂಘನೆ: ಸ್ಕೂಟಿಯಲ್ಲಿ ಪ್ರಯಾಣಿಸುವಾಗ ಬೆಂಗಳೂರು ನಗರದಲ್ಲಿ ಮಾಡಿದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ವಿಧಿಸಿದ ಹಣದಲ್ಲಿ ಪ್ರಾಯಶಃ ಮೂರು ದ್ವಿಚಕ್ರ ವಾಹನಗಳನ್ನ ಖರೀದಿ ಮಾಡಬಹುದಾಗಿತ್ತು. ಅಷ್ಟರ ಮಟ್ಟಿಗೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಬಹುತೇಕ ಹೆಲ್ಮೆಟ್ ರಹಿತ ಚಾಲನೆ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ 643 ಬಾರಿ ಟ್ರಾಫಿಕ್ ನಿಯಮಗಳನ್ನು ಗಾಳಿ ತೂರಿ ಸಂಚಾರ ಮಾಡಿದ್ದಾರೆ. ಟ್ರಾಫಿಕ್ ವೈಯಲೇಷನ್ ಕೇಸ್ಗಳಿಂದ 643 ಪ್ರಕರಣ ದಾಖಲಿಸಲಾಗಿದ್ದು, 3.22 ಲಕ್ಷ ರೂ. ದಂಡ ಹಾಕಲಾಗಿದೆ. KA04 KF9072 ನಂಬರ್ನ ಸ್ಕೂಟಿಯಿಂದ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಗಂಗಾ ನಗರದ ನಿವಾಸಿಯೊಬ್ಬರ ಹೆಸರಿನಲ್ಲಿದ್ದ ದ್ವಿಚಕ್ರ ವಾಹನ ಇದಾಗಿದೆ. ಕಳೆದ 2 ವರ್ಷಗಳಿಂದ ಇದೇ ಸ್ಕೂಟಿ ಚಲಾಯಿಸಿದ ಬೇರೆ ಬೇರೆ ವ್ಯಕ್ತಿಗಳು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಪೊಲೀಸರು ರಸ್ತೆಯಲ್ಲಿ ನಿಂತು ದಂಡ ವಸೂಲಿ ಅಥವಾ ಪ್ರಕರಣ ದಾಖಲಿಸುವುದಕ್ಕೆ ತಿಲಾಂಜಲಿ ಹಾಕಿದ್ದಾರೆ. ನಗರದ ಬಹುತೇಕ ಜಂಕ್ಷನ್ಗಳಲ್ಲಿ ಅಳವಡಿಸಿದ ಅತ್ಯಾಧುನಿಕ ಕ್ಯಾಮರಾಗಳಲ್ಲಿ ನಿಯಮ ಉಲ್ಲಂಘಿಸಿದವರ ಭಾವಚಿತ್ರ ಸೆರೆ ಹಿಡಿದು, ಇದರ ಆಧಾರದ ಮೇರೆಗೆ ಡಿಜಿಟಲ್ ಕೇಸ್ಗಳನ್ನ ದಾಖಲಿಸಿಕೊಳ್ಳಲಾಗುತ್ತಿದೆ. ಆರ್.ಟಿ. ನಗರ, ತರಳುಬಾಳು ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ 643 ಬಾರಿ ಸಂಚಾರ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬ ತಿಳಿದಿದೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ ಬರಬಾರದು ಎನ್ನುವುದು ಎಷ್ಟು ಸರಿ?: ಮಾಜಿ ಡಿಸಿಎಂ ಲಕ್ಷ್ಮಣ ಸವದಿ