ETV Bharat / state

ವಿನಯ್ ಕುಲಕರ್ಣಿ ಆರೋಪಿ ಮಾತ್ರ.. ಅಪರಾಧಿಯಲ್ಲ; ಸ್ವಾಮೀಜಿ

ಸಿಬಿಐ ತಂಡ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಅವರು, ಉತ್ತಮ ಮನೆತನದ ವ್ಯಕ್ತಿಯಾಗಿದ್ದು, ಮಾಜಿ ಸಚಿವರಾಗಿ ಕೆಲಸ ಮಾಡಿದವರು. ನೊಟೀಸ್ ನೀಡದೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸಮಾಜಕ್ಕೆ ನೋವು ತಂದಿದೆ. ಇದನ್ನು ಪಂಚಮಸಾಲಿ ಸಮುದಾಯ ತೀರ್ವವಾಗಿ ಖಂಡಿಸುತ್ತದೆ ಎಂದರು.

Vinay Kulkarni may be accused... But, he is not yet proved guilty: Sri Basava Jayamruthyunjaya swamiji
ವಿನಯ್ ಕುಲಕರ್ಣಿ ಮೇಲೆ ಆರೋಪವಿರಬಹುದು... ಆದರೆ, ಅವರು ಅಪರಾಧಿಯಲ್ಲ: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Nov 5, 2020, 8:00 PM IST

ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಮೇಲೆ ಆರೋಪವಿರಬಹುದು. ಆದರೆ, ಅವರು ಅಪರಾಧಿಯಲ್ಲ. ಅವರ ರಾಜಕೀಯ ಭವಿಷ್ಯ ನಾಶ ಮಾಡಲು ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಪಂಚಮಸಾಲಿ ಮಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ವಿನಯ್ ಕುಲಕರ್ಣಿ ಮೇಲೆ ಆರೋಪವಿರಬಹುದು... ಆದರೆ, ಅವರು ಅಪರಾಧಿಯಲ್ಲ: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಬಿಐ ತಂಡ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆದೊಯ್ದಿದೆ. ಅವರು, ಉತ್ತಮ ಮನೆತನದ ವ್ಯಕ್ತಿಯಾಗಿದ್ದು, ಮಾಜಿ ಸಚಿವರಾಗಿ ಕೆಲಸ ಮಾಡಿದವರು. ನೊಟೀಸ್ ನೀಡದೆ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸಮಾಜಕ್ಕೆ ನೋವು ತಂದಿದೆ. ಇದನ್ನು ಪಂಚಮಸಾಲಿ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.

ದ್ವೇಷದ ರಾಜಕೀಯ ಧಾರವಾಡದಲ್ಲಿದೆ. ಸಿಎಂ ಅವರು ನಮ್ಮ ಸಮುದಾಯದವರೇ. ಆದರೆ, ನಮ್ಮ ಸಮುದಾಯದವರ ಮೇಲೆಯೇ ಈ ರೀತಿ ನಡೆದಿದೆ. ನೊಟೀಸ್ ನೀಡದೆ ಅವರನ್ನು ವಶಕ್ಕೆ ಪಡೆದಿದ್ದು ಹೇಗೆ? ವಿನಯ್ ಕುಲಕರ್ಣಿ ಜೊತೆ ನಾವು ನಿಲ್ಲುತ್ತೇವೆ. ಅವರ ಕುಟುಂಬದ ಪರವಾಗಿ ನಾವು ಇರುತ್ತೇವೆ. ಆರೋಪ ಬರುವುದು ಸಹಜ. ಆದರೆ, ಸತ್ಯ ಒಂದಲ್ಲ ಒಂದು ದಿನ ಹೊರಬರುತ್ತೆ. ವಿನಯ್ ಕುಲಕರ್ಣಿ ಮೇಲೆ ತೇಜೋವಧೆ ಮಾಡಲಾಗುತ್ತಿದೆ ಎಂದರು.

ಸಿಬಿಐ ಅಂದರೆ ಸತ್ಯಶೋಧನಾ ತಂಡ. ಅವರಿಗೆ ವಿಚಾರಣೆ ಮಾಡಲು ಮುಕ್ತ ಅವಕಾಶವಿದೆ. ಆದರೆ, ರೌಡಿಗಳ ರೀತಿ ಅವರನ್ನು ಎಳೆದೊಯ್ದಿದ್ದಾರೆ. ಇದು ಸರಿಯಲ್ಲ ಎನ್ನೋದು ನನ್ನ ಅಭಿಪ್ರಾಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.